ಪಿಚ್ಚರ್ UPDATE

Breaking New : ಹಾಸ್ಟೆಲ್‌ ಹುಡುಗರು ಚಿತ್ರದಲ್ಲಿ ಆಕ್ಟ್‌ ಮಾಡಿಲ್ವಂತೆ ರಮ್ಯಾ !

Breaking New : ಹಾಸ್ಟೆಲ್‌ ಹುಡುಗರು ಚಿತ್ರದಲ್ಲಿ ಆಕ್ಟ್‌ ಮಾಡಿಲ್ವಂತೆ ರಮ್ಯಾ !
  • PublishedNovember 5, 2022

ಇತ್ತೀಚಿಗಷ್ಟೇ ಹೊಸಬರ “ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ” ಚಿತ್ರದ ಟೀಸರ್‌ ಬಿಡುಗಡೆ ಆಗಿತ್ತು …ಕ್ವೀನ್‌ ಇಸ್‌ ಬ್ಯಾಕ್‌ ಅನ್ನೋ ಪ್ರೋಮೋ ಮೂಲಕ ರಮ್ಯಾ ಇಂಡಸ್ಟ್ರಿಗೆ ಎಂಟ್ರಿಕೊಟ್ರು ಅನ್ನೋ ಸುದ್ದಿ ಜೋರಾಗಿತ್ತು…ರಮ್ಯಾ ಸಿನಿಮಾ ಇಂಡಸ್ಟ್ರಿಗೆ ಯಾವಾಗ ಎಂಟ್ರಿ ಕೊಡ್ತಾರೆ ಅನ್ನೋ ಪ್ರಶ್ನೆಗೆ ಈ ಪ್ರೋಮೋದಿಂದ ಉತ್ತರ ಕೂಡ ಸಿಕ್ಕಿತ್ತು…ಆದ್ರೆ ಈಗ ಹೊಸದೊಂದು ಬ್ರೇಕಿಂಗ್‌ ಸುದ್ದಿ ಹೊರ ಬಂದಿದೆ…ಈ ಸುದ್ದಿ ಕೊಟ್ಟಿರೋದು ನಟಿ ರಮ್ಯಾ…

“ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ” ಚಿತ್ರದಲ್ಲಿ ನಟಿ ರಮ್ಯಾ ಆಕ್ಟ್‌ ಮಾಡಿಲ್ವಂತೆ ..ಈ ವಿಚಾರವನ್ನ ರಮ್ಯಾ ಅವ್ರೇ ಹಂಚಿಕೊಂಡಿದ್ದಾರೆ…ಪ್ರೋಮೋ ಮೆಚ್ಚಿಕೊಂಡಿದಕ್ಕೆ ಧನ್ಯವಾದ ಹೇಳಿರೋ ರಮ್ಯಾ ಈ ವಿಚಾರವನ್ನೂ ತಿಳಿಸಿದ್ದಾರೆ ನಾನು ಈ ಚಿತ್ರದಲ್ಲಿ ನಟಿಸಿಲ್ಲ ಪ್ರೋಮೋ ಮತ್ತು ಪ್ರಮೋಷನ್‌ ಗಾಗಿ ಮಾತ್ರ ಶೂಟ್‌ ಮಾಡಿದ್ದೇನೆ ಎಂದಿದ್ದಾರೆ…

“ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ” ಚಿತ್ರೀಕರಣ ತುಂಬಾ ಚೆನ್ನಾಗಿತ್ತು ಚಿತ್ರದಲ್ಲಿ 300 ಹೊಸಬರು ಅಭಿನಯ ಮಾಡಿರೋದು ನಿಜಕ್ಕೂ ವಿಶೇಷ, ಚಿತ್ರತಂಡಕ್ಕೆ ಧನ್ಯವಾದಗಳು ಎಂದಿದ್ದಾರೆ…ನಿತಿನ್‌ ಕೃಷ್ಣ ಮೂರ್ತಿ ಈ ಚಿತ್ರವನ್ನು ನಿರ್ದೇಶಿಸಿದ್ದು, ‘ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ ಸಿನಿಮಾ ಫನ್‌ ಕಾಮಿಡಿ ಜಾನರ್‌ನ ಚಿತ್ರ.. ಗುಲ್ಮೋಹರ್‌ ಫಿಲ್ಮಂಸ್‌ ಹಾಗೂ ವರುಣ್‌ ಸ್ಟುಡಿಯೋಸ್‌ ನಲ್ಲಿ ಚಿತ್ರ ನಿರ್ಮಾಣ ಆಗಿದೆ….

Written By
Kannadapichhar