ಇದಕ್ಕೇ ಬಾಕ್ಸ್ ಆಫೀಸ್ ಸುಲ್ತಾನ್ 1&only ‘ಡಿಬಾಸ್’..!
ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರು ಕನ್ನಡ ಸಿನಿಮಾ ರಂಗ ಕಂಡ ಅದ್ಬುತ ನಟ. ಅವರನ್ನು ಅವರ ನೆಚ್ಚಿನ ಅಭಿಮಾನಿಗಳು ಹಾಗೂ ಸಿನಿ ಪ್ರಿಯರು ಬಾಕ್ಸ್ ಆಫೀಸ್ ಸುಲ್ತಾನ ಎಂದು ಕರೀತಾರೆ. ಹಾಗಾದರೆ ಡಿಬಾಸ್ ಅನ್ನು ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ ಎಂದು ಯಾಕೆ ಕರೀತಾರೆ? ಅದರ ಬಗ್ಗೆ ಸಂಪೂರ್ಣ ವಿವರಣೆ ಇಲ್ಲಿದೆ.
ದರ್ಶನ್ ಅನ್ನೋ ಒಂದು ಹೆಸರಿಗೆ ಅಪಾರ ಪ್ರಮಾಣದ ಕ್ರೇಜ್ ಇದೆ, ಅಭಿಮಾನ ಇದೆ. ದರ್ಶನ್ 2001 ರಲ್ಲಿ ಮೆಜೆಸ್ಟಿಕ್ ಚಿತ್ರದ ಮೂಲಕ ನಾಯಕ ನಟನಾಗಿ ಸಿನಿಮಾ ಜಗತ್ತಿಗೆ ಪ್ರವೇಶಿಸಿದ ಅನಂತರ ಹಿಟ್ ಮೇಲೆ ಹಿಟ್ ಫಿಲಂ ಗಳನ್ನು ಕನ್ನಡ ಚಲನಚಿತ್ರಕ್ಕೆ ನೀಡಿದ್ದಾರೆ.
ಥಿಯೇಟರ್ ನಲ್ಲಿ ಚಿತ್ರಗಳ ಯಶಸ್ವೀ ಪ್ರದರ್ಶನ
ದರ್ಶನ್ ಅವರು ಈವರೆಗೆ ಸುಮಾರು 50 ಕ್ಕಿಂತ ಅಧಿಕ ಚಿತ್ರಗಳಲ್ಲಿ ನಾಯಕ ನಟನಾಗಿ ನಟಿಸಿದ್ದಾರೆ. ಅದರಲ್ಲಿ ಬಹುತೇಕ ಎಲ್ಲವು ಕಮರ್ಷಿಯಲ್ ಆಗಿ ಯಶಸ್ವಿಯಾಗಿದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಅವರ ಚಿತ್ರಗಳು ರಿಲೀಸ್ ಆದ ಮೊದಲ ದಿನವೇ ದಾಖಲೆಯ ಮಟ್ಟದ ಕಲೆಕ್ಷನ್ ಅನ್ನು ಗಳಿಸುತ್ತದೆ.
ಅಭಿಮಾನಿ ಬಳಗ
ದರ್ಶನ್ ಅವರಿಗೆ ಅಭಿಮಾನಿಗಳ ದೊಡ್ಡ ಬಳಗವೇ ಇದೆ. ಅವರ ನೋವಿನಲ್ಲು ಬೆಂಬಲ ನೀಡುವ ಅಪ್ಪಟ ಫ್ಯಾನ್ಸ್ ಗಳನ್ನ ಅವರು ಗಳಿಸಿದ್ದಾರೆ. ಹಾಗಾಗಿಯೇ ದರ್ಶನ್ ಅವರು ಅನೇಕ ಬಾರಿ ತಮ್ಮ ಜತೆ ಯಾರಿಲ್ಲದಿದ್ದರೂ ಪರವಾಗಿಲ್ಲ, ನನ್ನ ಸೆಲೆಬ್ರಿಟಿಸ್ ಗಳು ನನ್ನ ಜೊತೆ ಇದ್ರೆ ಸಾಕು ಅನ್ನುತ್ತಿರುತ್ತಾರೆ. ಅದಕ್ಕೆ ಸದ್ಯದ ಪರಿಸ್ಥಿತಿಯು ಉತ್ತಮ ಉದಾಹರಣೆ.
20 ರಿಂದ 25 ಬ್ಲಾಕ್ ಬಸ್ಟರ್ ಸಿನಿಮಾಗಳು
ದರ್ಶನ್ ಅವರ ಎಲ್ಲಾ ಸಿನಿಮಾಗಳು ಅದ್ಬುತ ಪ್ರದರ್ಶನ ಕಂಡರೂ, ಸುಮಾರು 20 ರಿಂದ 25 ಸಿನಿಮಾಗಳು ಬ್ಲಾಕ್ ಬಸ್ಟರ್, ಸೂಪರ್ ಹಿಟ್ ಎಂದೆನಿಸಿಕೊಂಡಿದೆ.ಆಗಿನ ಸಾರಥಿ, ಕಲಾಸಿಪಾಳ್ಯ, ಸುಂಟರಗಾಳಿ, ಜೊತೆಗೆ ಈಗಿನ ಕಾಟೆರಾ, ಚಕ್ರವರ್ತಿ,ರಾಬರ್ಟ್, ಯಜಮಾನ ಹೀಗೆ ಅನೇಕ ಮೂವಿಗಳು ಸಕ್ಕತ್ ಸದ್ದು ಮಾಡಿದೆ.
ಬಾಕ್ಸ್ ಆಫೀಸ್ ಕಲೆಕ್ಷನ್
ಕಾಟೇರಾ – 2023 ರಲ್ಲಿ ಬಿಡುಗಡೆ ಗೊಂಡು ಸುಮಾರು 67₹ ಕೋಟಿಯಿಂದ 200₹ ಕೋಟಿಯಷ್ಟು ಕಲೆಕ್ಷನ್ ಮಾಡಿದೆ.
ರಾಬರ್ಟ್– 2022,ಈ ಇಸವಿಯಲ್ಲಿ ಬಿಡುಗಡೆಯಾದ ಬ್ಲಾಕ್ ಬಸ್ಟರ್ ಚಿತ್ರ,55₹ – 78₹ ಕೊಟ್ಟಿಯಷ್ಟು ಕಲೆಕ್ಷನ್ ಮಾಡಿದೆ.
ಸಾರಥಿ– ಅಂದಾಜು 33₹ ಕೋಟಿಯಷ್ಟು ಸಂಗ್ರಹಣೆ ಮಾಡಿದೆಹೀಗೆ ಅನೇಕ ಚಿತ್ರಗಳು ಬಾಕ್ಸ್ ಆಫೀಸ್ ಉಡೀಸ್ ಮಾಡಿದೆ.
ಇದೆಲ್ಲಾ ಕಾರಣದಿಂದ ದರ್ಶನ್ ತೂಗಿದೀಪರನ್ನು ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ ಎಂದು ಕರೆಯುತ್ತಾರೆ.