ರತ್ನಾಕರನ ‘ರತ್ನನ್ ಪ್ರಪಂಚ’ ಅಕ್ಟೋಬರ್ 22 ರಿಂದ ಅಮೆಜಾನ್ ಪ್ರೈಮ್ ನಲ್ಲಿ

ಕೆಆರ್‌ಜಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ. ರಾಜ್ ನಿರ್ಮಾಣದ ಡಾಲಿ ಧನಂಜಯ್ ನಾಯಕನಾಗಿ ನಟಿಸಿರುವ ‘ರತ್ನನ್ ಪ್ರಪಂಚ’ ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ಅ.22 ರಂದು ಬಿಡುಗಡೆ ಆಗುತ್ತಿದೆ.
ರೋಹಿತ್ ಪದಕಿ, ‘ರತ್ನನ್ ಪ್ರಪಂಚ’ ಸಿನಿಮಾವನ್ನು ನಿರ್ದೇಶನ ಮಾಡಿದ್ದು. ಚಿತ್ರದಲ್ಲಿ ದೊಡ್ಡ ತಾರಾಬಳಗವಿದ್ದು ‘ಡಾಲಿ’ ಧನಂಜಯ ಗೆ ನಾಯಕಿಯಾಗಿ ರೆಬಾ ನಟಿಸಿದ್ದಾರೆ, ಉಮಾಶ್ರೀ, ಅಚ್ಯುತ್ ಕುಮಾರ್, ಅನು ಪ್ರಭಾಕರ್. ಹಿರಿಯ ನಟಿ ಶ್ರುತಿ, ಪ್ರಮೋದ್ ಮುಂತಾದವರು ‘ರತ್ನನ್ ಪ್ರಪಂಚ’ ಸಿನಿಮಾದ ಮುಖ್ಯ ಭೂಮಿಕೆಯಲ್ಲಿದ್ದಾರೆ.
****