new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ʼರಕ್ಕಸಪುರದೊಳ್‌ʼ ಚಿತ್ರದ ಬ್ಯೂಟಿಫುಲ್ ಸಾಂಗ್‌ ʼನೀನಾ ನೀನಾʼ!

ʼರಕ್ಕಸಪುರದೊಳ್‌ʼ ಚಿತ್ರದ ಬ್ಯೂಟಿಫುಲ್ ಸಾಂಗ್‌  ʼನೀನಾ ನೀನಾʼ!
  • PublishedJanuary 12, 2026

ರಾಜ್‌ ಬಿ.ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ʼರಕ್ಕಸಪುರದೊಳ್‌ʼ ಚಿತ್ರವನ್ನು ರವಿ ಸಾರಂಗ ಅವರು ನಿರ್ದೇಶಿಸಿದ್ದಾರೆ. ಈ ಸಿನಿಮಾದ ಟೀಸರ್‌ ಈಗಾಗಲೇ ಬಿಡುಗಡೆ ಕಂಡಿದ್ದು, ಟೀಸರ್‌ ನೋಡಿರುವ ಸಿನಿ ಪ್ರೇಕ್ಷಕರು ಸಿನಿಮಾಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.

ಇದೀಗ ಸಿನಿಮಾದ ʼನೀನಾ ನೀನಾʼ ಹಾಡಿನ ಲಿರಿಕಲ್‌ ವೀಡಿಯೋ ಬಿಡುಗಡೆಗೊಂಡಿದೆ.ಮೊನ್ನಯಷ್ಟೆ ಬಿಡುಗಡೆಯಾದ ʼಕೇಡಿ:ದಿ ಡೆವಿಲ್‌ʼ ಮೂವಿಯ ʼಅಣ್ತಮ್ಮ ಜೋಡೆತ್ತು ಕಣೋʼ ಹಾಡನ್ನು ಬರೆದಿರುವ ಮಂಜುನಾಥ್‌ ಬಿ.ಎಸ್‌ ಅವರು ಈ ಹಾಡನ್ನು ಬರೆದಿದ್ದಾರೆ.ಜತೆಗೆ ಅರ್ಜುನ್‌ ಜನ್ಯ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.ಈ ʼನೀನಾ ನೀನಾʼ ಹಾಡಿಗೆ ವಿಜಯ್‌ ಪ್ರಕಾಶ್‌ ಅವರು ಧನಿ ನೀಡಿದ್ದು,ಹಾಡು ಕೇಳಿರುವ ಸಿನಿ ಪ್ರಿಯರು “ಸೊಗಸಾದ ಸಾಲುಗಳ ಜೊತೆಗೆ ಒಂದು ಬ್ಯೂಟಿಫುಲ್ ಬಾಂಧವ್ಯವನ್ನು ಚೆನ್ನಾಗಿ ವರ್ಣಿಸಿರುವ ಹಾಡು” ಎಂದೆಲ್ಲಾ ಕಾಮೆಂಟ್ಸ್‌ ಮಾಡುವ ಮೂಲಕ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *