ಉಪ್ಪಿಗೆ ಶಿವಣ್ಣನ ಮೇಲೆ ಲವ್ ಆಗಿತ್ತಂತೆ..!

ಸ್ಯಾಂಡಲ್ ವುಡ್ ನ ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರುವ ಚಿತ್ರ ‘ಸಲಗ’ ಇದೇ ಅಕ್ಟೋಬರ್ 14 ರಂದು ರಿಲೀಸ್ ಆಗಲಿದೆ. ಈಗಾಗಲೇ ಸಲಗ ಚಿತ್ರದ ಪ್ರಚಾರ ಜೋರಾಗಿ ನಡೆದಿದ್ದು ನಿನ್ನೆ (ಅ 10) ಸಲಗ ಚಿತ್ರದ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇವೆಂಟ್ ನಲ್ಲಿ ಭಾಗವಹಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸಲಗ ಚಿತ್ರಕ್ಕೆ ಶುಭ ಹಾರೈಸಿ ಮಾತನಾಡಿದ ಶಿವಣ್ಣ “ನಾನು ಮತ್ತು ಉಪೇಂದ್ರ ಓಂ ಸಿನಿಮಾ ಮಾಡುವಾಗ ಉಪೇಂದ್ರ ಪದೇ ಪದೇ ಬಂದು ನನ್ನ ತಲೆ ಕೂದಲ್ಲನ್ನು ಮುಖದ ಮೇಲೆ ಎಳೆಯುತ್ತಾ ಕಣ್ಣೆದುರಿಗೆ ತಂದು ಬಿಡ್ತಿದ್ರು ಆಗ ಅವರ ಮೇಲೆ ಕೋಪ ಬರ್ತಿತ್ತು ಎಂದು ಇಬ್ಬರ ಗೆಳೆತನದ ಸಲುಗೆಯನ್ನು ಮೆಲಕು ಹಾಕಿದ್ರು. ಉಪೇಂದ್ರ ನನ್ನನ್ನ ರತಸಪ್ತಮಿ ಸಿನಿಮಾದಿಂದ ಲವ್ ಮಾಡ್ತಿದ್ದೀನಿ ಅಂದಿದ್ರು, ನಾನು ಕೂಡ ಆವರನ್ನು ಲವ್ ಮಾಡ್ತೀನಿ ಎಂದರು. ಓಂ ಸಿನಿಮಾ ಇಡೀ ಭಾರತೀಯ ಚಿತ್ರರಂಗ ನಮ್ಮ ಕಡೆ ತಿರುಗಿ ನೋಡುವಂತೆ ಮಾಡಿತ್ತು. ಎಂದರು
****