News

ಡಿಸೆಂಬರ್ 10 ಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾನೆ ಅವತಾರ ಪುರುಷ!

ಡಿಸೆಂಬರ್ 10 ಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾನೆ ಅವತಾರ ಪುರುಷ!
  • PublishedNovember 22, 2021

ಸಿಂಪಲ್ ಸುನಿ ನಿರ್ದೇಶನದ ಕಾಮಿಡಿ ಕಿಂಗ್ ಅಧ್ಯಕ್ಷ ಶರಣ್ ಅಭಿನಯದ ‘ಅವತಾರ ಪುರುಷ’ ಚಿತ್ರ ಡಿಸೆಂಬರ್‌ 10ರಂದು ತೆರೆಗೆ ಬರುತ್ತಿದೆ. ಶರಣ್‌ಗೆ ಜೋಡಿಯಾಗಿ ಚುಟು ಚುಟು ಹುಡುಗಿ ಆಶಿಕಾ ರಂಗನಾಥ್ ನಟಿಸಿದ್ದಾರೆ.

ಅವತಾರ ಪುರುಷ ಚಿತ್ರದ ಸುದ್ದಿಗೋಷ್ಠಿ ನಿನ್ನೆ(ಭಾನುವಾರ ನ 21) ನಡೆದಿದ್ದು ಚಿತ್ರದ ನಾಯಕ ನಟ ಶರಣ್, ನಾಯಕಿ ಆಶಿಕಾ ರಂಗನಾಥ್, ನಿರ್ದೇಶಕರಾದ ಸುನೀಲ್, ನಿರ್ಮಾಪಕರಾದ ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ಸಿನಿಮಾಟೋಗ್ರಾಫರ್ ವಿಲಿಯಮ್ ಡೇವಿಡ್ ಭಾಗವಹಿಸಿದ್ದರು.

ಸಿಂಪಲ್ ಸುನಿ ನಿರ್ದೇಶನದ ಸಿನಿಮಾದಲ್ಲಿ ಮನರಂಜನೆಗೆ ಯಾವುದೇ ಕೊರತೆ ಇರುವುದಿಲ್ಲ. ಶರಣ್​ ಸಿನಿಮಾಗಳಲ್ಲೂ ಅಷ್ಟೇ. ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ​ನಗಿಸುವ ಕಲೆ ಅವರಿಗೆ ಕರಗತವಾಗಿದೆ. ಈಗ ಇಬ್ಬರೂ ‘ಅವತಾರ ಪುರುಷ’ ಚಿತ್ರಕ್ಕಾಗಿ ಒಂದಾಗಿದ್ದಾರೆ. ಈ ಸಿನಿಮಾಗೆ ಆಶಿಕಾ ರಂಗನಾಥ್​ ನಾಯಕಿ. ಸಿನಿಮಾ ಬಗ್ಗೆ ಮಾಹಿತಿ ನೀಡೋಕೆ ಇಡೀ ಚಿತ್ರತಂಡ ಮಾಧ್ಯಮದ ಎದುರು ಹಾಜರಾಗಿತ್ತು. ಸಿನಿಮಾದಲ್ಲಿ ಏನೆಲ್ಲ ಇದೆ ಎಂಬುದರ ಬಗ್ಗೆ ಮಾಹಿತಿ ನೀಡಿದರು ಶರಣ್​. ‘ನನ್ನ ಉಳಿದ ಸಿನಿಮಾಗಳಲ್ಲಾದರೆ ನನಗೆ ಒಂದೇ ಪಾತ್ರ. ಆದರೆ, ಇದರಲ್ಲಿ ಹಾಗಿಲ್ಲ. ನಾನು ನಾನಾ ಅವತಾರ ತಾಳಿದ್ದೇನೆ. ಹೀಗಾಗಿ ಇದರಲ್ಲಿ ಬರುವ ಪಾತ್ರ ಎಲ್ಲರಿಗೂ ಕನೆಕ್ಟ್​ ಆಗುತ್ತದೆ’ ಎನ್ನುವ ಮಾತನ್ನು ಹೇಳಿದರು ಅವರು. ಪುಷ್ಕರ್​ ಮಲ್ಲಿಕಾರ್ಜುನಯ್ಯ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅರ್ಜುನ್​ ಜನ್ಯ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

ಎರಡು ಭಾಗಗಳಲ್ಲಿ ಈ ಚಿತ್ರ ತೆರೆಗೆ ಬರಲಿದೆ. ಮೊದಲ ಭಾಗಕ್ಕೆ ಅಷ್ಟದಿಗ್ಬಂಧನ ಮಂಡಲಕ ಹಾಗೂ ಎರಡನೇ ಪಾರ್ಟ್‌ಗೆ ತ್ರಿಶಂಕು ಎನ್ನುವ ಟ್ಯಾಗ್‌ಲೈನ್ ಇಡಲಾಗಿದೆ. ಸಾಯಿಕುಮಾರ್‌, ಶ್ರೀನಗರ ಕಿಟ್ಟಿ,  ಸುಧಾರಾಣಿ, ಸಾಧುಕೋಕಿಲ, ಭವ್ಯ, ಅಯ್ಯಪ್ಪ ಸೇರಿದಂತೆ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಈ ಹಿಂದೆ ‘ರ‍್ಯಾಂಬೊ 2’ ಚಿತ್ರದಲ್ಲಿ ಶರಣ್ ಆಶಿಕಾ ಒಟ್ಟಿಗೆ ನಟಿಸಿದ್ದರು. 

****

Written By
Kannadapichhar

Leave a Reply

Your email address will not be published. Required fields are marked *