News

ಡಿಸೆಂಬರ್ 10ಕ್ಕೆ ‘ಅವತಾರ‌ ಪುರುಷ’ನ ರಿಲೀಸ್

ಡಿಸೆಂಬರ್ 10ಕ್ಕೆ ‘ಅವತಾರ‌ ಪುರುಷ’ನ ರಿಲೀಸ್
  • PublishedOctober 28, 2021

ಕೆ.ಜಿ.ಎಫ್ ನಂತೆ ಎರಡು ಭಾಗಗಳಲ್ಲಿ‌ ಅವತಾರ ಪುರುಷನ ಆಗಮನ. ತನ್ನ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದಂತಹ ನಟ ಶರಣ್ ವೃತ್ತಿ ಬದುಕಿನ ಅತಿ ಹೆಚ್ಚು ಬಜೆಟ್ ನ ಚಿತ್ರ. ಭರ್ಜರಿ‌ ರಿಲೀಸ್ ಮಾಡಲು ತಂಡ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಸಿಂಪಲ್ ಸುನಿ ನಿರ್ದೇಶನದ ಕಾಮಿಡಿ ಕಿಂಗ್ ಅಧ್ಯಕ್ಷ ಶರಣ್ ಅಭಿನಯದ ‘ಅವತಾರ ಪುರುಷ’ ಚಿತ್ರ ಡಿಸೆಂಬರ್ 10 ಕ್ಕೆ ರಿಲೀಸ್ ಆಗ್ತಿದೆ. ಸಸ್ಪೆನ್ಸ್ ಥ್ರಿಲ್ಲಿಂಗ್ ಇರುವ ಚಿತ್ರದಲ್ಲಿ ಶರಣ್ ಅವರನ್ನು ಹಿಂದೆಂದೂ ಕಾಣದ ರೀತಿಯಲ್ಲಿ ಮತ್ತು ಹೊಸ ಅವತಾರದಲ್ಲಿ ಕಾಣಬಹುದಾಗಿದೆ. ಮುಖ್ಯವಾಗಿ ಸಿಕ್ಕಾಪಟ್ಟೆ ಶಾಕ್‌ನೊಂದಿಗೆ ಭಯಮೂಡಿಸುವಂತಹ ಬ್ಲ್ಯಾಕ್ ಮ್ಯಾಜಿಕ್ ಚಿತ್ರಕಥೆ ಈ ಚಿತ್ರದಲ್ಲಿದೆ.

ಶರಣ್‌ ನಟನೆಯ ‘ಅವತಾರ ಪುರುಷ’ ಚಿತ್ರ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ‘ಅವತಾರ ಪುರುಷ 1’ ಮತ್ತು ‘ಅವತಾರ ಪುರುಷ 2’ ಹೆಸರಿನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಆದರೆ, ಚಿತ್ರದ ಟ್ಯಾಗ್‌ ಲೈನ್  ಮಾತ್ರ ಬೇರೆ ಬೇರೆ ಇಡಲಾಗುತ್ತಿದೆ. ಮೊದಲ ಭಾಗಕ್ಕೆ ಅಷ್ಟದಿಗ್ಬಂಧನ ಮಂಡಲಕ ಹಾಗೂ ಎರಡನೇ ಪಾರ್ಟ್‌ಗೆ  ತ್ರಿಶಂಕು ಎನ್ನುವ ಟ್ಯಾಗ್‌ ಲೈನ್ ಇಡಲಾಗಿದೆ.

ಶರಣ್, ಅಶಿಕಾ ರಂಗನಾಥ್ ಸಾಯಿ‌ಕುಮಾರ್, ಸುಧಾರಾಣಿ, ಅಯ್ಯಪ್ಪ,ಭವ್ಯ, ಸಾಧುಕೋಕಿಲ, ಶ್ರೀನಗರ ಕಿಟ್ಟಿ‌ ಸೇರಿದಂತೆ ದೊಡ್ಡ ತಾರಾಗಣವಿರೋ ಚಿತ್ರವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡಿದ್ದಾರೆ.

****

Written By
Kannadapichhar

Leave a Reply

Your email address will not be published. Required fields are marked *