ZEE ಜೊತೆಗೆ ‘ರಾಕಿ ಭಾಯ್’ 100+ ಕೋಟಿ ಡೀಲ್..!

ರಾಕಿಂಗ್ ಸ್ಟಾರ್ ಯಶ್ ಇಡೀ ಇಂಡಿಯಾ ಸಿನಿಮಾ ಇಂಡಸ್ಟ್ರಿಯ ಸಂಚಲ. ಕೆ.ಜಿ.ಎಫ್ 2 ರಿಲೀಸ್ ಗೂ ಮುನ್ನವೇ ಸಾವಿರ ಕೋಟಿ ಬ್ಯುಸಿನೆಸ್ ನಿರೀಕ್ಷೆ ಹುಟ್ಟಿಸಿದೆ. ಈ ನಡುವೆ ರಾಕಿ ಭಾಯ್ ಫ್ಯಾನ್ಸ್ ಕಾಲರ್ ಎಗರಿಸಿ, ಎದೆ ತಟ್ಟಿಕೊಂಡು ನಮ್ ಬಾಸ್ ಅಂದ್ರೆ ಸುಮ್ನೇನಾ ಅಂತ ಹೇಳೋಕ್ಕೆ ಇನ್ನೊಂದು ಬಂಪರ್ ನ್ಯೂಸ್ ಸಿಕ್ಕಿದೆ. ಹೌದು ರಾಕಿಂಗ್ ಸ್ಟಾರ್ ಯಶ್ ಮೇಲೆ ಬಂಡವಾಳ ಹೂಡೋದಕ್ಕೆ ದೇಶದ ಅತ್ಯಂತ ಪ್ರಭಾವಿ ಮತ್ತು ನಂ.1 ಎಂಟ್ರಟೈನ್ಮೆಂಟ್ ನೆಟ್ ವರ್ಕ್ ಜೀ ಸ್ಟುಡಿಯೋಸ್ ಸಜ್ಜಾಗಿದೆ.
ಈಗಾಗ್ಲೇ ರಾಕಿಂಗ್ ಸ್ಟಾರ್ ಜೊತೆಗೆ ದೊಡ್ಡ ಸಿನಿಮಾಗಳ ಡೀಲ್ ಗೆ ಸಹಿ ಹಾಕಿಸಿಕೊಂಡಿರೋ ಜೀ ಸ್ಟುಡಿಯೋಸ್, ಮಫ್ತಿ ಡೈರೆಕ್ಚರ್ ನರ್ತನ್ ನಿರ್ದೇಶನದಲ್ಲಿ ಮೂಡಿ ಬರಲಿರೋ ಯಶ್ ಅವ್ರ ಮುಂದಿನ ಪ್ಯಾನ್ ಇಂಡಿಯಾ ಸಿನಿಮಾಗೆ ನೂರಾರು ಕೋಟಿ ಬಂಡವಾಳ ಹೂಡ್ತಿದೆ. ಮೂಲಗಳ ಪ್ರಕಾರ ಜೀ ಸ್ಟುಡಿಯೋಸ್ ಬರೀ ಒಂದು ಸಿನಿಮಾಗಲ್ಲ, ಸಾಲು ಸಾಲು ಸಿನಿಮಾಗಳಿಗೆ ರಾಕಿಂಗ್ ಸ್ಟಾರ್ ಜೊತೆಗೆ ಟೈಯಪ್ ಆಗೋದಕ್ಕೆ ಹೊರಟಿದೆಯಂತೆ. ಅದ್ರಂತೆ ಮೊದಲಿಗೆ ರಾಕಿ ಭಾಯ್ ಮುಂದಿನ ಚಿತ್ರದ ನಿರ್ಮಾಣ ಜವಾಬ್ದಾರಿಯನ್ನ ವಹಿಸಿಕೊಂಡಿದೆ.

ಅಂದ್ಹಾಗೆ ಈ ಹಿಂದೆ ಜೀ ಸ್ಟುಡಿಯೋಸ್ ಸಲ್ಮಾನ್ ಖಾನ್ ಸೇರಿದಂತೆ ಬಾಲಿವುಡ್ ನ ಟಾಪ್ ನಟರೊಂದಿಗೆ ಈ ರೀತಿ ಸಿನಿಮಾಗಳನ್ನ ನಿರ್ಮಿಸಿತ್ತು. ಇದೀಗ ಇದೇ ಮೊದಲ ಬಾರಿಗೆ ಕನ್ನಡದ ನಟನೊಂದಿಗೆ ಇಷ್ಟು ದೊಡ್ಡ ಮಟ್ಟದ ಸಿನಿಮಾ ಡೀಲ್ ಮಾಡ್ತಿದೆ.
