News

ಆರ್ಭಟಿಸಿದ ಬಂದ ‘ಮದಗಜ’ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ..?

ಆರ್ಭಟಿಸಿದ ಬಂದ ‘ಮದಗಜ’ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ..?
  • PublishedDecember 4, 2021

ಸ್ಯಾಂಡಲ್ ವುಡ್ ನ ಮೋಸ್ಟ್ ಅವೈಟೆಡ್ ಸಿನಿಮಾ ‘ಮದಗಜ’ ನೆನ್ನೆ ಶುಕ್ರವಾರ ರಾಜಾದ್ಯಂತ (ಡಿಸೆಂಬರ್ 3) 800ಕ್ಕೂ ಅಧಿಕ ಚಿತ್ರ ಮಂದಿರಗಳಲ್ಲಿ ರಿಲೀಸ್ ಹೌಸ್ ಫುಲ್ ಪ್ರದರ್ಶನವನ್ನು ಕಾಣ್ತದೆ.

ಮದಗಜ ನನ್ನು ಪ್ರೇಕ್ಷಕ ಒಪ್ಪಿ ಮುದ್ದಾಡಿದ್ದಾನೆ. ಮನಸಾರೆ ಮೆಚ್ಚಿ ಅರಸಿದ್ದಾನೆ ಶ್ರೀಮುರಳಿ ಭರಾಟೆ ಚಿತ್ರದ ನಂತ್ರ ಮತ್ಯಾವ ಸಿನಿಮಾವನ್ನ ಮಾಡಿರಲಿಲ್ಲಾ ಇಷ್ಟು ದಿನ ಕಾದಿದ್ದ ರೋರಿಂಗ್ ಸ್ಡಾರ್ ಫ್ಯಾನ್ ಮದಗಜ ನ ಆರ್ಭಟ ನೋಡಿ ಆಶ್ಚರ್ಯ ಚಕಿತರಾಗಿದ್ದಾರೆ. ನಿನ್ನೆ ಅನುಪಮ ಥಿಯೇಟರ್ ಶ್ರೀಮುರಳಿ, ನಿರ್ದೇಶಕ ಮಹೇಶ್ ಕುಮಾರ್ ಮತ್ತು  ನಿರ್ಮಾಪಕ ಮಾಪತಿ ಅವರನ್ನು ಅಭಿಮಾನದ ಹೊಳೆಯಲ್ಲಿ ಮೆರೆಸಿದ್ದಾರೆ.

ಮದಗಜ ಚಿತ್ರ ನಿರ್ಮಾಪಕ ಉಮಾಪತಿ ಅವರಿಗೆ ಅತಿ ಹೆಚ್ಚು ಮಹತ್ವಾಕಾಂಕ್ಷೆ ಹೊಂದಿದ್ದ ಸಿನಿಮಾವಾಗಿತ್ತು ಚಿತ್ರ ಬಿಡುಗಡೆ ಆದ ಮೊದಲ ದಿನ ಪ್ರೇಕ್ಷಕರ ರೆಸ್ಪಾನ್ಸ ಏನೋ ಚೆನ್ನಾಗಿತ್ತು, ಮದಗಜ ಸಿನಿಮಾ ಮೊದಲ ದಿನ ಗಳಿಸಿರುವ ರೆವಿನ್ಯೂ ಎಷ್ಟು ಎಂದು ನೋಡಿದರೆ ಅದೂ ಕೂಡ ಕಡಿಮೆ ಏನಿಲ್ಲ ಬಿಡುಗಡೆ ಆದ ಒಂದೇ ದಿನಕ್ಕೆ ಬರೋಬರಿ 7.86 ಕೋಟಿ ಕಲೆಕ್ಷನ್ ಮಾಡಿಕೊಂಡಿದೆ.

ಬಹುತೇಕ ಕಡೆಗಳಲ್ಲಿ ಹೌಸ್​ ಫುಲ್ ಪ್ರದರ್ಶನ ಕಂಡಿದೆ. ಆ ಕಾರಣದಿಂದ ಚಿತ್ರಕ್ಕೆ ಮೊದಲ ದಿನ ಒಳ್ಳೆಯ ಕಲೆಕ್ಷನ್​ ಆಗಿದೆ. ಚಿತ್ರತಂಡದಿಂದಲೇ ಸಿಕ್ಕಿರುವ ಅಧಿಕೃತ ಮಾಹಿತಿ ಪ್ರಕಾರ. ಮೊದಲ ದಿನ ಬರೋಬ್ಬರಿ 7.86 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ. ನಿರ್ದೇಶಕ ಮಹೇಶ್​ ಕುಮಾರ್​ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ಅವರ ಮೊಗದಲ್ಲಿ ಈ ಗೆಲುವಿನಿಂದಾಗಿ ನಗು ಮೂಡಿದೆ.

‘ಮದಗಜ’ ಚಿತ್ರಕ್ಕೆ ಗ್ರ್ಯಾಂಡ್​ ಓಪನಿಂಗ್​ ಸಿಕ್ಕಿದ್ದು, 800ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಶಿವರಾಜ್​ ಕೆ.ಆರ್​.ಪೇಟೆ, ಚಿಕ್ಕಣ್ಣ, ಧರ್ಮಣ್ಣ ಮುಂತಾದ ಹಾಸ್ಯ ಕಲಾವಿದರು ಕೂಡ ಭರ್ಜರಿ ಮನರಂಜನೆ ನೀಡುತ್ತಿದ್ದಾರೆ. ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದಾರೆ. ಹಿನ್ನೆಲೆ ಸಂಗೀತ ಮತ್ತು ಹಾಡುಗಳು ಗಮನ ಸೆಳೆಯುತ್ತಿವೆ. ಈ ಎಲ್ಲ ಕಾರಣಗಳಿಗಾಗಿ ಚಿತ್ರವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

****

Written By
Kannadapichhar

Leave a Reply

Your email address will not be published. Required fields are marked *