ಕಿಚ್ಚನ ಈ ಗುಣವನ್ನು ಹಾಡಿ ಹೊಗಳಿದ ರಾಕ್ ಲೈನ್!
ಕನ್ನಡ ಸಿನಿಮಾ ರಂಗದ ಅದ್ಬುತ ನಟ ಹಾಗೂ ನಿರ್ದೇಶಕ ರಾಕ್ ಲೈನ್ ವೆಂಕಟೇಶ್ ಕಿಚ್ಚನ ಈ ಗುಣವನ್ನು ಹೊಗಳಿದ್ದಾರೆ . ಹಾಗಾದರೆ ಆ ಗುಣ ಯಾವ್ದು? ಅಂತ ನಮ್ಮ ಈ ಸ್ಟೋರಿಲಿ ಹೇಳ್ತಿವಿ.
‘ಮಾರ್ಕ್’ ಚಿತ್ರದ ಟ್ರೈಲರ್ ಲಾಂಚ್ ಇಂದು ನಡೆಯಿತು. ಈ ಕಾರ್ಯಕ್ರಮಕ್ಕೆ ಬಂದಿದ್ದ ರಾಕ್ ಲೈನ್ ವೆಂಕಟೇಶ್ ಅವರು ಸುದೀಪ್ ಅವರನ್ನು ಹಾಡಿ ಹೊಗಳಿದ್ದಾರೆ.
ಅವರು ಮಾತನಾಡುತ್ತ “ಕಲಾವಿದರನ್ನ ಸಿಕ್ಕಾಪಟ್ಟೆ ಪ್ರೋತ್ಸಾಹಿಸುತ್ತಾರೆ ಆ ದೊಡ್ಡ ಗುಣ ಅವರಲ್ಲಿದ್ದೆ. ಹಾಗಾಗಿ ಜನಗಳ ಮನಸ್ಸನ್ನು ಅವರು ಗೆದ್ದಿದ್ದಾರೆ ಎಂದು ಹೇಳಿದರು.
ಈ ಮಾತನ್ನು ಹೇಳುತ್ತಾ ಅವರು ‘ಮಾರ್ಕ್’ ಸಿನಿಮಾ ಟ್ರೈಲರ್ ಅನ್ನು ಮತ್ತೆ ಮತ್ತೆ ನೋಡ್ಬೇಕು ಎನ್ನುವಷ್ಟು ಚೆನ್ನಾಗಿದೆ ಎಂದು ಹೇಳುತ್ತಾ ಶುಭ ಕೋರಿದರು.