News

ಸ್ಯಾಂಡಲ್ ವುಡ್ ಕ್ವೀನ್ ‘ರಮ್ಯಾ’ ಗೆ ಹುಟ್ಟುಹಬ್ಬದ ಸಂಭ್ರಮ!

ಸ್ಯಾಂಡಲ್ ವುಡ್ ಕ್ವೀನ್  ‘ರಮ್ಯಾ’ ಗೆ ಹುಟ್ಟುಹಬ್ಬದ ಸಂಭ್ರಮ!
  • PublishedNovember 29, 2021

ಸ್ಯಾಂಡ ಲ್‍ ವುಡ್ ನಟಿ ಮೋಹಕತಾರೆ ರಮ್ಯಾ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದಂದು ರಮ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ವಯಸ್ಸನ್ನು ಬಹಿರಂಗ ಪಡಿಸಿದ್ದಾರೆ.

ಚಂದನವನದಲ್ಲಿ ಹಲವು ಸ್ಟಾರ್ ನಟರೊಂದಿಗೆ ಅಭಿನಯಿಸುವ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ರಮ್ಯಾ ಅವರು ಅಂದು ಎಷ್ಟು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೋ, ಇಂದಿಗೂ ಅಷ್ಟೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿಯೂ ಬಣ್ಣಹಚ್ಚಿರುವ ರಮ್ಯಾ ವಯಸ್ಸು ಎಷ್ಟೇ ಆದರೂ ಇನ್ನೂ ಟೀನೆಜ್ ಹುಡುಗಿಯಂತೆ ಇದ್ದಾರೆ.

ಒಂದು ದಶಕದಲ್ಲಿ ಸ್ಯಾಂಡಲ್‍ ವುಡ್‍ ನ ಟಾಪ್ ನಟಿಯಾಗಿ ಮಿಂಚಿದ್ದ ರಮ್ಯಾ ಇಂದು 40ನೇ ವಸಂತಕ್ಕೆ ಕಾಲಿಟ್ಟಿದ್ದು, ಇದೇ ಖುಷಿಯಲ್ಲಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದು, ಶುಭಾಶಯ ತಿಳಿಸಿದ ಪ್ರೀತಿಯ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಫೋಟೋದಲ್ಲಿ ರಮ್ಯಾ ಮಾಸ್ಕ್ ಧರಿಸಿರುವುದನ್ನು ಕಾಣಬಹುದಾಗಿದೆ. ಜೊತೆಗೆ ನನಗೆ ಶುಭಾ ಕೋರಿದ ಎಲ್ಲರಿಗೂ ಧನ್ಯವಾದಗಳು. ಸದ್ಯ ಅಟ್ಲಾಂಟಿಕ್ ಸಾಗದಲ್ಲೆಲ್ಲೋ ಇದ್ದೇನೆ. ತುಂಬಾ ಸುಸ್ತಾಗುತ್ತಿದೆ. ನಿದ್ರೆ ಬರುತ್ತಿದೆ. ಆದರೂ 39 ವರ್ಷ ಕಳೆದುಹೋಗಿದ್ದಕ್ಕೆ ಖುಷಿಯಿದೆ. ಎಲ್ಲರೂ ಸುರಕ್ಷಿತವಾಗಿರಿ. ಮಾಸ್ಕ್ ಧರಿಸಿ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

****

Written By
Kannadapichhar

Leave a Reply

Your email address will not be published. Required fields are marked *