News

ಬರುವಾಗ ಅಪ್ಪುವಾಗಿ ಬಂದ, ಹೋಗುವಾಗ ಅಪ್ಪನಾಗಿ ಹೋದ

ಬರುವಾಗ ಅಪ್ಪುವಾಗಿ ಬಂದ, ಹೋಗುವಾಗ ಅಪ್ಪನಾಗಿ ಹೋದ
  • PublishedFebruary 1, 2022

ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ಗೆ ಮ್ಯಾಜಿಕಲ್‌ ಮ್ಯೂಸಿಕಲ್‌ ಕಂಪೋಸರ್‌ ಅರ್ಜುನ್‌ ಜನ್ಯಾ ಸಂಗೀತ ನಮನ ಆಯೋಜಿಸಿದ್ರು, ಈ ಕಾರ್ಯಕ್ರಮದಲ್ಲಿ ಅಪ್ಪುಗಾಗಿ ವಿಶೇಷ ಹಾಡನ್ನ ಪ್ರಸ್ತುತ ಪಡಿಸಿದ್ರು. ಅದುವೆ ʻಲಾಲಿ ಲಾಲಿ ರಾಜಕುಮಾರ….ʼ ಈ ಸಾಂಗ್ ಕೇಳಿ ರಾಘವೇಂದ್ರ ರಾಜ್ ಕುಮಾರ್ ಭಾವುಕರಾದ್ರು.

ನಂತ್ರ ಭಾವುಕರಾಗೇ ಮಾತನಾಡಿದ್ದ ರಾಘಣ್ಣ, ಅಪ್ಪು ಯಾಕಿಷ್ಟು ಬೇಗ ಹೋದ ಅನ್ನಿಸ್ತಿದೆ, ಮೂರು ವರ್ಷ ಇದ್ದಾಗ ಅಪ್ಪು ಮೊದಲ ಬಾರಿಗೆ ಹಾಡಿದ್ರು, ತೆರೆಮೇಲೆ ಬಂದ್ರೂ.. ಎದೆ ಬಡಿತ ಕೇಳುವಷ್ಟು ಪಕ್ಕದಲ್ಲಿದ್ದ ಅಪ್ಪು ಜೊತೆಗೆ 15 ವರ್ಷ ತುಂಬಾ ಚೆನ್ನಾಗಿ ಅವನ ಜೊತೆ ಕಳೆದಿದ್ದೆ ಅಂದ್ರು. ಬರ್ತಾ ನನ್ನ ತಮ್ಮನಾಗಿ ಬಂದ ಹೋಗುವಾಗ ಅಪ್ಪನಾಗಿ ಹೋದ, ಅವನ ಸೇವೆ ಮಾಡಲು ನಂಗೂ ಆಗಲಿಲ್ಲ, ನನ್ನಣ್ಣನಿಗೂ ಆಗ್ಲಿಲ್ಲ ಅಂದ್ರು.

ದೇವ್ರು ಅಪ್ಪುಗೆ ಸೇವೆ ಮಾಡೋ ಬುದ್ದಿ ಕೊಟ್ಡಿದ್ದು ಯಾವ ಕಾರಣಕ್ಕೆ ಕೊಟ್ಟ ಅಂತ ಈಗ ಗೊತ್ತಾಗ್ತಿದೆ, ಅಪ್ಪು ಅಭಿಮಾನಿಗಳು ಈಗ ಅವರ ಭಕ್ತರಾಗ್ತಿದ್ದಾರೆ.ಅಪ್ಪುನಿಂದ ನಾ ಕಲಿತದ್ದು ಅಂದ್ರೆ ಇರೋವರೆಗೂ ಏನು ಇಸ್ಕೋ ಬಾರ್ದು…ಕೊಡ್ತಾ ಹೋಗಬೇಕು..ನಮ್ಮ ಪಕ್ಕದಲ್ಲಿ ಅವರ ಹೆಂಡತಿ ಮಕ್ಕಳು ಇದ್ದಾರೆ.. ಆದ್ರೆ ನಮ್ ಹೆಂಡತಿ ಮಕ್ಕಳೇ ಕಳೆದು ಹೋಗಿದ್ದಾರೆ.. ಇನ್ನು ಮುಂದೆ‌ ಹೀಗೆ ಬದುಕಬೇಕು ಅಂತ ಕಲಿಸಿ ಕೊಟ್ಟು ಹೋಗಿದ್ದಾನೆ ಅಪ್ಪು ಅಂದ್ರು ರಾಘಣ್ಣ.

ಗಂಧದ ಗುಡಿ ಟೀಸರ್ ತೋರ್ಸಿದ್ದ.. ಅವಾಗ ಏನ್ ಮೆಸೇಜ್ ಕೊಡಬಹದು ರಾಘಣ್ಣ ಅಂತ ಕೇಳಿದ್ದ, ಅಪ್ಪು ಚಿಕ್ಕವನಿದ್ದಾಗ ನಾನು ಶೂಟಿಂಗ್‌ಗೆ ಕರ್ಕೊಂಡು ಹೋಗ್ತಿದ್ದೆ, ಯಾವುದೇ ಹೊಸ ಸಿನಿಮಾ ಬಂದ್ರು, ಅದ್ರ ಬಗ್ಗೆ ಬಂದು ನನ್‌ ಹತ್ರಾ ಮಾತಾಡ್ತಿದ್ದ, ಕೊನೆಯ ಸಿನಿಮಾ ಜೇಮ್ಸ್ ಕಥೆಯನ್ನೂ ಕೂಡ ನಂಗೆ ಕೇಳಿಸಿ ಹೋದ. ಆದ್ರೆ ಇನ್ಮುಂದೆ ಅದ್ಯಾವುದು ಇಲ್ಲ. ಯಾರೋ ಹೇಳಿದ್ರು ಅಪ್ಪು ಅವರನ್ನ ಹೂತಿಲ್ಲ ಬಿತ್ತಿದಿವಿ ಅಂತ ಅದು ಸತ್ಯ ಅನ್ನಿಸ್ತಾ ಇದೆ ಅಂತ ಭಾವುಕರಾಗಿ ಮಾತನಾಡಿದ್ರು ರಾಘವೇಂದ್ರ ರಾಜ್‌ಕುಮಾರ್‌

Written By
Kannadapichhar

Leave a Reply

Your email address will not be published. Required fields are marked *