ಕೋಟಿಗೊಬ್ಬ 3 ಚಿತ್ರದ ಯಶಸ್ಸನ್ನು ಹಂಚಿಕೊಂಡ ಚಿತ್ರ ತಂಡ..! success meet

ಕೋಟಿಗೊಬ್ಬ 3 ಅಕ್ಟೋಬರ್ 14 ರಂದು ಬಿಡುಗಡೆ ಆಗಬೇಕಿತ್ತು ಆದರೆ ಕಾರಣಾಂತರಗಳಿಂದಾಗಿ ಚಿತ್ರ ಒಂದು ದಿನ ತಡವಾಗಿ ಅಕ್ಟೋಬರ್ 15 ರಂದು ಬಿಡುಗಡೆ ಆಗಿತ್ತು. ರಾಜಾದ್ಯಂತ ತೆರೆ ಕಂಡ ಕೋಟಿಗೊಬ್ಬ 3 ಯಶಸ್ವಿ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ. ಈ ಯಶಸ್ಸನ್ನು ಹಂಚಿಕೊಳ್ಳಲ್ಲು ಇಡೀ ಚಿತ್ರ ತಂಡದ ಕಲಾವಿದರು, ತಂತ್ರಜ್ಞರು ಭಾಗವಹಿಸಿದ್ದರು ಚಿತ್ರದ ನಿರ್ಮಾಪಕರಾದ ಸೂರಪ್ಪ ಬಾಬು ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು. ನಾನು ಸಾಯುವ ತನಕ ಸುದೀಪ್ ಅವರಿಗೆ ಕೃತಜ್ಞತೆ ಸಲ್ಲಿಸ್ತೀನಿ ಅಂತ ಭಾವುಕರಾದ್ರು.
‘ಕೋಟಿಗೊಬ್ಬ 3’ ಸಿನಿಮಾದ ಸಕ್ಸಸ್ ಮೀಟ್‌ನಲ್ಲಿ ಭಾಗವಹಿಸಿ ಮಾತನಾಡಿದ ಕಿಚ್ಚ ಸುದೀಪ್, ಸಿನಿಮಾ ಯಶಸ್ವಿಯಾಗಿದ್ದಕ್ಕೆ ಅಭಿಮಾನಿಗಳಿಗೆ, ಸಿನಿಮಾ ಪ್ರೇಮಿಗಳಿಗೆ ಧನ್ಯವಾದ ಅರ್ಪಿಸಿ, ಹಲವು ವಿಷಯಗಳ ಬಗ್ಗೆ ಮಾತನಾಡಿದರು.
”ಈಗಾಗಲೇ ಎರಡು ವರ್ಷದಿಂದ ಮೊಬೈಲ್‌ನಲ್ಲಿ, ಟಿವಿಯಲ್ಲಿ ಸಿನಿಮಾಗಳನ್ನು ನೋಡಿದ್ದೀರಿ. ಈಗಲಾದರು ಅದರಿಂದ ಹೊರಗೆ ಬಂದು ಚಿತ್ರಮಂದಿರದಲ್ಲಿ ಸಿನಿಮಾ ನೋಡಿ. ಮೊಬೈಲ್ ನಲ್ಲಿ ಸಿನಿಮಾ ನೋಡುವುದಕ್ಕೂ, ಥಿಯೇಟರ್‌ನಲ್ಲಿ ಸಿನಿಮಾ ನೋಡುವುದಕ್ಕೂ ವ್ಯತ್ಯಾಸ ಏನೆಂಬುದನ್ನೇ ನೀವೆ ಕಂಡುಕೊಳ್ಳಿ. ಕೆಲವು ಪೈರಸಿ ಕಾಪಿಗಳಲ್ಲಿ ನಾನೇ ಹೀರೋ ಎಂಬುದು ಸಹ ಗೊತ್ತಾಗುತ್ತಿಲ್ಲ ಅಷ್ಟು ಕೆಟ್ಟದಾಗಿವೆ” ಎಂದು ತಮಾಷೆ ಮಾಡಿದರು ಸುದೀಪ್.
