ಪಿಚ್ಚರ್ UPDATE

ಲಂಡನ್‌ನಲ್ಲಿ ರಮ್ಯಾ ಜೊತೆ ಅಮೃತ ಡೇಟಿಂಗ್‌?

ಲಂಡನ್‌ನಲ್ಲಿ ರಮ್ಯಾ ಜೊತೆ ಅಮೃತ ಡೇಟಿಂಗ್‌?
  • PublishedDecember 28, 2022

ಕ್ರಿಸ್ ಮಸ್‌, ನ್ಯೂ ಇಯರ್‌ ಬಂದ್ರೆ ಸಾಕು ಬಾಲಿವುಡ್‌ ಸೆಲೆಬ್ರಿಟಿಗಳು ಫ್ಲೈಟ್‌ ಏರಿ, ವಿದೇಶಕ್ಕೆ ಹಾಡಿ ವೆಕೆಷನ್‌ನ ಎಂಜಾಯ್‌ ಮಾಡೋ ಕಾಲ ಒಂದಿತ್ತು. ಈ ಟ್ರೆಂಡ್‌ ಈಗ ಸೌತ್‌ ಸಿನಿಮಾದಲ್ಲೂ ಚಾಲ್ತಿಯಲ್ಲಿದೆ. ಬಹುತೇಕ ಸೆಲೆಬ್ರಿಟಿಗಳು ಊರು ಬಿಟ್ಟಿದ್ದಾರೆ. ಅದೇ ಥರಾ ಈ ವರ್ಷ ಸಿನಿಮಾಕ್ಕೆ ಕಮ್‌ಬ್ಯಾಕ್‌ ಮಾಡಿರೋ ರಮ್ಯಾ ಲಂಡನ್‌ಗೆ ಹಾಡಿ ಬಹುತೇಕ ವಾರವೇ ಕಳೆದಿದೆ. ನ್ಯೂ ಇಯರ್‌ ಪಾರ್ಟಿನೂ ಅಲ್ಲೇ ಸೆಲೆಬ್ರೇಟ್‌ ಮಾಡಿ ವಾಪಸ್ಸಾಗಲಿದ್ದಾರೆ. ಕೆಲವು ವರ್ಷಗಳು ಕಾಣೆಯಾಗಿದ್ದಾಗ ರಮ್ಯಾ ಐರೋಪ್ಯ ದೇಶದಲ್ಲೇ ಇದ್ದರು. ಈಗ ರಜೆಗಾಗಿ ತೆರಳಿದ್ದಾರೆ.

ರಮ್ಯಾ ರಜೆಗೆ ಲಂಡನ್‌ಗೆ ಹಾರಿರೋದೇನೊ ಓಕೆ ಆದ್ರೆ, ಅವ್ರ ಜೊತೆ ಅಮೃತ ಐಯ್ಯಂಗಾರ್‌ ಅವ್ರನ್ನ ಕರ್ಕೊಂಡು ಹೋಗಿರೋದ್ಯಾಕೆ..? ಹೌದು ನಾರ್ಮಲಿ ಸೆಲೆಬ್ರಟಿಗಳು ಬಾಯ್‌ಫ್ರೆಂಡ್‌ ಜೊತೆಗೋ, ಹಸ್ಬೆಂಡ್‌ ಜೊತೆಗೋ ಇಲ್ಲ ಫ್ಯಾಮಿಲಿ ಜೊತೆಗೋ ಫಾರಿನ್‌ಗೆ ಹಾರ್ತಾರೆ. ಒಬ್ಬೊಬ್ಬರೇ ಹೋಗೋದು ಕೂಡ ಈಗ ಟ್ರೆಂಡ್‌ ನಲ್ಲಿದೆ, ಆದ್ರೆ ಅಮೃತಾ ಅವ್ರನ್ನ ಕರ್ಕೊಂಡು ಲಂಡನ್‌ಗೆ ಹೋಗಿರೋದ್ಯಾಕೆ ಅಂತಿದ್ದಾರೆ ಫ್ಯಾನ್ಸ್‌. ಅಂದಹಾಗೆ ಇಬ್ಬರು ಜೊತೆಯಾಗಿ ಲಂಡನ್‌ ಸುತ್ತಾಡ್ತಾ ಕ್ಲಿಕ್ಕಿಸಿಕೊಂಡಿರೋ ಫೋಟೋಗಳನ್ನು ಪೋಸ್ಟ್‌ ಮಾಡಿದ್ದಾರೆ. ಈ ಪೋಸ್ಟ್‌ ನೋಡಿದ್ರೆ ಡೇಟಿಂಗ್‌ ಮಾಡ್ತಿದ್ದಾರಾ ಅನ್ನಿಸುತ್ತೆ. ಆದ್ರೆ ಡೇಟಿಂಗ್‌ ಅಂದ್ರೆ ʻಆʼ ಥರಾ ಅಂದುಕೊಳ್ಳಬೇಡ್ರಪ್ಪೋ..!

https://www.instagram.com/p/CmsFy7ho02H/?utm_source=ig_web_copy_link
Written By
kiranbchandra