ರಾಕಿ ಭಾಯ್ ಹಬ್ಬಕ್ಕೆ ರಾಕಿಂಗ್ ಅಪ್ಡೇಟ್!
ಭಾರತೀಯ ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿರುವ ನಟ ಅಂದ್ರೆ ಯಶ್. ನವೀನ್ ಕುಮಾರ್ ಆಗಿದ್ದ ಹಳ್ಳಿ ಹೈದ ಯಶ್ ಆಗಿ ಜನರ ಮನಸಿಗೆ ಲಗ್ಗೆ ಇಟ್ಟ,ಈಗ ರಾಕಿ ಭಾಯ್ ಅನ್ನೋ ರೇಂಜ್ ಗೆ ಬೆಳೆದ ಕನ್ನಡದ ಪ್ರತಿಭಾನ್ವಿತ ನಟನ ಹುಟ್ಟುಹಬ್ಬ ನಾಳೆ. ಅಭಿಮಾನಿಗಳು ತಮ್ಮ ಬಾಸ್ ನ ಸೆಲೆಬ್ರೇಟ್ ಮಾಡೋಕೆ ಎಲ್ಲಾ ತಯಾರಿ ಮಾಡ್ಕೋತಿದ್ದಾರೆ.
ಇನ್ನೊಂದು ಕಡೆ ಇಷ್ಟೆಲ್ಲಾ ವರ್ಷ ತನ್ನ ಜೊತೆಗೆ ತನಗೆ ಎಲ್ಲಾ ಟೈಮ್ ನಲ್ಲೂ ಸಾಥ್ ನೀಡಿದ ಫ್ಯಾನ್ಸ್ಗಳಿಗಾಗಿ ತಾವು ಉಡುಗೊರೆ ತೊಗೊಳೋ ದಿನ ತಾನೆ ಅಭಿಮಾನಿಗಳಿಗೆ ಗಿಫ್ಟ್ ಕೊಡೋಕೆ ರೆಡಿ ಆಗಿದ್ದಾರೆ.
ಇವತ್ತಿನ ಚಿತ್ರ ತಂಡದ ಅಪ್ಡೇಟ್ ಪ್ರಕಾರ ನಾಳೆ ಯಶ್ ಅವರ ಮೋಸ್ಟ್ ಅವಯ್ಟೆಡ್ ಸಿನಿಮಾವಾದ ‘ಟಾಕ್ಸಿಕ್’ ನ ವತಿಯಿಂದ ಯಶ್ ಬರ್ತ್ ಡೇ ಗೆ ಹೊಸ ಸರ್ಪ್ರೈಸ್ ಕಾದಿದೆ. ಸರ್ಪ್ರೈಸ್ ಏನು ಅನ್ನೋದು ಗೊತ್ತಿಲ್ಲ ಆದ್ರೆ ನಾಳೆ 10.10 ಕ್ಕೆ ಅಭಿಮಾನಿಗಳಿಗೆ ದೊಡ್ಡ ಉಡುಗೊರೆ ಅಂತೂ ಪಕ್ಕ ಅನ್ನೋದನ್ನ ಕನ್ಫರ್ಮ್ ಮಾಡಿದ್ದಾರೆ.