new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಬಸ್ ಸ್ಟ್ಯಾಂಡ್ To ಗ್ಲೋಬಲ್ ಸ್ಟಾರ್: ಮೆಟ್ರೋದಲ್ಲೂ ರಾಕಿ ಭಾಯ್‌ ಹವಾ!

ಬಸ್ ಸ್ಟ್ಯಾಂಡ್ To ಗ್ಲೋಬಲ್ ಸ್ಟಾರ್: ಮೆಟ್ರೋದಲ್ಲೂ ರಾಕಿ ಭಾಯ್‌ ಹವಾ!
  • PublishedJanuary 6, 2026

ಒಂದು ಕಾಲದಲ್ಲಿ ಬಸ್‌ ಸ್ಟ್ಯಾಂಡ್‌ ನಲ್ಲಿ ಮಲಗಿದ್ದ ಹುಡುಗ ಇಂದು ಇಡೀ ಜಗತ್ತೇ ತನ್ನನ್ನ ಮತ್ತು ತನ್ನ ಸಿನಿಮಾವನ್ನ ತಿರುಗಿ ನೋಡುವಂತೆ ಮಾಡಿದ್ದಾರೆ.ಜಂಬದ ಹುಡುಗಿಯಲ್ಲಿ ಸಣ್ಣ ಪಾತ್ರ ಮೂಲಕ ಎಂಟ್ರಿ ಮಾಡಿದ ನವೀನ್‌ ಕುಮಾರ ಈಗ ಯಶ್‌ ಆಗಿ ಸಂಚಲನ ಮೂಡಿಸಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಶುರುವಾದ ಇವರ ಸಿನಿ ಪಯಣ ಇದೀಗ ರಾಕಿ ಭಾಯ್ ಆಗಿ ವಿಶ್ವಾದಾದ್ಯಂತ ಪಸರಿಸಿದೆ.

ಕೆಜಿಎಫ್‌ ಮೂಲಕ ಇತಿಹಾಸ ಸೃಷ್ಟಿಸಿರುವ ಯಶ್ ಅವರ 40 ನೇಯ ಹುಟ್ಟುಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಜನವರಿ 8 ರಂದು ಯಶ್ ಅವರ ಹುಟ್ಟುಹಬ್ಬ. ಈ ದಿನಕ್ಕಾಗಿ ಅವರ ಅಭಿಮಾನಿಗಳು ಕಾತುರತೆಯಿಂದ ಕಾಯುತ್ತಿದ್ದಾರೆ. ಅವರ ಹುಟ್ಟು ಹಬ್ಬಕ್ಕಾಗಿ ಅಭಿಮಾನಿಗಳು ಅನೇಕ ಯೋಜನೆಯನ್ನು ಮಾಡಿದ್ದಾರೆ.ಇದೀಗ ಯಶ್‌ ಅವರ ಸ್ನೇಹಿತರು ಮತ್ತು ಅಭಿಮಾನಿಗಳು ಇದೇ ಮೊದಲ ಬಾರಿಗೆ ಸಂಚಾರಿ ಜೀವನಾಡಿಯಾಗಿರುವ ಬೆಂಗಳೂರಿನ ಮೆಟ್ರೋ ರೈಲುಗಳಲ್ಲಿ ಯಶ್ ಅವರ ಪೋಸ್ಟರ್‌ಗಳು ಮತ್ತು ವಿಶೇಷ ವಿನ್ಯಾಸಗಳು ಅವರ ಜನ್ಮ ದಿನದ ಸಂಭ್ರಮಕ್ಕಾಗಿ ಹಾಕಿದ್ದಾರೆ.ಇದು ಯಶ್‌ ಅಭಿಮಾನಿಗಳು ಮತ್ತು ಅವರ ಸ್ನೇಹಿತರು ಪ್ರೀತಿಯಿಂದ ಮಾಡಿರುವ ಯೋಜನೆ.ಒಟ್ನಲ್ಲಿ ಯಶ್‌ ಅವರ ಹುಟ್ಟು ಹಬ್ಬವನ್ನು ದೊಡ್ಡ ಹಬ್ಬದಂತೆ ಮಾಡಲು ಸಜ್ಜಾಗಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *