new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಸು ಫ್ರಮ್ ಸೋ ದಾರಿಯಲ್ಲಿ ‘ರಕ್ಕಸಪುರದೋಳ್’!

ಸು ಫ್ರಮ್ ಸೋ ದಾರಿಯಲ್ಲಿ ‘ರಕ್ಕಸಪುರದೋಳ್’!
  • PublishedFebruary 4, 2026

ರವಿ ಸಾರಂಗ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸದ್ಯ ಕನ್ನಡ ಚಲನಚಿತ್ರ ರಂಗದಲ್ಲಿ ನಿರೀಕ್ಷೆಯನ್ನು ಹೆಚ್ಚು ಮಾಡಿರುವಂತಹ ಸಿನಿಮಾ ಎಂದರೆ ‘ರಕ್ಕಸಪುರದೋಳ್’. ರಾಜ್ ಬಿ ಶೆಟ್ಟಿ ಅವರು ಮುಖ್ಯ ಭೂಮಿಕೆಯಲ್ಲಿ ನಟನೆ ಮಾಡಿರುವ ಸಿನಿಮಾ ಇದಾಗಿದ್ದು, ರಾಜ್ ಅವರ ಪಾತ್ರದ ಬಗ್ಗೆ ಭಾರಿ ಕುತೂಹಲವಿದೆ.

ಫೆಬ್ರವರಿ 6 ರಂದು ರಾಜ್ಯದಾದ್ಯಂತ ಅಬ್ಬರಿಸಲು ಸನ್ನದವಾಗಿರುವ ಸಿನಿಮಾದ ಪ್ರೀಮಿಯರ್ ಶೋ ಇಂದು ಮೈಸೂರಿನ DRS ಸಿನಿಮಾಸ್ ನಲ್ಲಿ ಸಂಜೆ 7.10 ಕ್ಕೆ ಇದೆ. ಈ ವಿಚಾರವನ್ನು ನಿನ್ನೆ ಖುದ್ದು ರಾಜ್ ಅವರು ಇನ್ಸ್ಟಾಗ್ರಾಮ್ ಲೈವ್ ಬಂದು ಹಂಚಿಕೊಂಡಿದ್ದರು.ಇದೀಗ ಚಿತ್ರದ ಮೊದಲ ಪ್ರೀಮಿಯರ್ ಶೋ ಟಿಕೆಟ್ 24 ಗಂಟೆ ಒಳಗೆ ಸೋಲ್ಡ್ ಔಟ್ ಆಗಿದೆ.

ಪ್ರೀಮಿಯರ್ ಶೋ ಗೆ ಇಷ್ಟು ಒಳ್ಳೆಯ ಪ್ರತಿಕ್ರಿಯೆ ಇದೆ. ಸು ಫ್ರಮ್ ಸೋ ಹಾದಿಯಲ್ಲೇ ‘ರಕ್ಕಸಪುರದೋಳ್’ ಯಶಸ್ಸು ಕಾಣುವ ಎಲ್ಲಾ ಲಕ್ಷಣವಿದೆ. ಒಂದು ಕನ್ನಡದ ಸಿನಿ ಪ್ರಿಯರಿಗೆ ರಾಜ್ ಅವರ ಕಥೆ ಆಯ್ಕೆ ಮೇಲೆ ಬಹಳ ನಂಬಿಕೆ ಇದೆ.ಅವರ ಪ್ರತಿಯೊಂದು ಸಿನಿಮಾವು ವಿಭಿನ್ನವಾಗಿರುತ್ತದೆ ಪಾತ್ರಗಳಂತು ಊಹಿಸಲು ಸಾಧ್ಯವಾಗದಷ್ಟು ಡಿಫರೆಂಟ್ ಆಗಿ ಇರುತ್ತದೆ. ಹಾಗಾಗಿ ಸಿನಿ ಪ್ರಿಯರಿಗೆ ಕುತೂಹಲ ಹೆಚ್ಚಿದೆ.

Written By
Kannada Picchar

Leave a Reply

Your email address will not be published. Required fields are marked *