ಪಿಚ್ಚರ್ stories ಪಿಚ್ಚರ್ UPDATE

ಲಕ್ಷ್ಮೀದೇವಿಗೆ ಅವಮಾನ ಮಾಡಿದ್ರಾ ರಶ್ಮಿಕಾ..? ತೆಲುಗು ಸೊಸೆ ವಿರುದ್ಧ ಹೆಚ್ಚಾಯ್ತು ಆಕ್ರೋಶ..!

ಲಕ್ಷ್ಮೀದೇವಿಗೆ ಅವಮಾನ ಮಾಡಿದ್ರಾ ರಶ್ಮಿಕಾ..? ತೆಲುಗು ಸೊಸೆ ವಿರುದ್ಧ ಹೆಚ್ಚಾಯ್ತು ಆಕ್ರೋಶ..!
  • PublishedMarch 12, 2026


ಕಳೆದ ಕೆಲವು ದಿನಗಳ ಹಿಂದೆ ರಶ್ಮಿಕ ಮಂದಣ್ಣ ನಟ ವಿಜಯ್ ದೇವರಕೊಂಡ ಕೈಹಿಡಿದಿದ್ರು ಬಹಳ ಅದ್ಧೂರಿಯಾಗಿ ಈ ಸ್ಟಾರ್ ಜೋಡಿಯ ಮದುವೆ ನೆರವೇರಿತ್ತು..
ಹೌದು.. ರಶ್ಮಿಕಾ ಮಂದಣ್ಣ ಧರಿಸಿದ್ದ ಕಾಸ್ಟ್ಯೂಮ್, ಜ್ಯೂವೆಲ್ಸ್ ಎಲ್ರ ಮನಸ್ಸನ್ನು ಗೆದ್ದಿತ್ತು ಆದ್ರೀಗ ಅದೇ ಬಟ್ಟೆಯ ವಿರುದ್ಧ ಆಕ್ರೋಶ ಹೆಚ್ಚಾಗಿದೆ ಯಾಕೆ ಅಂತ ಕೇಳಿದ್ರೆ ಶಾಕ್ ಆಗ್ತೀರಾ..
ಯೆಸ್.. ಪ್ರತಿ ಧರ್ಮದಲ್ಲೂ ಅದರದ್ದೇ ಆದ ನಂಬಿಕೆ ಇದೆ. ಆದರೆ ಈಗೀಗ ಈ ನಂಬಿಕೆಯನ್ನು ಫ್ಯಾಷನ್ ಪ್ರಶ್ನೆ ಮಾಡುತ್ತಿದೆ ಅಂತ ನೆಟ್ಟಿಗರು ಗರಂ ಆಗಿದ್ದಾರೆ.. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದೆ. ಇದಕ್ಕೆ ಈ ಹಿಂದೆ ಹಲವಾರು ನಿದರ್ಶನಗಳು ಕೂಡ ಇವೆ. ಫ್ಯಾಷನ್ ಹೆಸರಿನಲ್ಲಿ ಹಲವರು ಇಲ್ಲಿ ದೇವರ ಭಾವ ಚಿತ್ರಗಳನ್ನು ಬಳಸಿಕೊಂಡು ವಿವಾದಕ್ಕೀಡಾಗಿದ್ದಾರೆ ಈಗ ರಶ್ಮಿಕಾ ಸರದಿ..
ಅಂದ್ಹಾಗೆ.. ಪ್ರಖ್ಯಾತ ಡಿಸೈನರ್ ಕರಣ್ ತೊರಾನಿ ಅವರ ವಿನ್ಯಾಸದಲ್ಲಿ ಅರಳಿರೋ ಕಾಸ್ಟೂಮ್ ಚೆಂದ ಇದೆ. ಆದರೆ ರಶ್ಮಿಕಾ ಅವರ ಈ ಮೆಹಂದಿ ಶಾಸ್ತ್ರದ ಸೀರೆಯಲ್ಲಿ ಲಕ್ಷ್ಮೀ ದೇವಿಯ ಚಿತ್ರ ಇದೆ. ಮಹಾಲಕ್ಷ್ಮಿಯ ಚಿತ್ರವನ್ನು ಅತ್ಯಂತ ಸುಂದರವಾಗಿ ಕಸೂತಿ ಮಾಡಲಾಗಿದೆ. ದಕ್ಷಿಣ ಭಾರತದ ತಂಜಾವೂರು ಶೈಲಿಯ ಕಲೆಯಿಂದ ಪ್ರೇರಣೆ ಪಡೆದು ಚಿತ್ರವನ್ನು ಬಿಡಿಸಲಾಗಿದೆ. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಆದರೆ.. ಲಕ್ಷ್ಮೀ ದೇವಿಯ ಭಾವಚಿತ್ರ ರಶ್ಮಿಕಾ ಧರಿಸಿರುವ ಸೀರೆಯ ಕೆಳಭಾಗದಲ್ಲಿದೆ. ಸೊಂಟದ ಭಾಗದಲ್ಲಿದೆ. ಲಕ್ಷ್ಮೀ ದೇವಿಗೆ ಮಾಡಲಾದ ಅವಮಾನ ಇದು ಎಂದು ಕಿಡಿ ಕಾರುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಆಕ್ರೋಶ ವ್ತಕ್ತವಾಗುತ್ತಿದ್ದು, ದೇವರು ಮತ್ತು ದೇವತೆಗಳು ನಿಮ್ಮ ಉಡುಪಿಗಾಗಿ ಇರುವವರಲ್ಲ. ಇದೊಂದು ಅತ್ಯಂತ ಕೆಟ್ಟ ಡ್ರೆಸ್ ಎಂದು ಕೆಲವರು ಕಾಮೆಂಟ್ ಮಾಡಿದ್ದರೆ, ದೇವಿಯ ಚಿತ್ರವಿರುವ ಬಟ್ಟೆಯನ್ನು ಕಾಲಿನ ಹತ್ತಿರ ಮತ್ತು ಸೊಂಟಕ್ಕೆ ಸುತ್ತಿಕೊಳ್ಳುವುದು ದೇವತೆಗೆ ಮಾಡುವ ಅಗೌರವ ಎಂದು ಮತ್ತೊಬ್ಬರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ
ಒಟ್ನಲ್ಲಿ.. ಅದೇನೆ ಇರಲಿ ರಶ್ಮಿಕಾ ವಿಜಯ್ ಕಾಸ್ಟ್ಯೂಮ್ ಮಾತ್ರ ಎಲ್ಲರ ಮನಸ್ಸನ್ನು ಗೆದ್ದಿದೆ..

Written By
Kannada Picchar

Leave a Reply

Your email address will not be published. Required fields are marked *