ಸಲಗಕ್ಕೆ ಶುಭಹಾರೈಸಿದ ಯಂಗ್ ರೆಬೆಲ್‌ಸ್ಟಾರ್..!

ಸ್ಯಾಂಡಲ್ ವುಡ್ ನಲ್ಲಿ ಫುಲ್ ಸೆನ್ಸೇಷನ್ ಕ್ರಿಯೇಟ್ ಮಾಡಿರೋ ದುನಿಯಾ ವಿಜಯ್ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ‘ಸಲಗ’ ಚಿತ್ರ ಇದೇ ಅಕ್ಟೋಬರ್ 14ರಂದು ಬಿಡುಗಡೆಯಾಗುತ್ತಿದೆ. ಇದಕ್ಕೆ ಚಿತ್ರರಂಗದಿಂದ ಖ್ಯಾತ ತಾರೆಯರೂ ಸೇರಿದಂತೆ ಅನೇಕರು ಶುಭಕೋರುತ್ತಿದ್ದಾರೆ. ನಟ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಕೂಡ ವಿಶೇಷ ಸಂದೇಶದ ಮುಖಾಂತರ ಚಿತ್ರತಂಡಕ್ಕೆ ಶುಭಕೋರಿದ್ದಾರೆ.
ಸಂದೇಶದಲ್ಲಿ ಅವರು ತಮ್ಮ ತಂದೆ ಅಂಬರೀಶ್ ಅವರ ‘ಒಂಟಿ ಸಲಗ’ ಚಿತ್ರದ ನೆನಪನ್ನು ಮಾಡಿಕೊಂಡಿದ್ದಾರೆ. ‘‘ಅಂದು ‘ಒಂಟಿ ಸಲಗ’, ಇಂದು ‘ಸಲಗ’. ಇದೇ ಅಕ್ಟೋಬರ್ 14ರಂದು ಸಲಗ ಬಿಡುಗಡೆಯಾಗುತ್ತದೆ. ದುನಿಯಾ ವಿಜಯ್, ಡಾಲಿ ಧನಂಜಯ್, ನಿರ್ಮಾಪಕ ಶ್ರೀಕಾಂತ್ ಅವರಿಗೆ ಶುಭಹಾರೈಕೆಗಳು. ಎಲ್ಲಾ ಸಿನಿ ಪ್ರೇಮಿಗಳು ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಿ’’ ಎಂದು ಅವರು ಸಂದೇಶದಲ್ಲಿ ತಿಳಿಸಿದ್ದಾರೆ.
****