News

ಸಿನಿ ರಸಿಕರ ಮನಗೆದಿದ್ದ ‘ನಿನ್ನ ಸನಿಹಕೆ’ ಸಿನೆಮಾ ಈಗ ಒಟಿಟಿ ಯಲ್ಲಿ

ಸಿನಿ ರಸಿಕರ ಮನಗೆದಿದ್ದ ‘ನಿನ್ನ ಸನಿಹಕೆ’ ಸಿನೆಮಾ ಈಗ ಒಟಿಟಿ ಯಲ್ಲಿ
  • PublishedNovember 30, 2021

ಕೊರೊನಾ ಲಾಕ್ ಡೌನ್ ನಂತರ ಅಕ್ಟೋಬರ್ 8 ರಂದು ಅದ್ದೂರಿಯಾಗಿ ರಿಲೀಸ್ ಆಗಿ ಸ್ಯಾಂಡಲ್ ವುಡ್ ಅಂಗಳದಲ್ಲಿ ಭರ್ಜರಿ ರೆಸ್ಪಾನ್ಸ್ ಪಡೆದಿದ್ದ ನಿನ್ನ ಸನಿಹಕೆ ಚಿತ್ರ ಈಗ ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಈಗ ಲಭ್ಯವಿದೆ.

ಡಾ.ರಾಜ್‌ಕುಮಾರ್ ಮೊಮ್ಮಗಳಾದ ಧನ್ಯಾ ರಾಮ್‌ ಕುಮಾರ್ ಹಾಗೂ ಸೂರಜ್‌ ಗೌಡ ಅಭಿನಯಸಿ ನಿರ್ದೇಶನ ಮಾಡಿದ್ದ “ನಿನ್ನ ಸನಿಹಕೆ” ಚಿತ್ರವನ್ನು ವೈಟ್ & ಗ್ರೇ ಪಿಕ್ಚರ್ಸ್ ಬ್ಯಾನರಿನಡಿಯಲ್ಲಿ ಅಕ್ಷಯ್ ರಾಜಶೇಖರ್ ಹಾಗೂ ರಂಗನಾಥ್ ಕೊಡ್ಲಿ ರವರು ನಿರ್ಮಿಸಿದ್ದರು.

ನಾಯಕ ಸೂರಜ್ ಅವರೇ ಈ ಚಿತ್ರದ ಕಥೆ , ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದ ನಿನ್ನ ಸನಿಹಕೆ ಚಿತ್ರ ವಿಭಿನ್ನ ಕಥಾಹಂದರ ಒಳಗೊಂಡ ಲಿವಿಂಗ್ ಇನ್ ರಿಲೇಶನ್‌ಷಿಪ್ ಕಥೆ ಇಟ್ಟುಕೊಂಡು ಚಿತ್ರಕಥೆಯನ್ನ ಎಣೆಯಲಾಗಿತ್ತು. ಜೊತೆಗೆ ರೊಮ್ಯಾಂಟಿಕ್ ಕಾಮಿಡಿಯೊಂದಿಗೆ ಕಮರ್ಷಿಯಲ್ ಎಲಿಮೆಂಟ್ಸ್ ಕೂಡ ಒಳಗೊಂಡಿತ್ತು. ಎಲ್ಲಾ ವರ್ಗದವರಿಗೂ ಇಷ್ಟವಾಗುವಂತಹ ಚಿತ್ರ ಎಂಬ ವಿಮರ್ಶಕರಿಂದ ಮೆಚ್ಚುಗೆಯನ್ನು ಪಡೆದಿತ್ತು.

ಧನ್ಯಾ ಮತ್ತು ಸೂರಜ್ ಅವರ ಅಭಿನಯಕ್ಕೆ ಪ್ರಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಆದರೆ, ತಕ್ಷಣದಲ್ಲಿ ಬಿಡುಗಡೆಯಾದ ಸಲಗ, ಕೋಟಿಗೊಬ್ಬ 3 ಮತ್ತು ಹೊಸ ಚಿತ್ರಗಳ ಬಿಡುಗಡೆಯಿಂದಾಗಿ ಥಿಯೇಟರ್ ಗಳ ಸಮಸ್ಯೆಯನ್ನೂ ಎದುರಿಸಬೇಕಾಯ್ತು, ಇದೆಲ್ಲದರ ನಡುವೆ ಕನ್ನಡ ಪ್ರೇಕ್ಷಕ ಸಿನಿಮಾವನ್ನ ಗೆಲ್ಲಿಸಿ ಚಿತ್ರ ತಂಡಕ್ಕೆ ಸಾಥ್ ನೀಡಿದ್ದ, ಈಗ ನಿನ್ನ ಸನಿಹಕೆ ಸಿನಿಮಾ ಒಟಿಟಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗಿದೆ.

****

Written By
Kannadapichhar

Leave a Reply

Your email address will not be published. Required fields are marked *