ಯಶ್ ಬರ್ತಡೇ : ರಾಕಿಂಗ್ ಹಬ್ಬಕ್ಕೆ ಕ್ಷಣಗಣನೆ
ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟು ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ .ಈಗಾಗಲೇ ಯಶ್ ಅಭಿಮಾನಿ ಬಳಗದಲ್ಲಿ ತಮ್ಮ ʼಬಾಸ್ʼ ಜನ್ಮ ದಿನದ ಅಂಗವಾಗಿ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದಾರೆ.ಇದೀಗ ಯಶ್ ಅವರ ಅಭಿಮಾನಿಗಳು ಹಾಗು ಸ್ನೇಹಿತರಿಂದ ರಾಜ್ಯದ ಹೆದ್ದಾರಿಗಳಲ್ಲಿ ಯಶ್ ಅವರ ಹುಟ್ಟು ಹಬ್ಬದ ಬ್ಯಾನರ್ಗಳನ್ನು,ಕಟೌಟ್ ಗಳನ್ನು ಹಾಕಲಾಗಿದೆ.ಜನವರಿ 8 ಕ್ಕೆ ಯಶ್ ಅವರು 40 ನೇ ವರ್ಷಕ್ಕೆ ಕಾಲಿಡಲಿದ್ದಾರೆ.
ಅಭಿಮಾನಿಗಳೊಂದಿಗೆ ಸಂಭ್ರಮ?
ಈ ವರ್ಷ ಯಶ್ ಅವರು ತಮ್ಮ ಜನ್ಮ ದಿನವನ್ನ ಅಭಿಮಾನಿಗಳ ಜೊತೆಗೆ ಆಚರಿಸಿಕೊಳ್ಳುತಾರೋ ಅಥವ ಫ್ಯಾಮಿಲಿ ಜತೆಗೆ ಸೆಲೆಬ್ರೇಟ್ ಮಾಡಿಕೊಳ್ಳುತ್ತಾರೋ ಎಂಬುದು ಯಾರಿಗು ಗೊತ್ತಿಲ್ಲ. 2024 ರಲ್ಲಿ ಗದಗ ಜಿಲ್ಲೆಯ ಲಕ್ಷ್ಮೇಶ್ವರಲ್ಲಿ ಅವರ 25 ಅಡಿ ಎತ್ತರದ ಕಟೌಟ್ ನಿಲ್ಲಿಸುವಾಗ ವಿದ್ಯುತ್ ಸ್ಪರ್ಷಿಸಿ 3 ಮಂದಿ ಅಭಿಮಾನಿಗಳು ಮೃತ ಪಟ್ಟಿದ್ದರು.ಹಾಗಾಗಿ ಆ ಘಟನೆಯಿಮದ ಮನನೊಂದು ಯಶ್ ಆ ವರ್ಷ ಜನ್ಮ ದಿನವನ್ನ ಆಚರಿಸಿಕೊಂಡಿಲ್ಲ.ಕಳೆದ ವರುಷವೂ ಅಭಿಮಾನಿಗಳ ಸುರಕ್ಷತೆಗಾಗಿ ಮತ್ತು ಅನಗತ್ಯ ಆಡಂಬರ ಬೇಡವೆಂದು ಸಿಂಪ್ಪಲ್ಲಾಗಿ ಕುಟುಂಬದೊಂದಿಗೆ ಗೋವಾದಲ್ಲಿ ಜನ್ಮದಿನವನ್ನು ಕಳೆದಿದ್ದರು. ಈ ವರ್ಷ ಯಶ್ ಅವರು ಏನ್ ಮಾಡ್ತಾರೆ ಅನ್ನೋದು ಯಾರಿಗು ತಿಳಿದಿಲ್ಲ.
ಟಾಕ್ಸಿಕ್ ಬಿಗ್ ಅಪ್ಡೇಟ್!
ಯಶ್ ಅವರು 40ನೇ ಬರ್ತಡೇ ಗೆ ಟಾಕ್ಸಿಕ್ ಚಿತ್ರದ ಟೀಸರ್ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಹಲವರಿಗೆ ಅನಿಸಿದೆ.ಈಗಾಗಲೇ ಚಿತ್ರದಲ್ಲಿ ನಟಿಸಿರುವ ಮೂರು ಮಹಿಳಾ ಕಲಾವಿದರ ಪೋಸ್ಟರ್ ರಿಲೀಸ್ ಆಗಿದ್ದು ಜನರಲ್ಲಿ ಕುತೂಹಲ ಮೂಡಿಸಿದೆ.ಯಶ್ ಹುಟ್ಟು ಹಬ್ಬದಂದು ಟೀಸರ್ ಬಿಡ್ತಾರೋ ಅತ್ವ ಬೇರೆ ಏನಾದ್ರು ಸರ್ಪ್ರೈಸ್ ಇದೆಯೋ ಗೊತ್ತಿಲ್ಲ. ಒಟ್ನಲ್ಲಿ ಅವತ್ತು ಟಾಕ್ಸಿಕ್ ಸಿನಿಮಾದ ದೊಡ್ಡ ಅಪ್ಡೇಟ್ ಸಿಗೋದಂತೂ ಪಕ್ಕ ಅಂತಿದ್ದಾರೆ ರಾಕಿ ಭಾಯ್ ಅಭಿಮಾನಿಗಳು.