ರಿಷಭ್ ಹಾಗೂ ಮಡದಿ ಪ್ರಗತಿಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮ
ರಿಷಭ್ ಶೆಟ್ಟಿಯವರು ತಮ್ಮ ಪತ್ನಿ ಪ್ರಗತಿಯವರನ್ನು ಮದುವೆಯಾಗಿ ನಿನ್ನೆಗೆ ಒಂಬತ್ತು ವರ್ಷವಾಯಿತು. ಈ ಸಂಧರ್ಭದಲ್ಲಿ ರಿಷಭ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ “ಬಂಧ ಬೆಸೆದು,ಚಂದ ಹೊಸೆದು ಒಂದಾದ ದಾಂಪತ್ಯಕ್ಕಿಂದು ಒಂಬತ್ತು ತುಂಬಿದೆ.ಹಿಂದೆ ನೋಡಿದರೆ ಜೊತೆ ಕಳೆದ ಪ್ರತಿ ಗಳಿಗೆಯೂ ಸಿಹಿ ನೆನಪಿನ ನಿಕ್ಷೇಪಗಳಾಗಿವೆ.ಅಲ್ಲಿ ನಲಿವಿದೆ, ನೋವಿದೆ, ನಗುವಿದೆ, ಸರಸವಿರಸಗಳಿವೆ… ಎಲ್ಲವನ್ನು ತೂಗುವ ಸಮರಸವಿದೆ… ಎಲ್ಲಕ್ಕೂ ಮಿಗಿಲಾಗಿ ಕೊನೆಯಾಗದ ಒಲವಿದೆ… ಆ ಒಲವು ಬೀರಿದ ಬೆಳಕು, ತಂದ ನೆಮ್ಮದಿ, ತುಂಬಿದ ಆತ್ಮ ವಿಶ್ವಾಸಗಳೇ ಇಂದು ನನ್ನನ್ನು ನಾನಾಗಿಸಿದೆ.ನನ್ನ ಸತಿಯಾಗಿ, ಸಾಥಿಯಾಗಿ, ಸೌಭಾಗ್ಯ ದೇವತೆಯಾಗಿ, ಹಿಡಿಯಷ್ಟಿದ್ದ ಬದುಕನ್ನು ಕಡಲಷ್ಟು ಅಗಾಧವಾಗಿಸಿದ ನಿನಗೆ ಮದುವೆಯ ವಾರ್ಷಿಕೋತ್ಸವದ ಶುಭಾಶಯಗಳು “ಎಂದು ಬರೆದು ಪೋಸ್ಟ್ ಮಾಡಿಕೊಂಡಿದ್ದಾರೆ.