ಪ್ರೇಮಿಗಳ ದಿನದಂದು ವಿಶೇಷವಾಗಿ ವಿಶ್ ಮಾಡಿದ ರಾಧಿಕಾ ಪಂಡಿತ್!
ರಾಧಿಕಾ ