News news updates ಪಿಚ್ಚರ್ stories ಪಿಚ್ಚರ್ UPDATE

ನನಗಿಷ್ಟ ಬಂದವರ ಜೊತೆ ಇಷ್ಟ ಬಂದಾಗ ಮದುವೆ ಆಗ್ತೀನಿ ಖಾರವಾಗಿ ಉತ್ತರಿಸಿದ ಕಿರಿಕ್ ಬೆಡಗಿ

ನನಗಿಷ್ಟ ಬಂದವರ ಜೊತೆ ಇಷ್ಟ ಬಂದಾಗ ಮದುವೆ ಆಗ್ತೀನಿ ಖಾರವಾಗಿ ಉತ್ತರಿಸಿದ ಕಿರಿಕ್ ಬೆಡಗಿ
  • PublishedDecember 5, 2025

By Pallavi N Raj
ಕಿರಿಕ್ ಬೆಡಗಿ ರಶ್ಮಿಕ ಮಂದಣ್ಣ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಅವರ ಸಿನಿಮಾ ಜರ್ನಿ ಪ್ರಾರಂಭಿಸಿದ್ರು ರಶ್ಮಿಕಾ ನಿಂತ ರೀತಿ ಕಂಡು ಈ ಕ್ಷಣಕ್ಕೂ ಕನ್ನಡದ ಪ್ರೇಕ್ಷರರಿಗೆ ಅಚ್ಚರಿಯಿದೆ. ಕನ್ನಡದ ಜೊತೆಯಲ್ಲಿ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಮಿಂಚೋದ್ರ ಜೊತೆಗೆ ಬ್ಯೂಸಿಯಾಗುವಷ್ಟು ಕೆಲಸ ಗಿಟ್ಟಿಸಿಕೊಂಡಿದ್ದಾರೆ..

ಯೆಸ್.. ಬಿಗ್ ಬಜೆಟ್ ಸಿನಿಮಾ ಮಾಡುವುದರ ಜೊತೆಗೆ ರಶ್ಮೀಕ ತಮ್ಮ ವಯಕ್ತಿಕ ಜೀವನದಲ್ಲೂ ಬ್ಯೂಸಿಯಾದ್ರು.. ಅದ್ರಲ್ಲೂ ನ್ಯಾಷನಲ್ ಕ್ರಶ್ ಮದುವೆ ವಿಚಾರ ಆಗಾಗ ಸುದ್ದಿಯಲ್ಲಿ ಇರುತ್ತೆ.. ಕೆಲವು ಸಲ ರಶ್ಮಿಕ ಖುಷಿಖುಷಿಯಿಂದ ಮನಸ್ಸು ಬಿಚ್ಚಿ ಮಾತಾನಾಡಿದ್ರೆ ಇನ್ನು ಕೆಲವು ಸರ್ಥಿ ತುಟಿಕ್ ಪಿಟಿಕ್ ಅನ್ನಲ್ಲ.. ಅದ್ರಲ್ಲೂ ರಶ್ಮಿಕ ಮೂಡ್ ಸರಿಯಿಲ್ಲದಿದ್ರೆ ಖಾರವಾಗಿಯೇ ಉತ್ತರಿಸ್ತಾರೆ ಸದ್ಯಕ್ಕೀಗ ಅದೆ ಆಗಿರೋದು..

