News

ʻರಾಬರ್ಟ್‌ʼ ಶಿವರಾತ್ರಿಗೆ ರಿಲೀಸ್‌ ಆಗ್ತಿರೋದ್ಯಾಕೆ ಗೊತ್ತಾ?

ʻರಾಬರ್ಟ್‌ʼ ಶಿವರಾತ್ರಿಗೆ ರಿಲೀಸ್‌ ಆಗ್ತಿರೋದ್ಯಾಕೆ ಗೊತ್ತಾ?
  • PublishedJanuary 14, 2021

ಜನವರಿ 10ನೇ ತಾರೀಖು ಲೈವ್‌ ಬರುವ ಮೂಲಕ ಡಿ-ಬಾಸ್‌ ದರ್ಶನ್‌, ತಮ್ಮ ಬಹುನಿರೀಕ್ಷಿತ ಸಿನಿಮಾ ʻರಾಬರ್ಟ್‌ʼ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ್ರು, ಈ ಬಾರಿ ತಮ್ಮ ಬರ್ತ್‌ಡೇ ದಿನ ಅಭಿಮಾನಿಗಳಿಗೆ ನೋಡಲು ಸಿಗುತ್ತಿಲ್ಲ, ಆದ್ರೆ ಅದರ ಬದಲಿಗೆ ಮಾರ್ಚ್‌ 11ನೇ ತಾರೀಖು ತೆರೆಮೇಲೆ ನೋಡೋಕೆ ಸಿಗಲಿದ್ದಾರೆ. ಮಹಾಶಿವರಾತ್ರಿಯಂದು ರಾಬರ್ಟ್‌ ಸಿನಿಮಾ ರಿಲೀಸ್‌ ಆಗ್ತಾ ಇದೆ.

ಸದ್ಯಕ್ಕಿರುವ ಮಾಹಿತಿ ಪ್ರಕಾರ, ಇಂಡಸ್ಟ್ರಿ ಎದುರು ನೋಡ್ತಾ ಇರೋ ಬಿಗ್‌ ಸಿನಿಮಾ ಎಂಟ್ರಿ ರಾಬರ್ಟ್‌ ನಿಂದ ಆಗಲಿದೆ. ಕರೋನಾ ಪ್ಯಾನ್‌ ಡೆಮಿಕ್‌ ದೂರ ಮಾಡಿ, ಚಿತ್ರರಂಗ ಮೊದಲಿನಂತೆ ಕೆಲಸ ಶುರುಮಾಡಲು ಇದು ನಾಂದಿಯಾಗಲಿದೆ. ಈಗಾಗ್ಲೆ ಸಿನಿಮಾ ರಿಲೀಸ್‌ಗೆ ಅವಕಾಶ ನೀಡಿದ್ರು, ಶೇ 50ರಷ್ಟು ಜನ ಸಿನಿಮಾ ನೋಡಲು ಅವಕಾಶವಿದ್ರು, ಜನ ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್‌ಗೆ ಬರ್ತಾ ಇಲ್ಲ, ರಾಬರ್ಟ್‌ ಸಿನಿಮಾ ರಿಲೀಸ್‌ ಟೈಮ್‌ಗೆ ಶೇ.100 ರಷ್ಟು ಥಿಯೇಟರ್‌ ಸಿನಿಮಾ ವೀಕ್ಷಣೆಗೆ ಅನುಮತಿ ಸಿಕ್ಕರೆ, ರಾಬರ್ಟ್‌ ಅಬ್ಬರ ಸ್ಯಾಂಡಲ್‌ ವುಡ್‌ನ ರಂಗೇರಿಸಲಿದೆ.

ಶಿವರಾತ್ರಿ ದಿನದಂದೇ ಸಿನಿಮಾ ರಿಲೀಸ್‌ ಹಿಂದೆ ಮತ್ತೊಂದು ಸ್ವಾರಸ್ಯಕರ ವಿಷಯವಿದೆ. ಸಿನಿಮಾದ ಟೈಟಲ್‌ ರಾಬರ್ಟ್‌, ದರ್ಶನ್‌ ರಾಬರ್ಟ್‌ ಪಾತ್ರದಲ್ಲಿ ಮಿಂಚ್ತಾ ಇದ್ದಾರೆ. ಆದ್ರೆ ಸಿನಿಮಾದಲ್ಲಿ ದರ್ಶನ್‌ ಹನುಮನ ಭಕ್ತ, ಈಗ ಶಿವರಾತ್ರಿ ದಿನ ರಿಲೀಸ್‌ ಆಗ್ತಾ ಇದೆ. ಜಾತ್ಯಾತೀತ, ಮಾನವಧರ್ಮದ ಸಾರ ಹೇಳ್ತಿದ್ಯಾ ದರ್ಶನ್‌ರ ಈ ಸಿನಿಮಾ? ಹೌದು ಹಾಗೊಂದು ಆಲೋಚನೆ ಇದ್ದರೆ ನಿಜಕ್ಕೂ ಇದಕ್ಕಿಂತ ಉತ್ತಮ ಸಿನಿಮಾದಿಂದ ಇಂಡಸ್ಟ್ರಿ ರಿಸ್ಟಾರ್ಟ್‌ಗೆ ಸಿಗಲಾರದು. ತರುಣ್‌ ಸುಧೀರ್‌ ಆಕ್ಷನ್‌ ಕಟ್‌ ಹೇಳ್ತಿರೋ ರಾಬರ್ಟ್‌ ಸಿನಿಮಾಕ್ಕೆ ಉಮಾಪತಿ ಶ್ರೀನಿವಾಸ್‌ ಹಣ ಹೂಡಿದ್ದಾರೆ.

Written By
Kannadapichhar

Leave a Reply

Your email address will not be published. Required fields are marked *