new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

‘ರಾಯರ ದರ್ಶನ’ ಆಲ್ಬಮ್ ಸಾಂಗ್ ಟೀಸರ್ ಲಾಂಚ್

‘ರಾಯರ ದರ್ಶನ’ ಆಲ್ಬಮ್ ಸಾಂಗ್ ಟೀಸರ್ ಲಾಂಚ್
  • PublishedFebruary 25, 2026

ಲಕ್ಷ್ಮೀ ಗಣೇಶ ಪ್ರೊಡಕ್ಷನ್ ಹಾಗೂ ದಿ ನ್ಯೂ ಇಂಡಿಯನ್ ಟೈಮ್ಸ್ ಸಂಸ್ಥೆ ಪ್ರೆಸೆಂಟ್ಸ್ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ ‘ ರಾಯರ ದರ್ಶನ’ ಆಲ್ಬಮ್ ಸಾಂಗ್ ನ ಟೀಸರ್ ಲಾಂಚ್ ಆಗಿದ್ದು , ರಾಯರ ವರ್ಧಂತಿ ಯಂದೇ ಟೀಸರ್ ಜೊತೆಗೆ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

ಈ ಹಾಡನ್ನು ರಘು ಭಟ್ ಅವರು ನಿರ್ದೇಶನ ಮಾಡಿದ್ದು, ಸುಗುಣ ರಘು ಭಟ್ ನಿರ್ಮಾಣ ಮಾಡಿದ್ದಾರೆ. ನಾಗಾರ್ಜುನ ಶರ್ಮಾ ಅವರ ಸಾಹಿತ್ಯಕ್ಕೆ ಎಬಿಬಿಎಸ್ ಸ್ಟುಡಿಯೋ, ಸಿ. ಆರ್. ಬಾಬಿ ಹಾಗೂ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು , ಪವನ್ ಎಂ. ಬಿ ಆಚಾರ್ಯ ಸಿನಿಮಾಟೋಗ್ರಫಿ ಮಾಡಿದ್ದಾರೆ.

ಈ ಟೀಸರ್ ಅನ್ನು ಮಂತ್ರಾಲಯದ ಯತಿಗಳಾದ ಶ್ರೀ ಶ್ರೀ ಶ್ರೀ ಶುಭದೆಂದ್ರ ತೀರ್ಥರು ರಿಲೀಸ್ ಮಾಡಿದ್ದಾರೆ. ಸ್ಯಾಂಡಲ್ ವುಡ್ ನ ಹಿರಿಯ ನಟ ಜಗ್ಗೇಶ್, ರಿಷಬ್ ಶೆಟ್ಟಿ, ಲಕ್ಷ್ಮೀ ಗಣೇಶ, ಟಿಎನ್ ಐಟಿ ಸಂಸ್ಥೆಯ ಎಂಡಿ ಆಗಿರುವ ಸುಗುಣಾ ರಘು ಮತ್ತು ಸಿಇಓ ಆಗಿರುವ ರಘು ಭಟ್ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

ಟೀಸರ್ ಮತ್ತು ಪೋಸ್ಟರ್ ಬಿಡುಗಡೆ ಮಾಡಿ “ಸಿನಿಮಾವನ್ನು ಚೆನ್ನಾಗಿಲ್ಲ ಎಂದು ಹೇಳೋದು ಸುಲಭ, ಆದ್ರೆ ಅದರ ಹಿಂದೆ ಸಾಕಷ್ಟು ಶ್ರಮವಿರುತ್ತದೆ. ಶ್ರಮವಹಿಸಿ ಆಲ್ಬಮ್ ಸಾಂಗ್ ಮಾಡುತ್ತಿದ್ದಾರೆ, ಆದಷ್ಟು ಬೇಗ ಹಾಡು ಬಿಡುಗಡೆಯಾಗಲಿ” ಎಂದು ಗುರುಗಳು ಹರಸಿ ಹಾರೈಸಿದರು.

Written By
Kannada Picchar

Leave a Reply

Your email address will not be published. Required fields are marked *