ಹೌದು.. ನ್ಯಾಷನಲ್ ಕ್ರಶ್ ಮೇಲೆ ಹರಡೋ ಗಾಸಿಪ್ ಒಂದೆರಡಲ್ಲ.. ರಕ್ಷಿತ್ ಜೊತೆಗೆ ನಿಶ್ಚಿತಾರ್ಥ ಮುರಿದ ನಂತರದಲ್ಲಿ ರಶ್ಮಿಕಾ ಜೀವನ ತೆರೆದ ಪುಸ್ತಕದಂತೆ ಆಗಿದೆ.. ಇದಕ್ಕೆ ಪೂರಕವಾಗಿ ರಶ್ಮಿಕಾ ಮಂದಣ್ಣ ಜೊತೆ ಮೊನ್ನೆಯವರೆಗೆ ಕದ್ದು ಮುಚ್ಚಿ ಓಡಾಡುವ ಪ್ರಯತ್ನ ಮಾಡುತ್ತಿದ್ದ ವಿಜಯ್ ದೇವರಕೊಂಡ ದಿ ಗರ್ಲ್‌ಫ್ರೆಂಡ್‌ ಚಿತ್ರದ ಸಂಭ್ರಮಾಚರಣೆಯ ಸಮಯದಲ್ಲಿ ಎಲ್ಲರೆದುರು ರಶ್ಮಿಕಾಗೆ ಮುತ್ತು ನೀಡಿದ್ದು, ಆ ನಂತರದಲ್ಲೂ ಫ್ಯಾನ್ಸ್ ಹೇಳಿದ್ರು ಏನಾದ್ರು ಇದ್ರೆ ಪ್ಲೀಸ್ ಹೇಳಿ ಅಂತ ಅಲ್ಲೂ ರಶ್ಮಿಕ ಹೈಡ್ ಮಾಡಿದ್ರು ರಶ್ಮಿಕಾ ಮಂದಣ್ಣ ಕೂಡ ವಿಜ್ಜು ಮೊದಲ ದಿನದಿಂದಲೂ ನೀನು ಈ ಸಿನಿಮಾ ಜೊತೆಗಿದ್ದೀಯಾ, ಸಿನಿಮಾ ಗೆದ್ದ ಬಳಿಕ ಕೂಡ ನೀನು ಇಲ್ಲಿಗೆ ಬಂದಿದ್ದೀಯಾ. ನನಗೆ ಇಡೀ ಸಿನಿಮಾ ನೀನು ಜೊತೆಗಿದ್ದೆ. ಪ್ರತಿಯೊಬ್ಬರ ಜೀವನದಲ್ಲಿ ವಿಜಯ್ ದೇವರಕೊಂಡ ಇರ್ಬೇಕು ಅಂದರೆ ನಮಗೆ ಬೆಂಬಲವಾಗಿ ನಿಲ್ಲುವವರು ಇರಬೇಕು ಎಂದು ನಾನು ಭಾವಿಸ್ತೀನಿ ಎಂದು ಭಾವುಕರಾಗ್ತಾರೆ..

ಅಂದಹಾಗೆ.. ರಶ್ಮಿಕ ಯಾವುದಕ್ಕೂ ತಲೆ ಕೆಡೆಸಿಕೊಳ್ಳಲ್ಲ ಆಗಾಗ ಟ್ರೋಲ್ ಆಗ್ತಾನೆ ಇದ್ರು ಡೋಂಟ್ ಕೇರ್ ಸ್ವಾಭಾವ ಹೆಚ್ಚಾಗಿ ಬೆಳೆಸಿಕೊಂಡಿದ್ದಾರೆ. ತಮ್ಮ ವ್ಯೆಯಕ್ತಿಕ ಜೀವನದ ಕುರಿತು ಹರಡಿರುವ ಈ ಸುದ್ದಿಯ ಕುರಿತು ರಶ್ಮಿಕಾ ಈಗ ಪ್ರತಿಕ್ರಿಯೆ ನೀಡಿದ್ದಾರೆ. ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ.. ಸಂದರ್ಶನದಲ್ಲಿ ಮಾತನಾಡಿರುವ ರಶ್ಮಿಕಾ ಮಂದಣ್ಣ ನನ್ನ ಬಗ್ಗೆ ಹರಡೋ ಮದುವೆಯ ಸುದ್ದಿಯನ್ನು ನಾನು ಒಪ್ಪುವುದು ಇಲ್ಲ. ಹಾಗಂಥ ತಳ್ಳಿಯೂ ಕೂಡ ಹಾಕಲ್ಲ ಎಂದು ಹೇಳಿದ್ದಾರೆ. ಮುಂದುವರೆದು ಎಲ್ಲದಕ್ಕೂ ಸಮಯ ಸಂದರ್ಭ ಅನ್ನುವುದು ಇರುತ್ತೆ. ಆ ಸಮಯ ಬಂದಾಗ ನಾವೇ ಎಲ್ಲರಿಗೂ ಖಂಡಿತಾ ಹೇಳಿಯೇ ಹೇಳುತ್ತೇವೆ ಎಂದು ರಶ್ಮಿಕಾ ಹೇಳಿದ್ದಾರೆ..

ಇನ್ನೂ.. ರಶ್ಮಿಕ ಮದುವೆ ಬಗೆಗಿನ ಸುದ್ದಿಯನ್ನು ತಳ್ಳಿ ಹಾಕದೆ ಮಾತನಾಡಿರುವುದು ಸದ್ಯ ರಶ್ಮಿಕಾ ಅಭಿಮಾನಿಗಳ ಸಂತೋಷಕ್ಕೆ ಕಾರಣವಾಗಿದೆ.. ಒಟ್ನಲ್ಲಿ ಸಮಯ ಬಂದಾಗ ಹೇಳುತ್ತೀನಿ ಅನ್ನೊದೆ ರಶ್ಮಿಕಾ ಉತ್ತರವಾಗಿದೆ..

Written By
Kannada Picchar

Leave a Reply

Your email address will not be published. Required fields are marked *