News

ಅಶ್ವಿನಿ ಪುನೀತ್ ರಾಜಕುಮಾರ್ ಗೆ ‘ರಾಜಮೌಳಿ’ ಸಾಂತ್ವನ!

ಅಶ್ವಿನಿ ಪುನೀತ್ ರಾಜಕುಮಾರ್ ಗೆ ‘ರಾಜಮೌಳಿ’ ಸಾಂತ್ವನ!
  • PublishedNovember 26, 2021

ಖ್ಯಾತ ನಿರ್ದೇಶಕ ಎಸ್​.ಎಸ್​. ರಾಜಮೌಳಿ ಇಂದು (ನವೆಂಬರ್ 26) ಬೆಂಗಳೂರಿಗೆ ಆಗಮಿಸಿದ್ದರು ಜನನಿ ಸಾಂಗ್ ರಿಲೀಸ್ ಮಾಡಿದ ನಂತರದಲ್ಲಿ ಪುನೀತ್​ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸ ಮಾಡಿದ್ದಾರೆ.

ಪುನೀತ್​ ರಾಜ್​ಕುಮಾರ್​ ನಿಧನ ಹೊಂದಿದ ನಂತರದಲ್ಲಿ ಸಾಕಷ್ಟು ಕಲಾವಿದರು, ನಿರ್ದೇಶಕರು, ನಿರ್ಮಾಪಕರು ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳುವ ಕೆಲಸ ಮಾಡಿದ್ದಾರೆ. ಕೇವಲ ಸ್ಯಾಂಡಲ್​​ವುಡ್​ ಮಾತ್ರವಲ್ಲದೆ, ನೆರೆಯ ರಾಜ್ಯದಿಂದಲೂ ಸ್ಟಾರ್​ಗಳು ಆಗಮಿಸಿದ್ದರು. ಖ್ಯಾತ ನಿರ್ದೇಶಕ ಎಸ್​.ಎಸ್​. ರಾಜಮೌಳಿ ಕೂಡ ಇಂದು (ನವೆಂಬರ್ 26) ಪುನೀತ್​ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸ ಮಾಡಿದ್ದಾರೆ.

‘ಆರ್​ಆರ್​ಆರ್​’ ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆ ಇದೆ. ಸ್ಟಾರ್​ ಕಲಾವಿದರ ಸಮಾಗಮ ಸಿನಿಮಾದಲ್ಲಿದೆ. ಈಗಾಗಲೇ ರಿಲೀಸ್​ ಆದ ಸಿನಿಮಾದ ಟೀಸರ್​ ಹಾಗೂ ಪೋಸ್ಟರ್​​ಗಳು ದೊಡ್ಡ ಮಟ್ಟದ ಹೈಪ್​ ಸೃಷ್ಟಿ ಮಾಡಿದೆ. ಈ ಸಿನಿಮಾದ ‘ಜನನಿ’ ಸಾಂಗ್​ ರಿಲೀಸ್​ ಮಾಡೋಕೆ ಚಿತ್ರದ ನಿರ್ದೇಶಕ ಎಸ್​.ಎಸ್​. ರಾಜಮೌಳಿ ಅವರು ಬೆಂಗಳೂರಿಗೆ ಆಗಮಿಸಿದ್ದರು. ಸಾಂಗ್​ ರಿಲೀಸ್ ಮಾಡಿದ ನಂತರದಲ್ಲಿ ಅವರು ನೇರವಾಗಿ ಪುನೀತ್​ ಮನೆಗೆ ತೆರಳಿದ್ದಾರೆ.

ನನ್ಗೆ ಏನ್ ಮಾತನಾಡ ಬೇಕು ತಿಳಿಯುತ್ತಿಲ್ಲ  ಈ ಆಘಾತ ನಮ್ಮೆಲ್ಲರನ್ನು ಕಾಡುತ್ತಿದೆ ಸ್ವಲ್ಪ ದಿನಗಳಿಂದ ನಾನು ಅವರಿಂದಿಗೆ ಮಾತನಾಡಿದ್ದಾಗ ಇದೇ ಜಾಗದಲ್ಲಿ ಅವರು ನನನ್ನು ಕುಟುಂಬದವರಂತೆ ಟ್ರೀಟ್ ಮಾಡಿದ್ರು  ಯಾವುದೇ ಸ್ಟಾರ್ ಜೊತೆ ಮಾತನಾಡುತ್ತಿದ್ದೇನೆ ಅನಿಸಲಿಲ್ಲ ನಮ್ಮ‌ ಕುಟುಂಬದವರ ಹತ್ರ ಮಾತನಾಡುತ್ತಿದ್ದೇನೆ ಅನ್ನುವ ಭಾವನೆ ಬರುವಂತೆ ನಡೆದುಕೊಂಡಿದ್ರು. ಯಾರೋ ಪಕ್ಕದ ಮನೆಯವರ ಹತ್ರ ಮಾತನಾಡುತ್ತಿದ್ದೇನೆ ಅನಿಸ್ತು ಇದು ಬಹಳ ನೋವಿನ ವಿಚಾರ ಅವರನ್ನು ಕಳೆದುಕೊಂಡಿರುವುದು,

ಬಹಳಷ್ಟು ಕಲಿಯುವುದಿದೆ ಪುನೀತ್ ಅವರಿಂದ, ಅವರು ಎಷ್ಟೋ ಜನರಿಗೆ ಸಹಾಯ ಮಾಡಿದ್ರು ಒಬ್ಬರಿಗೆ ಹೆಲ್ಪ್ ಮಾಡಿದ್ರೆ ಊರಿಗೆಲ್ಲ ತಿಳಿಯುವಂತೆ ಮಾಡುವ ಜನರಿದ್ದಾರೆ ಆದರೆ ಯಾರುಗೂ ತಿಳಿಯದಂತೆ  ಇಷ್ಟೆಲ್ಲ ಜನರಿಗೆ ಸಹಾಯ ಮಾಡಿದ್ದ ಅವರ ವ್ಯಕ್ತಿತ್ವ ದೊಡ್ಡದ್ದು ಅವರ ಸಾಮಾಜಿಕ ಕಳಕಳಿ, ಯಾರಿಗೂ ತಿಳಿಯದಂತೆ ಅವರು ಮಾಡುತ್ತಿದ್ದ ಸೇವೆ ನಿಜಕ್ಕು ಶ್ಲಾಘನೀಯ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಪುನೀತ್ ಅವರ ಸಾಮಾಜಸೇವೆಯನ್ನು ಕುಟುಂಬ ಮುಂದುವರಿಸಿಕೊಂಡು ಹೋಗುತ್ತೆ ಅನ್ನುವ ಭರವಸೆ ಇದೆ ಎಂದಿದ್ದಾರೆ.

****

Written By
Kannadapichhar

Leave a Reply

Your email address will not be published. Required fields are marked *