ಕೊನೆಗೂ ಮದುವೆ ವಿಷಯ ಒಪ್ಪಿಕೊಂಡು ಧನ್ಯವಾದ ತಿಳಿಸಿದ ರಶ್ಮಿಕಾ
Pallavi N Raj
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಫೆಬ್ರವರಿ 26ರಂದು ಉದಯಪುರದಲ್ಲಿ ವಿವಾಹವಾಗುತ್ತಿದ್ದಾರೆ. ರಶ್ಮಿಕಾ ಈ ವಿಷಯವನ್ನು ಖಚಿತಪಡಿಸಿದ್ದು, ಅವರ ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ. ಗೀತ ಗೋವಿಂದಂ ಸಿನಿಮಾ ಮೂಲಕ ಶುರುವಾದ ಅವರ ಪ್ರೀತಿಯ ಪಯಣ ಈಗ ಮದುವೆಯವರೆಗೆ ತಲುಪಿದೆ
ಹೌದು.. ಇವರ ಪ್ರೀತಿ ಆರಂಭ ಆಗಿದ್ದು ಯಾವಾಗ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇತ್ತೀಚೆಗೆ ಗುಟ್ಟಾಗಿ ಇವರ ನಿಶ್ಚಿತಾರ್ಥ ನಡೆದಿತ್ತು. ಈಗ ವಿವಾಹ ಆಗುವ ಮೂಲಕ ಅವರು ಸಂಬಂಧಕ್ಕೆ ಹೊಸ ಅರ್ಥ ಸಿಗುತ್ತಿದೆ.
ಬಾಲಿವುಡ್ ಹಂಗಾಮ ತಂಡದವರು ರಶ್ಮಿಕಾ ಮಂದಣ್ಣಗೆ ಅಭಿನಂದನೆಗಳು ಎಂಬ ಸಂದೇಶ ಕಳುಹಿಸಿತ್ತಂತೆ. ಸಾಮಾನ್ಯವಾಗಿ ಗಾಸಿಪ್ ಆದರೆ, ಈ ವಿಷಯದಲ್ಲಿ ಸೈಲೆಂಟ್ ಆಗುತ್ತಾರೆ. ಆದರೆ, ರಶ್ಮಿಕಾ ಹಾಗೆ ಮಾಡಿಲ್ಲ. ಅವರು ಧನ್ಯವಾದಗಳು ಎಂದು ಉತ್ತರಿಸಿದ್ದಾರೆ. ಇದರ ಜೊತೆಗೆ ನಗುವ ಎಮೋಜಿ ಕೂಡ ಹಾಕಿದ್ದಾರೆ ಈ ಮೂಲಕ ವಿವಾಹ ವಿಷಯ ರಶ್ಮಿಕ ಪಕ್ಕಾ ಮಾಡಿದ್ದಾರೆ..
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಉದಯಪುರದಲ್ಲಿ ಮದುವೆ ಆಗುತ್ತಿದ್ದಾರೆ. ಇದಕ್ಕೆ ಐಷಾರಾಮಿ ಹೋಟೆಲ್ ಬುಕ್ ಆಗಿದ್ದು, ಸಿದ್ಧತೆ ನಡೆಯುತ್ತಿದೆ. ಇತ್ತೀಚೆಗೆ ದಂಪತಿಯ ಆಮಂತ್ರಣಪತ್ರ ವೈರಲ್ ಆಗಿ ಗಮನ ಸೆಳೆಯಿತು. ವಿವಾಹದ ಬಳಿಕ ಹೈದರಾಬಾದ್ನಲ್ಲಿ ಅದ್ದೂರಿಯಾಗಿ ರಿಸೆಪ್ಶನ್ ಆಯೋಜನೆ ಮಾಡಲಾಗಿದೆ. ಮಾರ್ಚ್ 4ರಂದು ಈ ಆರತಕ್ಷತೆ ಫಿಕ್ಸ್ ಆಗಿದೆ. ಡೆಸ್ಟಿನೇಷನ್ ವೆಡ್ಡಿಂಗ್ಗೆ ಉದಯಪುರ ಒಳ್ಳೆಯ ಜಾಗ. ಅನೇಕ ಸೆಲೆಬ್ರಿಟಿಗಳು ಇಲ್ಲಿ ವಿವಾಹ ಆಗಿದ್ದಾರೆ. ಈ ಸಾಲಿಗೆ ರಶ್ಮಿಕಾ ಕೂಡ ಸೇರುತ್ತಿದ್ದಾರೆ ಎನ್ನಲಾಗ್ತಿದೆ..
ಒಟ್ನಲ್ಲಿ ರಶ್ಮಿಕಾ ಮಗುವೆಗೆ ವಿದೇಶಿ ಬೌನ್ಸರ್ಸ್, ನೋ ಫೋನ್, ನೋ ಸ್ಟಾರ್ಸ್ ಎನ್ನಲಾಗ್ತಿದೆ..
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದು ‘ಗೀತ ಗೋವಿಂದಂ’ ಧಾರಾವಾಹಿಯಲ್ಲಿ. ಆ ಬಳಿಕ ‘ಡಿಯರ್ ಕಾಮ್ರೇಡ್’ ಸಿನಿಮಾದಲ್ಲಿ ಇವರು ನಟಿಸಿದ್ದಾರೆ.