News

ರಿಲೀಸ್ ಆದ ಐದೇ ದಿನಕ್ಕೆ ಕೋಟಿಗೊಬ್ಬ 3 ಕಲೆಕ್ಷನ್ ಎಷ್ಟು ಗೊತ್ತಾ..?

ರಿಲೀಸ್ ಆದ ಐದೇ ದಿನಕ್ಕೆ ಕೋಟಿಗೊಬ್ಬ 3 ಕಲೆಕ್ಷನ್ ಎಷ್ಟು ಗೊತ್ತಾ..?
  • PublishedOctober 20, 2021

ಕೆಲವು ವಿಘ್ನಗಳ ನಂತರ ಕೋಟಿಗೊಬ್ಬ 3’ ಘೋಷಿಸಿದ ದಿನದಂದು ಬಿಡುಗಡೆಯಾಗಿರಲಿಲ್ಲ. ಆದರೆ ನಂತರ ಬಿಡುಗಡೆಯಾಗಿದ್ದ ಚಿತ್ರ ಬಾಕ್ಸಾಫೀಸ್​ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದರೂ, ಅಭಿಮಾನಿಗಳು ಚಿತ್ರವನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇದು ಚಿತ್ರದ ಕಲೆಕ್ಷನ್​ಗೆ ಬಹುದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಇದೀಗ ಕೋಟಿಗೊಬ್ಬ 3’ ಚಿತ್ರದ ಬಾಕ್ಸಾಫೀಸ್ ಗಳಿಕೆಯ ಲೆಕ್ಕಾಚಾರ ಹೊರಬಿದ್ದಿದೆ. ನಟ ಕಿಚ್ಚ ಸುದೀಪ್ ಸ್ವತಃ ಟ್ವಿಟರ್​ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಆ ಪ್ರಕಾರ ಚಿತ್ರವು ಕೇವಲ ನಾಲ್ಕು ದಿನದಲ್ಲಿ ₹ 40.5 ಕೋಟಿಗೂ ಅಧಿಕ ಹಣವನ್ನು ಬಾಚಿಕೊಂಡಿದೆ.

ವೀಕೆಂಡ್ ಹಾಗೂ ಸಾಲು ಸಾಲು ರಜೆಗಳಿದ್ದ ಪರಿಣಾಮ ‘ಕೋಟಿಗೊಬ್ಬ 3’ ಚಿತ್ರದ ಕಲೆಕ್ಷನ್ ಮತ್ತಷ್ಟು ಏರಿಕೆಯಾಗಿದೆ. ಈ ವಾರ ಕೂಡ ಚಿತ್ರ ಉತ್ತಮವಾಗಿ ಪ್ರದರ್ಶನ ಕಾಣುತ್ತಿದ್ದು, ಚಿತ್ರ ಇನ್ನಷ್ಟು ಗಳಿಸೋದು ಖಂಡಿತಾ ಎನ್ನುತ್ತಿದ್ದಾರೆ ಬಾಕ್ಸಾಫೀಸ್ ಪಂಡಿತರು. ಚಿತ್ರದ ಯಶಸ್ಸು ಕಿಚ್ಚನ ಅಭಿಮಾನಿಗಳಿಗೆ ಅತೀವ ಸಂತಸ ಉಂಟುಮಾಡಿದ್ದು, ಎರಡು ವರ್ಷದ ನಂತರ ನೆಚ್ಚಿನ ನಟನನ್ನು ತೆರೆಯ ಮೇಲೆ ನೋಡುತ್ತಾ ಯಶಸ್ಸನ್ನು ಸಂಭ್ರಮಿಸುತ್ತಿದ್ದಾರೆ. ‘ಕೋಟಿಗೊಬ್ಬ 3’ ಮೊದಲ ದಿನವೇ ಅಂದಾಜು ₹ 12 ಕೋಟಿಯಷ್ಟು ಗಳಿಸಿತ್ತು ಎಂದು ವರದಿಗಳು ಹರಿದಾಡಿದ್ದವು. ಪ್ರಸ್ತುತ ಚಿತ್ರತಂಡದಿಂದ ಅಧಿಕೃತ ಲೆಕ್ಕ ಬಿಡುಗಡೆಯಾಗಿದ್ದು, 4 ದಿನಕ್ಕೆ ₹ 40.5 ಕೋಟಿ ಗಳಿಸುವುದರೊಂದಿಗೆ ಯಶಸ್ಸು ಕಂಡಿದೆ.

Written By
Kannadapichhar

Leave a Reply

Your email address will not be published. Required fields are marked *