News

ರನ್ನ, ಅಣ್ಣಯ್ಯ ನಿರ್ಮಾಪಕರು ಕೊರೊನಾದಿಂದ ನಿಧನ

  • PublishedApril 29, 2021

ನಿಮಿಶಾಂಬ ಪ್ರೊಡಕ್ಷನ್ಸ್ ನ ಅಣ್ಣಯ್ಯ, ಬಿಂದಾಸ್, ಏನೋ ಒಂಥರಾ, ರನ್ನ‌ ಖ್ಯಾತಿಯ ನಿರ್ಮಾಪಕ ಚಂದ್ರಶೇಖರ್ ಇನ್ನಿಲ್ಲ.

23 ದಿನಗಳ ಹಿಂದೆ ಕೋವಿಡ್ ಪಾಸಿಟೀವ್ ಆಗಿತ್ತು. ಮಣಿಪಾಲ್ ಸೆಂಟರ್ ಗೆ ಅಡ್ಮಿಟ್ ಮಾಡಲಾಗಿತ್ತು. ಕೋವಿಡ್ ವಾಸಿಯಾಗಿತ್ತಾದ್ರೂ, ಇದ್ದಕ್ಕಿದ್ದಂತೆ ಶ್ವಾಸಕೋಶದ ಸೊಂಕು ಉಲ್ಬಣಗೊಂಡು ನಿನ್ನೆ ಮಧ್ಯರಾತ್ರಿ ಸುಮಾರು 12 ಗಂಟೆ ಸಮಯದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಚಂದ್ರಶೇಖರ್ ಅವ್ರು ಇತ್ತೀಚೆಗಷ್ಟೇ ಮಂಜು ಮಾಂಡವ್ಯ ನಿರ್ದೇಶನದಲ್ಲಿ ಉಪೇಂದ್ರ ಅವ್ರೊಟ್ಟಿಗೆ ಸಿನಿಮಾವೊಂದನ್ನ ಅನೌನ್ಸ್ ಮಾಡಿದ್ರು. ಆದ್ರೆ ವಿಧಿಯಾಟ ಬೇರೆನೇ ಆಗಿದೆ. ಕೋಟಿ‌ ನಿರ್ಮಾಪಕ ರಾಮು ಅವ್ರ ಹಿಂದೆಯೇ ಉದ್ಯಮ ಮತ್ತೊಂದು ಅನ್ನದಾತನ್ನ ಕಳೆದುಕೊಂಡಂತಾಗಿದೆ.
RIP sir.

Written By
Kannadapichhar

Leave a Reply

Your email address will not be published. Required fields are marked *