News

ಶುರುವಾಯ್ತು ಶರಣ್ ರ ಸ್ವಂತ ಚಾನೆಲ್..!

ಶುರುವಾಯ್ತು ಶರಣ್ ರ ಸ್ವಂತ ಚಾನೆಲ್..!
  • PublishedOctober 26, 2021

ಅಧ್ಯಕ್ಷ ಖ್ಯಾತಿಯ ನಟ ಶರಣ್ ಅವರು ಹೊಸದಾಗಿ ಒಂದು ಯೂಟ್ಯೂಬ್ ಚಾನೆಲ್ ಕ್ರಿಯೇಟ್ ಮಾಡಿದ್ದಾರೆ, ಆಕ್ಟರ್ ಶರಣ್ ಅಫೀಶಿಯಲ್ ಹೆಸರಿನಲ್ಲಿ ಆರಂಭವಾಗಿರೊ ಶರಣ್ ಅವರ ಈ ಯೂಟ್ಯೂಬ್ ಚಾನಲ್ ಆರಂಭವಾಗಿ ಒಂದು ದಿನ ಆಗಿದೆಯಷ್ಟೆ. ಇದರ ಬಗ್ಗೆ ಇತ್ತೀಚೆಗಷ್ಟೆ ವೀಡಿಯೋ ಒಂದನ್ನು ಮಾಡಿ ಮಾಹಿತಿ ಹಂಚಿಕೊಂಡ ಶರಣ್, ನಾನು ನನ್ನದೇ ಆದ ಯೂಟ್ಯೂಬ್ ಚಾನೆಲ್‌ ಒಂದನ್ನು ಆರಂಭಿಸುತ್ತಿದ್ದೇನೆ. ಇದರ ಹಿಂದೆ ದೊಡ್ಡ ಉದ್ದೇಶ ಏನಿಲ್ಲ. ನನ್ನ ಜೀವನದ ಆಗುಹೋಗುಗಳು, ನನ್ನ ನಟನೆಯ ಸಿನಿಮಾ ಮಾಹಿತಿಗಳು ಹಾಗೂ ನನ್ನ ಹವ್ಯಾಸಗಳನ್ನು ನಿಮ್ಮ ಮುಂದೆ ಇಡುತ್ತೇನೆ. ಹೀಗಾಗಿ ಇವೆಲ್ಲವನ್ನು ಹಂಚಿಕೊಳ್ಳಲು ನನಗೆ ಇದೆ ಸರಿಯಾದ ಮಾರ್ಗ ಎನ್ನಿಸಿತು. ಕೆಲವು ಆಪ್ತರಿಂದ ಒಂದಷ್ಟು ಮಾರ್ಗದರ್ಶನವನ್ನು ಪಡೆದು ಚಾನೆಲ್ ಆರಂಭಿಸುವ ಬಗ್ಗೆ ಚಿಂತಿಸಿದ್ದೇನೆ ಎಂದಿದ್ದರು.

ಹೀಗಾಗಿ ಅಫೀಶಿಯಲ್ ಆಗಿ ಯೂಟ್ಯೂಬ್ ಚಾನೆಲೆ ಆರಂಭಿಸಿರುವ ಶರಣ್ ಈಗ ವೀಡಿಯೋ ಅಪ್‌ಲೋಡ್‌ ಮಾಡಲು ಆರಂಭಿಸಿದ್ದಾರೆ. ಆಕ್ಟರ್ ಶರಣ್ ಯೂಟ್ಯೂಬ್ ಚಾನೆಲ್‌ನಲ್ಲಿ ಮೊದಲ ವೀಡಿಯೋ ಇಂದು ಹಾಕಲಾಗಿದ್ದು, ಸಂಸ್ಕೃತ ಭಾಷೆಯ ವೇದಾಂತ ದೇಸಿಕ ಚಿತ್ರದ ರಘುವೀರ ಗಧ್ಯಂ ಹಾಡನ್ನು ಬಹಳ ಅದ್ಭುತವಾಗಿ ಹಾಡಿದ್ದಾರೆ. ರಾಜ್ ಕುಮಾರ್ ಭಾರತಿ ಮೂಲ ಹಾಡಿನ ಸಂಗೀತ ನಿರ್ದೇಶನ ಮಾಡಿದ್ದು, ಇದರ ಕವರ್ ಸಾಂಗ್ ಮಾಡಿ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಟ್ಟಿದ್ದಾರೆ ನಟ ಶರಣ್. ಹಾಗೇ ಮತ್ತಷ್ಟು ವೀಡಿಯೋಗಳಿಗಾಗಿ ಕಾಯುತ್ತಿರಿ ಎಂದಿದ್ದಾರೆ.

****

Written By
Kannadapichhar

Leave a Reply

Your email address will not be published. Required fields are marked *