ಹೀರೊಗಳಲ್ಲಿ ದರ್ಶನ್ ಹೆಂಗೋ.. ಹೀರೋಯಿನ್ ಗಳಲ್ಲಿ ರಚಿತಾ ಹಂಗೆ..!
ಕನ್ನಡ ಟಾಪ್ ಹೀರೋಗಳಲ್ಲಿ ದರ್ಶನ್ ಕೂಡ ಒಬ್ರು. ಬರೀ ಸಿನಿಮಾ ಹೀರೋ ಅನ್ನೋ ಕಾರಣಕ್ಕೆ ಅಲ್ಲ, ದರ್ಶನ್ ಅಭಿಮಾನಿಗಳನ್ನ ಟ್ರೀಟ್ ಮಾಡೋ ವಿಧಾನ, ಸ್ನೇಹಿತರನ್ನ ಟ್ರೀಟ್ ಮಾಡೋ ವಿಧಾನ, ಫ್ರೆಂಡ್ಸ್ ಸಿನಿಮಾಗಳಿಗೆ ಸಪೋರ್ಟ್ ಮಾಡೋ ಸ್ಟೈಲ್ ಎಲ್ಲವೂ ಮ್ಯಾಟರ್ ಆಗುತ್ತೆ. ತಮ್ಮದಲ್ಲದ ಸಿನಿಮಾವಾದ್ರೂ.. ಫ್ರೆಂಡ್ ಶಿಪ್ ಗೆ ಬೆಲೆ ಕೊಟ್ಟು ಸಿನಿಮಾದ ಪ್ರಚಾರ ಕಾರ್ಯಕ್ರಮಗಳಲ್ಲಿ ಸಾಥ್ ಕೊಡ್ತಾರೆ. ತಮ್ಮ ಸಿನಿಮಾದ ನಿರ್ಮಾಪಕರಿಗಾಗಿ ಏನ್ ಬೇಕಾದ್ರು ಮಾಡೋಕೆ ರೆಡಿಯಾಗ್ತಾರೆ. ಈಗ ರಚಿತಾ ರಾಮ್ ಕೂಡ ಇದೇ ದಾರಿ ಹಿಡಿದಿದ್ದಾರೆ.
ತಮ್ಮ ಅಭಿನಯದ ಲವ್ ಯೂ ರಚ್ಚು ಸಿನಿಮಾ ಇದೇ ಡಿ.31ಕ್ಕೆ ತೆರೆಗೆ ಬರ್ತಾ ಇದೆ. ಈ ಸಿನಿಮಾದ ಹೀರೋ ಸಿನಿಮಾದ ಪ್ರಚಾರಕ್ಕೆ ಸಾಥ್ ಕೊಟ್ಟಿಲ್ಲ ಅಂದ್ರೂ.. ನಿರ್ಮಾಪಕರ ಜೊತೆ ನಿಂತಿದ್ದಾರೆ ರಚಿತಾ ರಾಮ್. ಇಷ್ಟೆ ಸಾಲ್ದು ಅಂತ ಫ್ರೆಂಡ್ ಶಿಪ್ ಗೆ ಬೆಲೆ ಕೊಟ್ಟು, ಈ ವಾರ ತೆರೆಗೆ ಬಂದಿರೋ ಬಡವ ರಾಸ್ಕಲ್, ರೈಡರ್ ಸಿನಿಮಾಗಳ ಪ್ರಚಾರದಲ್ಲೂ ಭಾಗಿಯಾಗಿದ್ದಾರೆ.
ಡಾಲಿ ಧನಂಜಯ ಹಾಗೂ ಸಿನಿಮಾ ಟೀಮ್ ನ ದೋಸ್ತಿ ಕಾರಣದಿಂದಾಗಿ ಡಾಲಿ ನಿರ್ಮಾಣದ ಬಡವ ರಾಸ್ಕಲ್ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ರು. ಸಿನಿಮಾ ಬಗ್ಗೆ, ಡಾಲಿ & ಟೀಮ್ ಬಗ್ಗೆ ನಾಲ್ಕು ಒಳ್ಳೆ ಮಾತು ಆಡಿದ್ರು. ಇದರ ಜೊತೆಗೆ ನಿಖಿಲ್ ಕುಮಾರಸ್ವಾಮಿ ಜೊತೆಗಿನ ಸ್ನೇಹಕ್ಕೆ ಬೆಲೆ ಕೊಟ್ಟು ರೈಡರ್ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ನಲ್ಲೂ ಭಾಗವಹಿಸಿ, ಸಿನಿಮಾದ ಪ್ರಚಾರ ಮಾಡಿಕೊಟ್ರು. ಇದೇ ಕಾರ ಣಕ್ಕೆ ಇರಬೇಕು ರಚಿತಾ ಬಳಿ ಡಜನ್ ಸಿನಿಮಾಗಳು ಇರೋದು.