ಡಿಸೆಂಬರ್ 9 ರಾಕಿಂಗ್ ಸ್ಟಾರ್ ಯಶ್ – ರಾಧಿಕಾ ಪಂಡಿತ್ ಗೆ ವಿಶೇಷ ದಿನ
ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್ ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಪೇರ್ ಗೆ ಇಂದು (ಡಿಸೆಂಬರ್ 9) ವಿಶೇಷವಾದ ದಿನ. ಹೌದು ರಾಧಿಕಾ ಹಾಗೂ ಯಶ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಿನವಿದು. ಇಂದು ಯಶ್ ಮತ್ತು ರಾಧಿಕಾ ಪಂಡಿತ್ ಗೆ ಸಂಭ್ರಮದ 5ನೇ ವರ್ಷದ ಮದುವೆ ವಾರ್ಷಿಕೋತ್ಸವ. ಈ ಸುಂದರ ಜೋಡಿಗೆ ಈಗ ಐರಾ ಮತ್ತು ಯಥರ್ವ್ ಯಶ್ ಎನ್ನುವ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಯಶ್ ಮತ್ತು ರಾಧಿಕಾ ದಂಪತಿಗೆ ಎಲ್ಲರೂ ಶುಭ ಕೋರುತ್ತಿದ್ದಾರೆ.
ಯಶ್ ಮತ್ತು ರಾಧಿಕಾ ಪಂಡಿತ್ ಇಬ್ಬರು ಒಟ್ಟಿಗೆ ಬಣ್ಣದ ಬದುಕಿನ ಪಯಣ ಶುರು ಮಾಡಿದವರು. ಕಿರುತೆರೆಯಲ್ಲಿ ಒಟ್ಟಿಗೆ ನಟಿಸಿ, ಸಿನಿಮಾರಂಗದಲ್ಲೂ ಒಟ್ಟಿಗೆ ಮಿಂಚಿದವರು. ಯಶ್ ಮತ್ತು ರಾಧಿಕಾ ಪಂಡಿತ್ ಈ ವರೆಗೆ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೊಗ್ಗಿನ ಮನಸ್ಸು ಸಿನಿಮಾ ದಲ್ಲಿ ಮೊದಲ ಬಾರಿಗೆ ಜೋಡಿಯಾಯಿತು. ಆ ನಂತರ ಡ್ರಾಮಾ, ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ, ಸಂತು ಸ್ಟ್ರೈಟ್ ಫಾರ್ವರ್ಡ್ ಸಿನಿಮಾದಲ್ಲಿ ನಟಿಸಿದ್ರು. ಉತ್ತಮ ಸ್ನೇಹಿತರಾಗಿದ್ದ ರಾಧಿಕಾ ಮತ್ತು ಯಶ್ ನಂತರ ಪ್ರೇಮಿಗಳಾಗಿ ಈಗ ಗಂಡ-ಹೆಂಡತಿಯಾಗಿ ಸಂತೋಷದ ಜೀವನ ನಡೆಸುತ್ತಿದ್ದಾರೆ.

ರಾಧಿಕಾ ಪಂಡಿತ್ ತಮ್ಮ ಮದುವೆ ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಾಧಿಕಾ ಹಂಚಿಕೊಂಡಿರುವ ಪೋಸ್ಟ್ ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಶುಭಾಯಗಳು ಹರಿದು ಬರುತ್ತಿವೆ. ಯಶ್ ಜೊತೆಗಿರುವ ಫೊಟೋ ಹಂಚಿಕೊಂಡ ರಾಧಿಕಾ ಹೀಗೆ ಬರೆದುಕೊಂಡಿದ್ದಾರೆ.

“ನಿಮ್ಮನ್ನು ಉತ್ತಮಗೊಳಿಸುವ, ಪ್ರೀತಿಯಲ್ಲಿ ಮತ್ತು ಜೀವನದಲ್ಲಿ ನಿಮ್ಮನ್ನು ಪ್ರೇರೇಪಿಸುವ ಮತ್ತು ಪ್ರೋತ್ಸಾಹಿಸುವ, ನೀವು ನಿರ್ಲಕ್ಷಿಸುವ ಕನಸುಗಳು ಮತ್ತು ಗುರಿಗಳ ಕಡೆಗೆ ನಿಮ್ಮನ್ನು ತಳ್ಳಿದವರು, ನಿಸ್ವಾರ್ಥವಾಗಿ ತಮ್ಮ ಸಮಯವನ್ನು ತ್ಯಾಗ ಮಾಡುವವರು, ನೀವು ಧೈರ್ಯಶಾಲಿ ಸುಸಜ್ಜಿತ ವ್ಯಕ್ತಿಯಾಗಲು ಸಹಾಯ ಮಾಡುವವರು ಯಾರಾದರು ಇದ್ದರೆ, ಅದು ಪವಿತ್ರವಾದದ್ದು. ನೀವು ಅಂತಹ ಪ್ರೀತಿಯನ್ನು ಹಿಡಿದುಕೊಳ್ಳಿ” ಎಂದು ರಾಧಿಕಾ ಬರೆದುಕೊಂಡಿದ್ದಾರೆ.

****