ಗೋವಾದಲ್ಲೂ ಜೊರಾಗಿದೆ ರಾಕಿ ಭಾಯ್ ಹವಾ..!

ಕೆಜಿಎಫ್ ಚಾಪ್ಟರ್ 1 ಬಿಡುಗಡೆ ಆಗಿ ಈಗಾಗಲೇ ಮೂರು ವರ್ಷಗಳೇ ಕಳೆಯುತ್ತಾ ಬಂದಿದೆ, ಇನ್ನು ಚಾಪ್ಟರ್ 2 ಮುಂದಿನ ಏಪ್ರಿಲ್ 2022 ಗೆ ಬಿಡುಗಡೆ ಆಗಬೇಕಿದೆ. ಆದರೂ ರಾಕಿಂಗ್ ಸ್ಟಾರ್ ಯಶ್ ಫ್ಯಾನ್ಸ್ ರಾಕಿ ಭಾಯ್ ಮೇಲಿನ ಕ್ರೇಜ್ ಮಾತ್ರ ಜೋರಾಗಿದೆ. ಹೌದು ರಾಕಿಂಗ್ ಸ್ಟಾರ್ ಯಶ್ ಗೆ ರಾಜ್ಯದಲ್ಲಿ ಅಲ್ಲದೆ ದೇಶದ ಇತರೆ ರಾಜ್ಯಗಳಲ್ಲಿಯೂ ಅಭಿಮಾನಿಗಳಿದ್ದಾರೆ ಕೆಜಿಎಫ್ ಎಂಬ ಪ್ಯಾನ್ ಇಂಡಿಯಾ ಚಿತ್ರದ ಮೂಲಕ ಸ್ಟಾರ್ ಇಮೇಜ್ ಇನ್ನೂ ಹೆಚ್ಚಾಗಿದೆ.
ಇದಕ್ಕೆ ಉದಾಹರಣೆ ಎಂದರೆ ಯಶ್ ಇಂದು (ಅ22) ಗೋವಾ ಕ್ಕೆ ವಿಸಿಟ್ ಮಾಡಿದ್ದ ವೇಳೆ ಅಲ್ಲಿಯ ಜನರು ಯಶ್ ಅವರನ್ನು ನೋಡಲು ಫೋಟೊ ತೆಗೆಯಲು ಮುಗಿ ಬಿದ್ದಿದ್ದಾರೆ. ಅಂದ್ರೆ ಗೋವಾದಲ್ಲೂ ಯಶ್ ಫ್ಯಾನ್ಸ್ ಕ್ರೇಜ್ ಜೋರಾಗಿದೆ. ಕನ್ನಡ ಭಾಷೆಯ ಜನರು ಗೋವಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಯಶ್ ಕನ್ನಡ ನಟನಾಗಿರುವುದರಿಂದ ಅವರ ಮೇಲಿನ ಅಭಿಮಾನ ಹೆಚ್ಚಾಗಲು ಮತ್ತೊಂದು ಕಾರಣ.

****