ಅಜ್ಜಿಯ ಹಾದಿಯನ್ನೇ ತುಳಿದ ಸಂಯುಕ್ತ ಹೊರನಾಡ್
ನಟಿ ಸಂಯುಕ್ತ ಹೊರನಾಡು ಸ್ಯಾಂಡಲ್ ವುಡ್ ನಲ್ಲಿ ತನ್ನದೇ ಆದ ಅಭಿನಯದ ಮೂಲಕ ಅಭಿಮಾನಿಗಳನ್ನ ಪಡೆದುಕೊಂಡಿರುವ ನಟಿ… ತಮಗಿಷ್ಟವಾಗುವ ಹಾಗೂ ತಮಗೆ ಸೂಟ್ ಆಗುವಂತಹ ಪಾತ್ರಗಳನ್ನ ಮಾತ್ರ ಆಯ್ಕೆ ಮಾಡುತ್ತಾ ಚಿತ್ರರಂಗದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿರುವ ಕಲಾವಿದೆ ..

ನಟಿ ಸಂಯುಕ್ತ ಹೊರನಾಡು ಅವರ ಅಜ್ಜಿ ಭಾರ್ಗವಿ ನಾರಾಯಣ್ ಇತ್ತೀಚೆಗಷ್ಟೇ ವಯೋಸಹಜ ಕಾಯಿಲೆಯಿಂದ ಅಸುನೀಗಿದ್ದರು ..ಅಜ್ಜಿ ಭಾರ್ಗವಿ ನಾರಾಯಣ್ ಹಾಗೂ ತಾತ ಮೇಕಪ್ ನಾಣಿ ಇಬ್ಬರೂ ಕೂಡ ತಾವು ಬದುಕಿದ್ದಾಗಲೇ ತಾವು ಸತ್ತ ನಂತರ ತಮ್ಮ ದೇಹವನ್ನು ವೈದ್ಯಕೀಯ ವಿದ್ಯಾರ್ಥಿ ಗಳಿಗೆ ಉಪಯೋಗವಾಗುವಂತೆ ಮಾಡಬೇಕು ಎಂದು ನಿರ್ಧಾರ ಮಾಡಿದ್ದರು ..
https://m.facebook.com/story.php?story_fbid=10159754747344324&id=526779323
ಅದರಂತೆಯೇ ತಾವು ಬದುಕಿದ್ದ ದಿನಗಳಲ್ಲಿಯೇ ಅದಕ್ಕೆ ಬೇಕಾಗುವಂತಹ ಎಲ್ಲ ರೀತಿಯ ಸಿದ್ಧತೆಯನ್ನು ಮಾಡಿದ್ದರು…ಈಗ ತನ್ನ ಅಜ್ಜಿ ತಾತನನ್ನ ಸ್ಫೂರ್ತಿಯಾಗಿ ತೆಗೆದುಕೊಂಡು ಸಂಯುಕ್ತ ಹೊರನಾಡು ತಮ್ಮ ದೇಹವನ್ನ ಕೂಡ ದಾನ ಮಾಡಿದ್ದಾರೆ …ಈ ಮೂಲಕ ಸಂಯುಕ್ತ ಹೊರನಾಡು ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಜನರಿಗೆ ಸ್ಫೂರ್ತಿಯಾಗಿದ್ದಾರೆ…