News

ಫಿಲ್ಮ್ ಚೇಬಂರ್ ತೀರ್ಮಾನಕ್ಕೆ ಬದ್ದ: : ಡಾ.ಶಿವರಾಜಕುಮಾರ್

ಫಿಲ್ಮ್ ಚೇಬಂರ್ ತೀರ್ಮಾನಕ್ಕೆ ಬದ್ದ: : ಡಾ.ಶಿವರಾಜಕುಮಾರ್
  • PublishedDecember 25, 2021

ಡಿ.31ರಂದು ನಡೆಯುವ ಬಂದ್ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ನಟ ಶಿವರಾಜ್‍ಕುಮಾರ್ , ನಾವು ಯಾವತ್ತಿದ್ದರೂ ಕನ್ನಡ ನೆಲ, ಜಲ, ಭಾಷೆಯ ರಕ್ಷಣೆ ಮಾಡಲು ಬದ್ಧರಾಗಿರುತ್ತೇವೆ. ಅದು ಅಲ್ಲದೇ ಈ ಕುರಿತು ಸರ್ಕಾರ ತೀರ್ಮಾನ ತೆಗೆದುಕೊಂಡಿರುವುದು ನಮಗೆ ಸಂತಸ ತಂದಿದೆ ಎಂದರು.

ಚೇಂಬರ್ ಏನು ಹೇಳುತ್ತೆ ಅದೇ ರೀತಿ ನಾವು ನಡೆದುಕೊಳ್ಳುತ್ತೇವೆ. ನಾವು ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಡಿ.31 ಅಲ್ಲಿ ನಮ್ಮ ಕನ್ನಡದಲ್ಲಿ ಮೂರು ಸಿನಿಮಾಗಳು ಬಿಡುಗಡೆಯಾಗುತ್ತಿದೆ. ಅದಕ್ಕೆ ನಮ್ಮ ಕನ್ನಡ ಸಿನಿಮಾಗಳಿಗೆ ಯಾವ ರೀತಿಯ ದ್ರೋಹ ಆಗಬಾರದು. ಈ ಒಂದು ಸಮಸ್ಯೆಯನ್ನು ನಾವು ಬಹಳ ಬುದ್ಧಿವಂತಿಕೆಯಿಂದ ಸರಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಚಲನಚಿತ್ರ ವಾಣಿಜ್ಯ ಮಂಡಳಿ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧ ಎಂದು ನಟ ಶಿವರಾಜ್‍ಕುಮಾರ್ ತಿಳಿಸಿದರು.ಈ ಕುರಿತು ಜವಾಬ್ದಾರಿಯನ್ನು ತೆಗೆದುಕೊಳ್ಳುವವರು ತುಂಬಾ ಜನ ಇದ್ದಾರೆ. ಈ ಕುರಿತು ಅವರು ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಎಲ್ಲರಿಗೂ ಅವರ ಭಾಷೆ, ನಾಡಿನ ಮೇಲೆ ಪ್ರೀತಿ, ಗೌರವ ಇದ್ದೇ ಇರುತ್ತೆ. ನಾವೆಲ್ಲರೂ ಕನ್ನಡಿಗರು ಎಂದರು.

****

Written By
Kannadapichhar

Leave a Reply

Your email address will not be published. Required fields are marked *