ಪಿಚ್ಚರ್ UPDATE

ಇಂಡಿಯನ್‌ ಸಿನಿಮಾದ ಮಾಸ್ಟರ್‌ ಪೀಸ್‌ ಕಾಂತಾರ ಎಂದ ರಜಿನಿಕಾಂತ್‌

ಇಂಡಿಯನ್‌ ಸಿನಿಮಾದ ಮಾಸ್ಟರ್‌ ಪೀಸ್‌ ಕಾಂತಾರ ಎಂದ ರಜಿನಿಕಾಂತ್‌
  • PublishedOctober 26, 2022

ಕಾಂತಾರ ನೋಡಿ ಮೆಚ್ಚಿದ ಸೂಪರ್‌ ಸ್ಟಾರ್‌ ರಜಿನಿಕಾಂತ್‌

ಕನ್ನಡದ ಕಾಂತಾರ ಸಿನಿಮಾವನ್ನ ಇಂಡಿಯನ್‌ ಸಿನಿಮಾದ ಸೂಪರ್‌ ಸ್ಟಾರ್‌ ರಜಿನಿಕಾಂತ್‌ ನೋಡಿದ್ದಾರೆ…ಸಿನಿಮಾ ನೋಡಿದ ತಲೈವಾ ಸೋಷಿಯಲ್‌ ಮಿಡಿಯಾದಲ್ಲಿ ತಮ್ಮ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ…ಇತ್ತೀಚಿನ ದಿನಗಳಲ್ಲಿ ಕನ್ನಡದ ಸಿನಿಮಾಗಳ ಲೆವೆಲ್‌ ಬದಲಾಗಿದೆ.. ಎಲ್ಲಾ ಸ್ಟಾರ್‌ ಗಳು ಕನ್ನಡ ಸಿನಿಮಾ ಹಾಗೂ ಇಂಡಸ್ಟ್ರಿಯ ಬಗ್ಗೆ ಮಾತನಾಡಲು ಶುರು ಮಾಡಿದ್ದಾರೆ…ಆದ್ರೆ ಹಿಂದಿನಿಂದಲೂ ನಟ ರಜಿನಿಕಾಂತ್‌ ಒಳ್ಳೆಯ ಚಿತ್ರಗಳು ಬಂದಾಗ ನೋಡಿ ಮೆಚ್ಚಿ ಆಯಾ ಚಿತ್ರದ ಕಲಾವಿದರಿಗೆ ಕಾಲ್‌ ಮಾಡಿ ವಿಷ್‌ ಮಾಡ್ತಿದ್ದಾರೆ…

ಕಾಂತಾರ ಬಗ್ಗೆ ರಜಿನಿಕಾಂತ್‌ ಟ್ವೀಟ್‌

ಈಗ ಕಾಂತಾರ ಚಿತ್ರವನ್ನ ನೋಡಿ ರಜಿನಿಕಾಂತ್‌ ಮೆಚ್ಚಿಕೊಂಡಿದ್ದಾರೆ…ಕಾಂತಾರ ಸಿನಿಮಾ ಇಂಡಿಯನ್‌ ಸಿನಿಮಾರಂಗದ ಮಾಸ್ಟರ್‌ ಪೀಸ್‌ ಚಿತ್ರ ಎಂದಿದ್ದಾರೆ.. ʼʼತಿಳಿದಿರುವುದಕ್ಕಿಂತ ತಿಳಿಯದೇ ಇರುವುದು ಸಾಕಷ್ಟಿದೆʼʼ ಎಂದಿದ್ದಾರೆ…ಇನ್ನು ಹೊಂಬಾಳೆ ಸಂಸ್ಥೆ ಹಾಗೂ ರಿಷಬ್‌ ಶೆಟ್ಟಿ ಬಗ್ಗೆ ಮೆಚ್ಚುಗೆ ಮಾತನಾಡಿದ್ದಾರೆ…

ರಿಷಬ್‌ ಅಭಿನಯ , ನಿರ್ದೇಶನ ಹಾಗೂ ಸ್ಕ್ರೀನ್‌ ಪ್ಲೇ ಎಲ್ಲವನ್ನೂ ರಜಿನಿಕಾಂತ್‌ ಮೆಚ್ಚಿಕೊಂಡಿದ್ದಾರೆ..ಇಡೀ ತಂಡಕ್ಕೆ ಶುಭಾಷಯ ಕೋರುವ ಮೂಲಕ ತಮ್ಮ ಸಂತಸವನ್ನ ವ್ಯಕ್ತಪಡಿಸಿದ್ದಾರೆ…

Written By
Kannadapichhar