ಸುದೀಪ್ – ವಿಜಿ ಮಧ್ಯೆ ‘ಸ್ಟಾರ್ ವಾರ್’ ಇಲ್ಲ..! ನಾವು ಅದೇ ದಿನ ಬರೋದು ಪಕ್ಕಾ..! ಕೆ.ಪಿ.ಶ್ರೀಕಾಂತ್

ಚಿತ್ರ ಮಂದಿರ ಹೌಸ್ ಫುಲ್ ಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದೇ ತಡ ಸ್ಯಾಂಡಲ್ ವುಡ್ ನ ಸಿನಿಮಾ ರಿಲೀಸ್ ವಾರ್ ಶುರುವಾದಂತೆ ಕಾಣ್ತಿದೆ. ಅಕ್ಟೋಬರ್ 14 ರಂದು ದುನಿಯಾ ವಿಜಯ್ ಅಭಿನಯದ ಸಲಗ ಮತ್ತು ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ 3 ಎರಡು ಚಿತ್ರಗಳು ಒಂದೇ ದಿನ ರಿಲೀಸ್ ಡೇಟ್ ಅನೌನ್ಸ್ ಮಾಡಿರುವುದು ನೋಡಿದರೆ ಇದು ಸ್ಟಾರ್ ವಾರ್ ಇರಬಹುದು ಎನ್ನುತ್ತಿದೆ ಗಾಂಧಿ ನಗರ.
ನಾವು ಅದೇ ದಿನ ಬರೋದು ಪಕ್ಕಾ..ಕೆ.ಪಿ.ಶ್ರೀಕಾಂತ್
ಆದರೆ ಪ್ರೆಸ್ ಮೀಟ್ ಮೂಲಕ ಸ್ಪಷ್ಟನೆ ನೀಡಿರುವ ಸಲಗ ನಿರ್ಮಾಪಕ ಕೆ.ಪಿ ಶ್ರೀಕಾಂತ್ ನಾವು ಸಲಗ ಚಿತ್ರ ರಿಲೀಸ್ ಮಾಡಲು ಒಂದು ವರ್ಷದಿಂದ ಕಾಯುತ್ತಿದ್ದೇವೆ ಇದು ಸ್ಟಾರ್ವಾರ್ ಅಲ್ಲಾ ಸೂರಪ್ಪ ಬಾಬು ಅವರೊಂದಿಗೂ ಸಲಗ ಸಿನಿಮಾ ರಿಲೀಸ್ ಡೇಟ್ ಬಗ್ಗೆ ಮೊದಲೇ ಮಾತನಾಡಿದ್ದೆ , ಸೂರಪ್ಪ ಬಾಬು ಕೂಡ ಅದೇ ಡೇಟ್ ಗೆ ಸಿನಿಮಾ ಅನೌನ್ಸ್ ಮಾಡಿದ್ದಾರೆ ಆದರೆ ಅವರ ನಿರ್ಧಾರ ತಡವಾಗಿದೆ ಎಂದರು.
‘ನಮ್ಮ ಚಿತ್ರಕ್ಕೆ ನಟ ಸುದೀಪ್ ಕೂಡ ಟ್ವೀಟ್ ಮಾಡಿ ಹಾರೈಸಿದ್ದಾರೆ. ನಟ ಸುದೀಪ್ ಮೊದಲಿನಿಂದಲೂ ‘ಸಲಗ’ ಜೊತೆಗಿದ್ದಾರೆ. ಕನ್ನಡದ 2 ಸಿನಿಮಾಗಳು ಒಟ್ಟಿಗೆ ಬರುತ್ತಿರುವುದರಿಂದ ಸಂತಸ ಇದೆ. ಕನ್ನಡ ಚಿತ್ರರಂಗದ ನಾವೆಲ್ಲರೂ ಒಂದಾಗಿದ್ದೇವೆ. ಒಂದೊಂದು ಊರಿನಲ್ಲಿ 2ಕ್ಕಿಂತಲೂ ಹೆಚ್ಚು ಟಾಕೀಸ್ಗಳಿವೆ. ಆದ್ದರಿಂದ 2 ಚಿತ್ರಗಳಿಗೆ ಟಾಕೀಸ್ ಸಮಸ್ಯೆ ಉಂಟಾಗುವುದಿಲ್ಲ’ ಎಂದರು ಅವರು.
****