News

‘ವಿಲನ್’ ಆಗಿ ತೆಲುಗು ದುನಿಯಾಗೆ ಎಂಟ್ರಿ ಕೊಟ್ಟ ಕನ್ನಡದ ‘ಸಲಗ’

‘ವಿಲನ್’ ಆಗಿ ತೆಲುಗು ದುನಿಯಾಗೆ ಎಂಟ್ರಿ ಕೊಟ್ಟ ಕನ್ನಡದ ‘ಸಲಗ’
  • PublishedNovember 9, 2021

ಸ್ಯಾಂಡಲ್ ವುಡ್ ನಲ್ಲಿ ದುನಿಯಾ ಮೂಲಕ ತನ್ನ ನಟನೆಯ ತಾಕತ್ತು ಏನೆಂದು ಸಾಬೀತು ಮಾಡಿ ದುನಿಯಾ ವಿಜಯ್ ಎಂದೇ ಫೇಮಸ್ ಆದ ನಟ ವಿಜಯ್, ಸಲಗ ಸಿನಿಮಾದ ಮೂಲಕ ನಿರ್ದೇಶನಕ್ಕು ಕೈ ಹಾಕಿ ಸೈ ಎನ್ನಿಸಿಕೊಂಡು ಯಶಸ್ವಿ ಆಗಿರುವ ವಿಜಯ್ ಗೆ ಟಾಲಿವುಡ್ ನಿಂದ ಆಫರ್ ಬಂದಿದೆ. ಇನ್ನು ತೆಲುಗು ಚಿತ್ರರಂಗದ ದುನಿಯಾದಲ್ಲೂ ಹವಾ ಸೃಷ್ಟಿಸಲಿದ್ದಾರೆ ಕನ್ನಡ ವಿಜಯ್ . ಆದರೆ ಒಂದು ವ್ಯತ್ಯಾಸ ಏನಂದ್ರೆ ವಿಜಯ್ ಅಭಿನಯಿಸುತ್ತಿರುವುದು ಹೀರೋ ಆಗಿ ಅಲ್ಲಾ ವಿಲನ್ ಆಗಿ.

ಗೋಪಿಚಂದ್ ಮಾಲಿನೇನಿ ನಿರ್ದೇಶನದಲ್ಲಿ ನಂದಮೂರಿ ಬಾಲಕೃಷ್ಣ ನಟಿಸಲಿರುವ ಸಿನಿಮಾದಲ್ಲಿ ವಿಜಯ್ ಅವರು ಖಳನಟರಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ವಿಜಯ್ ಇನ್ನು ಎಲ್ಲಿಯೂ ಹೇಳಿಕೊಂಡಿಲ್ಲಾ, ತೆಲುಗು ಸಿನಿಮಾ ವೆಬ್ ಪೋರ್ಟಲ್ ಗಳಲ್ಲಿ ಸುದ್ದಿ ಹರಿದಾಡುತ್ತಿದೆ. ಚಿತ್ರದ ಹೆಸರು ಇನ್ನು ಅಧಿಕೃತವಾಗಿ ಘೋಷಣೆಯಾಗಿಲ್ಲಾ ಸದ್ಯ #’NBK107’ಎಂದು ಕರೆಸಿಕೊಳ್ಳುತ್ತಿರುವ ಈ ಚಿತ್ರಕ್ಕೆ ನಾಯಕಿಯಾಗಿ ಶ್ರುತಿ ಹಾಸನ್ ನಟಿಸಲಿದ್ದಾರೆ. ರಾಯಲಸೀಮೆಯ ನೈಜ ಘಟನೆಯಾಧರಿಸಿ ಚಿತ್ರಕಥೆ ಹೆಣೆಯಲಾಗಿದೆ.

ದುನಿಯಾ ವಿಜಯ್ ಗೆ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಅಭಿಮಾನಿಗಳಿದ್ದು ಆ ಮೂಲಕ ತೆಲುಗು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದರೆ ಕನ್ನಡ ನೆಲದಲ್ಲಿ ಮಾರುಕಟ್ಟೆ ವಿಸ್ತರಿಸಬಹುದು ಎನ್ನುವ ಲೆಕ್ಕಾಚಾರ ನಿರ್ಮಾಪಕರದ್ದು.

****

Written By
Kannadapichhar

Leave a Reply

Your email address will not be published. Required fields are marked *