News

“ಸಂತೋಷ್‌”ನಿಂದ “ತ್ರಿವೇಣಿ” ಚಿತ್ರಮಂದಿರಕ್ಕೆ “ಸಲಗ “ತಾಂತ್ರಿಕ ಸಮಸ್ಯೆಯಿಂದ ಮುಖ್ಯ ಚಿತ್ರಮಂದಿರ ಶಿಫ್ಟ್..!

“ಸಂತೋಷ್‌”ನಿಂದ “ತ್ರಿವೇಣಿ” ಚಿತ್ರಮಂದಿರಕ್ಕೆ “ಸಲಗ “ತಾಂತ್ರಿಕ ಸಮಸ್ಯೆಯಿಂದ ಮುಖ್ಯ ಚಿತ್ರಮಂದಿರ ಶಿಫ್ಟ್..!
  • PublishedOctober 12, 2021

ಸ್ಯಾಂಡಲ್ ವುಡ್ ನಲ್ಲಿ ಸಲಗ ಹವಾ ಜೋರಾಗಿದೆ. ಸಲಗ ನಡೆದಿದ್ದೆ ದಾರಿ ಆದರೆ ಸಂತೋಷ್ ಚಿತ್ರ ಮಂದಿರದ ತಾಂತ್ರಿಕ ಸಮಸ್ಯೆ ಬಗೆಹರಿಯದ ಕಾರಣ ಕೊನೆ ಕ್ಷಣದಲ್ಲಿ  ಸಲಗ ಮಾರ್ಗ ಬದಲಿಸುವಂತೆ ಮಾಡಿದೆ.

ಅಂದರೆ ಮುಖ್ಯ ಚಿತ್ರಮಂದಿರಗಳಲ್ಲಿ ಒಂದಾದ ಸಂತೋಷ್ ಚಿತ್ರಮಂದಿರದಲ್ಲಿ ದುನಿಯಾ ವಿಜಯ್ ನಿರ್ದೇಶನದ ಸಲಗ ಚಿತ್ರ ಅಕ್ಟೋಬರ್ 14ಕ್ಕೆ ರಿಲೀಸ್ ಆಗಬೇಕಿತ್ತು ಆದರೆ ಸಂತೋಷ್ ಥಿಯೇಟರ್ ನಲ್ಲಿ ಕಳೆದ ಮೂರು ತಿಂಗಳಿಂದ ತಾಂತ್ರಿಕ ದೋಷ ಉಂಟಾಗಿದ್ದು ಅದನ್ನು ಇನ್ನೂ ಸರಿಪಡಿಸಲಾಗದ ಕಾರಣ ಸಲಗ ಸಿನಿಮಾವನ್ನು ಮತ್ತೊಂದು ಮುಖ್ಯ ಚಿತ್ರಮಂದಿರವಾದ ಕೆ.ಜಿ.ರಸ್ತೆಯಲ್ಲಿರೋ ತ್ರಿವೇಣಿ ಚಿತ್ರಮಂದಿರಕ್ಕೆ ಶಿಫ್ಟ್ ಮಾಡಲಾಗಿದೆ.

ನಿನ್ನ ಸನಿಹಕೆ ಚಿತ್ರಕ್ಕೂ ಇದೇ ರೀತಿ ಅಡಚಣೆ ಉಂಟಾಗಿ ಚಿತ್ರ ತಂಡಕ್ಕೆ ಭಾರಿ ನಿರಾಸೆಯಾಗಿತ್ತು, ಈಗ ಸಲಗ ಚಿತ್ರಕ್ಕೂ ಅದೇ ರೀತಿ ಆಗಿದೆ ಆದರೆ ಚಿತ್ರ ಬಿಡುಗಡೆಗೆ ಇನ್ನೂ ಎರಡು ದಿನ ಕಾಲಾವಕಾಶ ಇರುವುದರಿಂದ ಚಿತ್ರ ತಂಡ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಂಡಿದೆ.

ತ್ರಿವೇಣಿ ಚಿತ್ರಮಂದಿರ ತಾಂತ್ರಿಕವಾಗಿ ನವೀಕರಣಗೊಂಡಿದ್ದು, 4K ಡಾಲ್ಬಿ ಅಟ್ಮಾಸ್ ಸೌಂಡಿಂಗ್ ಸಿಸ್ಟಮ್ ನ ಅಳವಡಿಸಲಾಗಿದೆ. 14ನೇ ತಾರೀಖು‌ ತ್ರಿವೇಣಿ ಚಿತ್ರಮಂದಿರದಲ್ಲಿ ಸಲಗ ಚಿತ್ರ ರಿಲೀಸ್ ಆಗ್ತಿದೆ. ಸಲಗ ಅಭಿಮಾನಿಗಳ‌ ಸಂಭ್ರಮ ಸಡಗರ ಎಲ್ಲವೂ ತ್ರಿವೇಣಿ ಚಿತ್ರಮಂದಿರದ ಆವರಣದಲ್ಲೇ ನಡೆಯಲಿದೆ.

****

Written By
Kannadapichhar

Leave a Reply

Your email address will not be published. Required fields are marked *