News

‘ರೇಮೊ’ ಚಿತ್ರದ ಫಸ್ಟ್ ಲುಕ್ ಟೀಸರ್ ಔಟ್!

‘ರೇಮೊ’ ಚಿತ್ರದ ಫಸ್ಟ್ ಲುಕ್ ಟೀಸರ್ ಔಟ್!
  • PublishedNovember 25, 2021

ಬಹು ನಿರೀಕ್ಷಿತ ಪವನ್ ಒಡೆಯರ್ ನಿರ್ದೇಶನದ , ಜಯಾದಿತ್ಯ ಫಿಲಂಸ್ ಬ್ಯಾನರ್ ನಡಿಯಲ್ಲಿ ನಿರ್ಮಾಪಕ ಸಿ.ಆರ್ ಮನೋಹರ್ ನಿರ್ಮಾಣದ ‘ರೇಮೊ’ ಚಿತ್ರದ ಫಸ್ಟ್ ಲುಕ್ ಟೀಸರ್ ಇಂದು (ನ.25) ಅದ್ದೂರಿಯಾಗಿ ಬಿಡುಗಡೆ ಆಗಿದೆ. ಸ್ಯಾಂಡಲ್ವುಡ್ ಟಾಪ್ ಡೈರೆಕ್ಟರ್- ಪ್ರಡ್ಯೂಸರ್ ಗಳಿಂದ ಫಸ್ಟ್ ಲುಕ್ ಟೀಸರ್ ಲಾಂಚ್ ಆಗಿದೆ.

ಮಲ್ಟಿ ಜಾನರ್ ಸಿನಿಮಾಗಳ ಸ್ಪೆಷಲಿಸ್ಟ್, ಟ್ರೆಂಡಿ ಲವ್ ಗೂಗ್ಲಿ ಗಳ  ಡೈರೆಕ್ಟರ್ ಪವನ್ ಒಡೆಯರ್ ನಿರ್ದೇಶನದ, ಸೌತ್ ಸಿನಿ ದುನಿಯಾದ  ದುಬಾರಿ ಚಿತ್ರಗಳ ಸರದಾರ, ಸಿ.ಆರ್ ಮನೋಹರ್ ನಿರ್ಮಾಣದ, ಅರ್ಜುನ್ ಜನ್ಯ ಸಂಗೀತ ಸಂಯೋಜನೆಯ ಮ್ಯೂಸಿಕಲ್ ಲವ್ ಸಿನಿಮಾ ‘ರೇಮೊ’ . ಗ್ರೀಕ್ ವೀರನಂತೆ ಕಂಗೊಳಿಸೋ ಅಚ್ಚ  ಕನ್ನಡದ ಪ್ರಿನ್ಸ್  ಇಶಾನ್ ನಾಯಕನಾಗಿ, ಮುಗುಳು ನಗೆ ಸುಂದ್ರಿ ಆಶಿಕಾ ರಂಗನಾಥ್ ನಾಯಕಿಯಾಗಿ, ಶರತ್ ಕುಮಾರ್, ಮಧುಬಾಲ, ಅಚ್ಯುತ್ ಕುಮಾರ್, ರಾಜೇಶ್ ನಟರಂಗ ಹೀಗೆ ದೊಡ್ಡ ತಾರಾಬಳಗವಿರೋ, ಅದ್ಧೂರಿ ನಿರ್ಮಾಣವಿರೋ ಸಿನಿಮಾ ರೇಮೊ. ಆರಂಭದಿಂದ್ಲೇ ಹಲವು ವಿಶಿಷ್ಠ ವಿಚಾರಗಳಿಗೆ ಕುತೂಹಲ ಹುಟ್ಟಿಸಿದ್ದ ಈ ಚಿತ್ರದ ಫಸ್ಟ್ ಲುಕ್  ಟೀಸರ್ ಇಂದು ಬಿಡುಗಡೆ ಆಗಿದೆ.

‘ರೇಮೊ’ ಫಸ್ಟ್ ಲುಕ್ ಟೀಸರ್ ಲಾಂಚ್ ವೇಳೆ ನಿರ್ಮಾಪಕರಾದ ಉಮಾಪತಿ, ಕೆ.ಮಂಜು, ಫಿಲ್ಮ್ ಚೇಂಬರ್ ನ ಮಾಜಿ ಅಧ್ಯಕ್ಷರಾದ ಸಾರಾ.ಗೋವಿಂದು, ಸಿ.ಆರ್.ಮನೋಹರ್, ನಿರ್ದೇಶಕರಾದ ಯೋಗರಾಜ್ ಭಟ್, ಪವನ್ ಒಡೆಯರ್, ಚಿತ್ರದ ನಾಯಕ ಇಶಾನ್, ನಾಯಕಿ ಆಶಿಕಾ ರಂಗನಾಥ್, ಪೋಷಕ ನಟ ರಾಜೇಶ್  ಮತ್ತು ಅಪೇಕ್ಷಾ ಪುರೋಹಿತ್ ಹಾಜರಿದ್ದರು.

