News

RRR ಚಿತ್ರದ ‘ನಾಟು ನಾಟು’ ಸಾಂಗ್ ರಿಲೀಸ್..!

RRR ಚಿತ್ರದ ‘ನಾಟು ನಾಟು’ ಸಾಂಗ್ ರಿಲೀಸ್..!
  • PublishedNovember 11, 2021

ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ‘ಆರ್‌ಆರ್‌ಆರ್‌’  (ರೈಸ್‌–ರೋರ್‌–ರಿವೋಲ್ಟ್‌) ಚಿತ್ರ ಈಗಾಗಲೇ ಸಿನಿರಸಿಕರಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ಚಿತ್ರದ ಫಸ್ಟ್ ಲುಕ್, ಪೋಸ್ಟರ್, ಪ್ರೋಮೋ ಹಾಗೂ ಹಾಡುಗಳು ಸಹ ಬಿಡುಗಡೆಯಾಗಿ ಪ್ರೇಕ್ಷಕರಲ್ಲಿ ಸಂಚಲನವನ್ನುಂಟು ಮಾಡಿದೆ. ಈ ಚಿತ್ರದಲ್ಲಿ ರಾಮ್​ ಚರಣ್ ಮತ್ತು ಜ್ಯೂ.ಎನ್​ಟಿಆರ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಅಲಿಯಾ ಭಟ್ ಸಹ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಇದೀಗ ಚಿತ್ರತಂಡ ಚಿತ್ರದ ಹೊಸ ಲಿರಿಕಲ್​ ಸಾಂಗ್ ಬಿಡುಗಡೆ ಮಾಡಿದೆ.

ಹೌದು! ‘ಆರ್‌ ಆರ್‌ ಆರ್‌’ ಚಿತ್ರತಂಡ ಚಿತ್ರದ ‘ನಾಟು ನಾಟು’ ಹಾಡನ್ನು 5 ಭಾಷೆಗಳಲ್ಲಿ ರಿಲೀಸ್ ಮಾಡಿದೆ. ಕನ್ನಡ ವರ್ಷನ್‌ನಲ್ಲಿ​ ‘ಹಳ್ಳಿ ನಾಟು’ ಹಾಡು ಕೂಡ ಯೂಟ್ಯೂಬ್‌ನಲ್ಲಿ  ಸಖತ್ ಸೌಂಡು ಮಾಡುತ್ತಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೆ ವೀವ್ಸ್​ ಪಡೆದುಕೊಂಡಿದೆ. ಈ ಹಾಡಿಗೆ ರಾಮ್​ ಚರಣ್​ ಮತ್ತು ಜ್ಯೂ.ಎನ್​ಟಿಆರ್​ ಜಬರ್ದಸ್ತ್ ಸ್ಟೆಪ್ಸ್ ಹಾಕಿದ್ದಾರೆ. ಅಜಾದ್ ವರದರಾಜ್ ಕನ್ನಡ ವರ್ಷನ್‌ಗೆ ಸಾಹಿತ್ಯ ರಚಿಸಿದ್ದು, ರಾಹುಲ್ ಸಿಪ್ಲಿಗುಂಜ್ ಹಾಗೂ ಕಾಲ ಭೈರವ ದನಿಯಲ್ಲಿ ಹಾಡು ಮೂಡಿಬಂದಿದೆ. ಖ್ಯಾತ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಅವರು ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. 

****

Written By
Kannadapichhar

Leave a Reply

Your email address will not be published. Required fields are marked *