ತಿರುಪತಿ ತಿಮ್ಮಪ್ಪನ ಸನ್ನಿಧಿಯಿಂದ ಪಾರಾಗಿ ಬಂದ್ರು ನಟಿ ತಾರಾ!

ಆಂಧ್ರಪ್ರದೇಶದಲ್ಲಿ ಮಳೆಯ ಅಬ್ಬರ ಜೋರಾಗಿದೆ. ತಿರುಮಲ ತಿರುಪತಿಯಲ್ಲಿ ಭಾರಿ ಮಳೆಯ ಕಾರಣ, ಎರಡು ದಿನ ಭಕ್ತರಿಗೆ ದೇವರ ದರ್ಶನವನ್ನು ಬಂದ್ ಮಾಡಲಾಗಿದೆ. ತಿರುಪತಿ ಘಾಟ್ ರಸ್ತೆಗೆ ಹಾನಿಯಾಗಿದ್ದು, ಬೆಟ್ಟಕ್ಕೆ ಹೋಗುವ ರಸ್ತೆಯನ್ನು ಟಿಟಿಡಿ ದುರಸ್ತಿಗೊಳಿಸುತ್ತಿದೆ. ತಿರುಪತಿಯಂತೂ ಅಕ್ಷರಶಃ ನದಿಯಂತಾಗಿದೆ. ಎಲ್ಲಿ ನೋಡಿದರೂ ಬರೀ ನೀರು, ಭಾರಿ ಜಲಪಾತಗಳೇ ತಿರುಮಲ ಬೆಟ್ಟದಲ್ಲಿ ಸೃಷ್ಟಿಯಾಗಿವೆ. ತಿರುಪತಿ, ತಿರುಮಲದ ವಸ್ತುಸ್ಥಿತಿ ತೋರುವ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಸಮಯದಲ್ಲಿ ಕನ್ನಡದ ಹಿರಿಯ ನಟಿ ತಾರಾ ಕೂಡ ತಿರುಪತಿಯಲ್ಲೇ ಇದ್ದರು. ಈಗ ಅವರು ಕ್ಷೇಮವಾಗಿ ಬೆಂಗಳೂರಿಗೆ ಮರಳಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.
‘ನಮ್ಮ ಪರಿಚಯದವರು ಕರೆ ಮಾಡಿ ನಾನೊಂದು ಹೋಟೆಲ್‌ಗೆ ಹೇಳಿದ್ದೇನೆ ಅಲ್ಲಿಗೆ ಹೋಗಿ ಇದ್ದುಬಿಡಿ ಎಂದರು. ಅಂತೆಯೇ ನಾವು ಹೋಟೆಲ್‌ಗೆ ಹೋಗೋಣವೆಂದು ಹೊರಟರೆ ನೀರಿನ ಸೆಳೆತ ಹೆಚ್ಚಾಗಿ ಕಾರು ನಿಯಂತ್ರಣ ತಪ್ಪಿತು, ನಮಗೆಲ್ಲ ಆತಂಕ, ತೀವ್ರ ಭಯ ಕಾಡಲು ಆರಂಭಿಸಿತು. ‘ಎಲ್ಲಿಯಾದರೂ ಸೇಫ್ ಆದ ಜಾಗದಲ್ಲಿ ಕಾರು ನಿಲ್ಲಿಸಿ ಸಾಕು’ ಎಂದು ಡ್ರೈವರ್‌ಗೆ ಹೇಳಿದೆ. ಅವರು ಕಷ್ಟಪಟ್ಟು ಓಡಿಸಿ ಎಲ್ಲೆಲ್ಲಿಯೋ ಸುತ್ತು ಹಾಕಿ ಕೊನೆಗೆ ಒಂದು ಸುರಕ್ಷಿತವಾದ ಸ್ಥಳಕ್ಕೆ ತಂದು ನಿಲ್ಲಿಸಿದರು. ಆ ನಂತರ ಗೊತ್ತಾಯಿತು ಅದು ಬೆಂಗಳೂರು ಹೈವೆ ಎಂದು. ದೇವರೇ ನಮ್ಮನ್ನು ಇಲ್ಲಿಗೆ ಕರೆತಂದಿದ್ದಾನೆ ಎಂದು ಕೊಂಡು ಹೆಚ್ಚು ತಡ ಮಾಡದೆ ಅದೇ ಹಾದಿ ಹಿಡಿದು ಬೆಂಗಳೂರಿನತ್ತ ಬಂದು ಬಿಟ್ಟೆವು” ಎಂದಿದ್ದಾರೆ ತಾರಾ.
****