ಪೈರಸಿ ಬಗ್ಗೆ ಎದುರಾದ ಪ್ರಶ್ನೆಗೆ ಉತ್ತರಿಸಿದ ಸುದೀಪ್, ”ಎಲ್ಲ ಕಡೆ ಕೆಟ್ಟ ಜನ ಇದ್ದೇ ಇರುತ್ತಾರೆ ಅವರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು ಅಷ್ಟೆ. ನಮ್ಮ ತಂಡ ಹಗಲು ರಾತ್ರಿ ಕಷ್ಟಪಟ್ಟು ಸಾಕಷ್ಟು ಲಿಂಕ್‌ಗಳನ್ನು ಡಿಲೀಟ್ ಮಾಡಿಸಿದೆ. ಅವರ ಶ್ರಮವನ್ನು ಮೆಚ್ಚಲೇ ಬೇಕು” ಎಂದರು.
ಸಿನಿಮಾದ ಕಲೆಕ್ಷನ್ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸುದೀಪ್, ”ಆ ಬಗ್ಗೆ ನನಗೆ ಸ್ಪಷ್ಟ ಮಾಹಿತಿ ಇಲ್ಲ. ಇದು ನನ್ನ ಪ್ರೊಡಕ್ಷನ್‌ನ ಸಿನಿಮಾ ಆಗಿದ್ದರೆ ಮಾತನಾಡಬಹುದು. ನಮ್ಮ ಪ್ರೊಡಕ್ಷನ್ ರೀತಿಯೇ ಕೆಲಸ ಮಾಡಿದ್ದೇವೆ ಆದರೆ ಕಲೆಕ್ಷನ್ ಬಗ್ಗೆ ನಿರ್ಮಾಪಕರೇ ಹೇಳಬೇಕು” ಎಂದರು. ”ನಿರ್ಮಾಪಕರು ಖುಷಿಯಾಗಿದ್ದಾರೆ, ವಿತರಕರು ಖುಷಿಯಾಗಿದ್ದಾರೆ. ಹಾಗಿದ್ದ ಮೇಲೆ ನನಗೆ ಅಷ್ಟು ಸಾಕು. ನಿರ್ಮಾಪಕರು ಕಲೆಕ್ಷನ್ ಬಗ್ಗೆ ಏನಾದರೂ ಹೇಳಿದರೆ ನಾನು ಅದನ್ನು ಅನುಮೋದಿಸಬಲ್ಲೆ. ನಾನೇನೋ ಹೇಳುವುದು, ಅಷ್ಟು ಆಗಿಲ್ಲವೆಂದು ಅಥವಾ ಇನ್ನೂ ಹೆಚ್ಚು ಆಗಿದೆಯೆಂದು ಆ ಮೇಲೆ ಚರ್ಚೆಗಳು ಏಳುತ್ತವೆ. ನನ್ನದೇ ಪ್ರೊಡಕ್ಷನ್ ಆಗಿದ್ದಾಗ ನಾನು ಸ್ಪಷ್ಟವಾಗಿರಬಲ್ಲೆ” ಎಂದರು ಸುದೀಪ್. ಕೆಟ್ಟ ಸಮಯದಲ್ಲಿ ನಮ್ಮ ಜೊತೆ ನಿಂತು ಸಹಾಯ ಮಾಡಿದ ವ್ಯಕ್ತಗಳನ್ನು ಮರೆಯಬಾರದು, ಕಲೆಕ್ಷನ್ ಎಂಬುದು ನನ್ನ ವಿಷಯದಲ್ಲಿ ಮಾವದಂಡವಲ್ಲ, ಸಿನಿಮಾ ಗಳಿಕೆ ಒಬ್ಬ ನಟನ ನಟನೆಯನ್ನು ಅಳೆಯುವುದು ಸಾಧನವಾಗಬಾರದು ನಮ್ಮ ಕಷ್ಟದ ಕಾಲದಲ್ಲಿ ಜೊತೆ ನಿಂತು ಸಹಾಯ ಮಾಡಿದ ವ್ಯಕ್ತಿಗಳನ್ನು ಮರೆಯಬಾರದು ಎಂದರು ಕಿಚ್ಚ ಸುದೀಪ್.
****