25 ದಿನ ಪೂರೈಸಿ 50ನೇ ದಿನದತ್ತ ಮುನ್ನುಗುತ್ತಿರುವ ರಕ್ಕಸಪುರದೋಳ್
ಜೋಗಿ ಪ್ರೇಮ್ ಗರಡಿಯಲ್ಲಿ ಪಳಗಿದ ರವಿ ಸಾರಂಗ ನಿರ್ದೇಶನದ, ಪ್ಯಾನ್ ಇಂಡಿಯಾ ಸಾಹಸ ನಿರ್ದೇಶಕ ರವಿವರ್ಮಾ ಚೊಚ್ಚಲ ನಿರ್ಮಾಣದ ರಾಜ್ ಬಿ ಶೆಟ್ಟಿ ನಟನೆಯ ಕ್ರೈಮ್ ಹಾರರ್ ಥ್ರೀಲ್ಲರ್ ರಕ್ಕಸಪುರದೊಳ್ ಚಿತ್ರವನ್ನ ಕನ್ನಡ ಪ್ರೇಕ್ಷಕರು ಮನಸಾರೆ ಮೆಚ್ಚಿ ಹಾರೈಸಿದ್ದಾರೆ..
ಹೌದು.. ಸಾಲು ಸಾಲು ಸಿನಿಮಾಗಳು ಬಿಡುಗಡೆಯಾದ್ರೂ, ರಕ್ಕಸಪುರದೋಳ್ ಚಿತ್ರದ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ. ವಿಶೇಷವಾಗಿ ರಾಜ್ಯದಾದ್ಯಂತ ಮಲ್ಟಿಪ್ಲೆಕ್ಸ್ ಗಳಲ್ಲಿ ವಾರಾಂತ್ಯದಲ್ಲಿ ಹೌಸ್ ಫುಲ್ ಪ್ರದರ್ಶನಗಳು ಕಾಣ್ತಿದ್ದಾವೆ.
ರಾಜ್ ಬಿ ಶೆಟ್ಟಿ, ಅನಿರುದ್ಧ್ ಭಟ್, ಅರ್ಚನಾ ಕೊಟ್ಟಿಗೆ ಸ್ವಾತಿಷ್ಟ ಕೃಷ್ಣ ಮುಖ್ಯ ಭೂಮಿಕೆಯ ಈ ಸಿನಿಮಾದ ಕಥೆ ಪಾತ್ರಗಳು , ಸಂಗೀತ ,ಛಾಯಾಗ್ರಹಣ ಎಲ್ಲಾ ವಿಭಾಗದಲ್ಲೂ ಪ್ರೇಕ್ಷಕರ ಮನಸೆಳೆದಿದೆ… ಬಗೆಬಗೆಯ ಸಿನಿಮಾಗಳ ನಡುವೆ.. ಥ್ರಿಲ್ಲರ್ ಸಬ್ಜೆಕ್ಟ್ ರಕ್ಕಸಪುರದೋಳ್ ಚಿತ್ರ ಕನ್ನಡ ಪ್ರೇಕ್ಷಕರಿಗೆ ಥ್ರಿಲ್ ಕೊಡುವಲ್ಲಿ ಯಶಸ್ವಿಯಾಗಿದೆ.. ಎರಡ್ಮೂರು ವಾರ ಒಂದು ಸಿನಿಮಾ ಥಿಯೇಟರಿನಲ್ಲಿ ನಿಲ್ಲೋದೇ ಕಷ್ಟ ಅಂತಹ ದಿನಗಳಲ್ಲಿ ರಕ್ಕಸಪುರದೋಳ್ ಯಶಸ್ವಿ 50ನೇ ದಿನದತ್ತ ಸುಮಾರು 50 ತೆರೆಗಳಲ್ಲಿ ಪ್ರದರ್ಶನ ಕಾಣ್ತಿರೋದು , ಉದ್ಯಮಕ್ಕೆ ಹೊಸ ಚೈನತ್ಯ ತುಂಬಿದೆ. ಅಂದ್ಹಾಗೆ ಈ ಚಿತ್ರಕ್ಕೆ ಹಾಕುದ ಬಂಡವಾಳದ ಎರಡು ಪಟ್ಟು ಬರೀ ಥಿಯೇಟರಿನಿಂದಲೇ ಬಂದಿದೆಯಂತೆ.. ಸದ್ಯದಲ್ಲೇ ಚಿತ್ರತಂಡ ಗೆಲುವಿನ ಸಂಭ್ರಮಾಚರಣೆಯನ್ನ ಹಮ್ಮಿಕೊಳ್ಳೋ ಯೋಜನೆಯಲ್ಲಿದ್ದು, ಅಂದು ರಕ್ಕಸಪುರದೋಳ್ ಚಿತ್ರದ ಅಸಲಿ ಬಾಕ್ಸ್ ಆಫೀಸ್ ಗಳಿಕೆಯನ್ನ ಹೇಳಲಿದೆಯಂತೆ.
ಒಟ್ನಲ್ಲಿ ಒಳ್ಳೆ ಸಿನಿಮಾ ಬರ್ಬೇಕು ಗೆಲ್ಬೇಕು ಇನ್ನು ಈ ಸಿನಿಮಾ ಶತ ದಿನ ಪೂರೈಸಲಿ ಎಂಬುದೆ ಸಿನಿಮಾ ಪ್ರೇಕ್ಷಕರ ಹಾರೈಕೆಯಾಗಿದೆ..