2ನೇ ದಿನದ 2ನೇ ಪಾತ್ರದ ಪರಿಚಯ – ತೋತಾಪುರಿ
ತೋತಾಪೂರಿ ಚಿತ್ರತಂಡ ಪ್ರತಿ ದಿನ ಸಂಜೆ ಚಿತ್ರದ ಪಾತ್ರಗಳ ಪರಿಚಯ ಮಾಡಿಕೊಡಲಿದೆ. ನೆನ್ನೆ (ನ 22) ಜಗ್ಗೇಶ್ ಅವರ ಪಾತ್ರವನ್ನು ಪರಿಚಯ ಮಾಡಿಕೊಂಡಿತ್ತು. ಇಂದು ಎರಡನೇ ದಿನದ ಎರಡನೇ ಪೋಸ್ಟ್ ಬಿಡುಗಡೆ ಮಾಡಿದ್ದು ಅದರಲ್ಲಿ ಅಧಿತಿ ಪ್ರಭುದೇವ್ ಅವರ ಪಾತ್ರವನ್ನು ಪರಿಚಯಿಸಿದೆ.
ಅಧಿತಿ ಅವರು ತೋತಾಪುರಿ ಚಿತ್ರದಲ್ಲಿ ಶಕೀಲಾಭಾನು ಎಂಬ ಮುಸ್ಲಿಂ ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. “ ಮನುಷ್ಯ ಹರಕೆ ತೀರ್ಸ್ದೇ ಹೋದ್ರು ಪರವಾಗಿಲ್ಲಾ, ಆದ್ರೆ ಹಗೆ ತೀರ್ಸ್ಬಾರ್ದು..! ಎಂದು ಪೋಸ್ಟರ್ ನಲ್ಲಿ ಬರೆದಿದೆ. ನೆನ್ನೆ (22) ಬಿಡುಗಡೆ ಮಾಡಿದ್ದ ಪೋಸ್ಟರ್ ನಲ್ಲಿ ಜಗ್ಗೇಶ ಅವರ ಈರೇಗೌಡರ ಪಾತ್ರ ಪರಿಚಯ ಮಾಡಿಕೊಟ್ಟಿತ್ತು.
ಜಗ್ಗೇಶ್ ಸೇರಿದಂತೆ 80ಕ್ಕೂ ಅಧಿಕ ಕಲಾವಿದರ ದಂಡೇ ಚಿತ್ರದಲ್ಲಿದೆ. ಅಧಿತಿ ಪ್ರಭುದೇವ, ಡಾಲಿ ಧನಂಜಯ್, ಸುಮನ್ ರಂಗನಾಥ್, ದತ್ತಣ್ಣ, ವೀಣಾ ಸುಂದರ್, ಹೇಮಾದತ್ ಸೇರಿದಂತೆ ಅನೇಕರು ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ. ತಾಂತ್ರಿಕತೆಯ ವಿಚಾರದಲ್ಲೂ ಈ ಚಿತ್ರ ಸದ್ದು ಮಾಡುತ್ತಿದೆ. ಹಿಟ್ ಸಿನಿಮಾಗಳನ್ನು ನೀಡಿರುವ ‘ಸುರೇಶ್ ಆರ್ಟ್ಸ್’ ಬ್ಯಾನರ್‌ನ ಕೆ.ಎ.ಸುರೇಶ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಜಗ್ಗೇಶ್ ನಟನೆಯ ಎದ್ದೇಳು ಮಂಜುನಾಥ, ನೀರ್‌ದೋಸೆ ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ್ದ ಅನೂಪ್ ಸೀಳಿನ್ ‘ತೋತಾಪುರಿ’ ಹಾಡುಗಳಿಗೆ ಬ್ಯಾಂಡು ಬಜಾಯಿಸಿದ್ದಾರೆ. ಹಿನ್ನೆಲೆ ಸಂಗೀತಕ್ಕೂ ಅವರದೇ ತಾಳ-ಮೇಳ. ನಿರಂಜನ್ ಬಾಬು ಕ್ಯಾಮೆರಾ, ಸುರೇಶ್ ಅರಸ್ ಸಂಕಲನವಿದೆ.