ಹರಕೆ ತೀರಿಸಿದ ರಿಷಬ್ ಶೆಟ್ಟಿ
ವಿಶ್ವಕ್ಕೆ ತುಳುನಾಡಿನ ದೈವಕೋಲದ ಮಹತ್ವವನ್ನು ಸಾರಿದ ರಿಷಬ್ ಶೆಟ್ಟಿ, ಕಾಂತರ ಯಶಸ್ಸಿನ ನಂತರ ತಮ್ಮ ಹರಕೆಯನ್ನು ತೀರಿಸಿದ್ದಾರೆ.
ಹೌದು, ಮಂಗಳೂರಿನ ಬಾರೆಬೈಲ್ ವರಾಹ ಪಂಜುರ್ಲಿ, ಜಾರಂದಾಯ ಮತ್ತು ಬಂಟ ದೈವಸ್ಥಾನದಲ್ಲಿ ರಿಷಬ್ ಶೆಟ್ಟಿ ತಮ್ಮ ಪತ್ನಿ ಮಕ್ಕಳ ಜೊತೆಗೆ ನೆಮೋತ್ಸವಕ್ಕೆ ಆಗಮಿಸಿದ್ದಾರೆ.ಜೊತೆಗೆ ಚಿತ್ರದ ನಿರ್ಮಾಪಕ ವಿಜಯ್ ಕಿರಂಗದೂರು, ನಿರ್ದೇಶಕ ಸಂತೋಷ್ ಆನಂದ ರಾಮ್ ಒಟ್ಟಿಗೆ ಚಿತ್ರರಂಗದ ಹಲವಾರು ಭಾಗಿಯಾಗಿದ್ದಾರೆ.
ಕಳೆದ ಏಪ್ರಿಲ್ ನಂದು ರಿಷಬ್ ತಮ್ಮ ಕುಟುಂಬದ ಜೊತೆಗೆ ಮಗನ ಜನ್ಮದಿನದಂದು ಇದೇ ದೇವಸ್ಥಾನಕ್ಕೆ ಬಂದಿದ್ದರು. ಇದೀಗ ಅದೇ ದೇವಸ್ಥಾನದಲ್ಲಿ ಹರಕೆ ಮಾಡಿಕೊಂಡದ್ದನ್ನು ನೆರವೇರಿಸಿದ್ದಾರೆ.
ಕಳೆದ ಬಾರಿ ಭೇಟಿ ನೀಡಿದಾಗ ಸಿನಿಮಾ ರಂಗದಲ್ಲಿ ಅನೇಕ ವೈರಿಗಳು ಇರುತ್ತಾರೆ. ಹಾಗಾಗಿ ಆ ವಿಷಯದಲ್ಲಿ ಎಚ್ಚರಿಕೆಯಿಂದ ನೀನು ಇರಬೇಕು ಅದೇ ರೀತಿ ಸಿನಿಮಾದ ವಿಚಾರದಲ್ಲಿ ಹರಕೆ ಹೊತ್ತಿದ್ದರೆ ಅದನ್ನು ಪೂರೈಸು ಎಂದು ದೈವವು ರಿಷಬ್ ಶೆಟ್ಟಿಗೆ ಸೂಚಿಸಿತ್ತು. ಆ ವಿಷಯವಾಗಿ ನಿನ್ನೆ ಚಿತ್ರ ತಂಡದ ಜೊತೆ ದೇವಸ್ಥಾನಕ್ಕೆ ಹೋಗಿ ಗಗ್ಗರ ಸೇವೆಯ ಜೊತೆಗೆ ಅನ್ನ ಸಂತರ್ಪಣೆಯನ್ನು ಮಾಡಿದ್ದಾರೆ.