ರೇವಂತ್ ರೇ, ಮೋಹನಳಾ ಮೋ., ಎರಡು ಹೆಸರಿನ ಮೊದಲ ಅಕ್ಷರದಿಂದ ರೇಮೊ ಸಿನಿಮಾ ಟೈಟಲ್ ಫಿಕ್ಸ್ ಮಾಡಲಾಗಿದ್ದು, ಚಿತ್ರದ ನಾಯಕ ಇಶಾನ್ ವೆಸ್ಟ್ರನ್ ರಾಕ್ ಸ್ಟಾರ್ ಪಾತ್ರದಲ್ಲಿ, ನಾಯಕಿ ಆಶಿಕಾ ರಂಗನಾಥ್ ಕ್ಲಾಸಿಕಲ್ ಸಿಂಗರ್ ಆಗಿ ಕಾಣಿಸಿಕೊಂಡಿದ್ದಾರೆ. ಟೀಸರ್ ನಲ್ಲಿ ಇಶಾನ್ ಸಕತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದು ಆಶಿಕಾ ಕೂಡ ಮುದ್ದಾಗಿ ಕಾಣುತ್ತಿದ್ದಾರೆ.

ವೈದಿ, ರೇಮೊ ಚಿತ್ರದ ಛಾಯಾಗ್ರಹಕರಾಗಿ ಕೆಲಸ ಮಾಡಿದ್ದಾರೆ, ಗೂಗ್ಲಿ, ರಣವಿಕ್ರಮ, ನಟಸಾರ್ವಭೌಮ  ಹಿಂದಿನ ಕಣ್ಣು, ಪವನ್ ಒಡೆಯರ್  ಜೊತೆಗಿದು ಇವ್ರಿಗೆ ಇದು ನಾಲ್ಕನೇ ಸಿನಿಮಾ. ರೇಮೊ ಮೂಲಕ ಮತ್ತೊಮ್ಮೆ ಮತ್ತೊಂದು ಅದ್ಭುತ ದೃಶ್ಯಕಾವ್ಯವನ್ನ ತಮ್ಮ  ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿದ್ದಾರೆ. ಕನ್ನಡ ಚಿತ್ರರಂಗದ ಮೋಸ್ಚ್ ಡಿಮ್ಯಾಂಡಿಂಗ್ ಅಂಡ್ ಕಮಾಂಡಿಂಗ್ ಎಡಿಟರ್ ಕೆ.ಎಂ  ಪ್ರಕಾಶ್ ಅವ್ರು ರೇಮೊ ಚಿತ್ರದ ಎಡಿಟರ್, ಇರ್ಮಾನ್ ಮಾಸ್ಟರ್ . ಹಾಗೂ ಭೂಷಣ್ ಮಾಸ್ಟರ್ ರೇಮೊ ಚಿತ್ರದ ಕೊರಿಯೋಗ್ರಫರ್ಸ್,  ಕನ್ನಡ ಚಿತ್ರರಂಗದ ಡಿಫರೆಂಟ್ ಫೈಟ್ ಮಾಸ್ಟರ್, ಡಿಫರೆಂಟ್ ಡ್ಯಾನಿ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ  ಸಾಹಸ ನಿರ್ದೇಶಕ ವಿಕ್ರಮ್ ಮೊರೆಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದಾರೆ, ಅಪೇಕ್ಷ  ಪುರೋಹಿತ್ ಈ ಚಿತ್ರದ ಕಾಸ್ಟ್ಯೂಮ್ ಹಾಗೂ ಸ್ಟೈಲ್ ಡಿಸೈನರ್ . ಈ ಚಿತ್ರದ ಮೇಲೆ ಉದ್ಯಮದಲ್ಲಿ  ಹಾಗೂ ಕನ್ನಡ ಸಿನಿಪ್ರಿಯರಲ್ಲಿ ವಿಶೇಷ ಕುತೂಹಲ ಹುಟ್ಟಿಸಿದೆ. ‘ರೇಮೊ’ ಚಿತ್ರವನ್ನು ಹೊಸ ವರ್ಷಕ್ಕೆ ಬಿಡುಗಡೆ ಮಾಡುವ ತಯಾರಿಯಲ್ಲಿದೆ ಚಿತ್ರ ತಂಡ.

****

Written By
Kannadapichhar

Leave a Reply

Your email address will not be published. Required fields are marked *