ಕನ್ನಡ ಸಿನಿಮಾ ರಂಗದಲ್ಲಿ ಕಳೆದ ಹಲವು ತಿಂಗಳಿನಿಂದ ಚರ್ಚೆಯಲ್ಲಿರುವ ಒಂದು ಪ್ರಶ್ನೆ ಎಂದರೆ ರಕ್ಷಿತ್ ಶೆಟ್ಟಿ ಎಲ್ಲಿ? ಸಿನಿಮಾವನ್ನು ಪ್ರೀತಿಸುವ ವ್ಯಕ್ತಿಯಲ್ಲಿ ರಕ್ಷಿತ್ ಒಬ್ಬರು.ಸಪ್ತ ಸಾಗರದಚೆ ಎಲ್ಲೋ – ಕೊಟ್ಟಾದ ಮೇಲೆ ರಕ್ಷಿತ್ ಅವರ ಮುಂದಿನ ಸಿನಿಮಾವಾದ ರಿಚರ್ಡ್ ಅಂಟೋನಿಯ ಬಗ್ಗೆ ಭಾರಿ ಮಾತುಗಳು ಕೇಳಿ ಬಂದವು.

ಆದ್ರೆ ಸದ್ಯಕ್ಕೆ ದೊಡ್ಡ ಅಪ್ಡೇಟ್ ಒಂದು ಬಂದಿದೆ.ಈ ಅಪ್ಡೇಟ್ ಪ್ರಕಾರ ರಕ್ಷಿತ್ ಶೆಟ್ಟಿಯವರು 5 ಸ್ಕ್ರಿಪ್ಟ್ ಜೊತೆಗೆ ಮತ್ತೆ ತೆರೆ ಮೇಲೆ ಕಮಾಲ್ ಮಾಡೋಕೆ ಬರ್ತಿದ್ದಾರೆ. ರಿಚರ್ಡ್ ಅಂಟೋನಿ ಆದ ಬಳಿಕ ಪುಣ್ಯ ಕೋಟಿ ಹಾಗೆ ಇನ್ನು ಉಳಿದ 3 ಸಿನಿಮಾಗಳಲ್ಲಿ ರಕ್ಷಿತ್ ಬ್ಯುಸಿ ಆಗಲು ರೆಡಿ ಆಗಿದ್ದಾರೆ.

ನಿರ್ದೇಶನವೆಂದು ಬಂದಾಗ ರಕ್ಷಿತ್ ಅವರಿಗೆ ಬೇರೆ ಲೆವೆಲ್ ಕ್ರೇಜ್ ಇದೆ. ಉಳಿದವರು ಕಂಡಂತೆ ಅದಕ್ಕೆ ಒಂದು ಸಣ್ಣ ಉದಾಹರಣೆ ಅಷ್ಟೇ. ಪಕ್ಕ ಕಲ್ಟ್ ಮೂವಿ ಕೊಡೊ ರಕ್ಷಿತ್ ಪ್ರೊಡ್ಯೂಸರ್ ಆಗಿಯೂ ಬೆಸ್ಟ್. ರಕ್ಷಿತ್ ಅವರು ಪ್ರಯಾಷಃ ಸಿನಿಮಾವನ್ನು ಪ್ರೀತಿಸುವಷ್ಟು ಮತ್ಯಾವುದನ್ನು ಅಷ್ಟು ಪ್ರೀತಿಸುವುದಿಲ್ಲ.ಇಷ್ಟು ದಿನ ಕಣ್ಮರೆಯಾಗಿದ್ದ ರಕ್ಷಿತ್ ಮತ್ತೆ ಬಂದಿರುವುದು ಸಿಂಪಲ್ ಸ್ಟಾರ್ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

Written By
Kannada Picchar

Leave a Reply

Your email address will not be published. Required fields are marked *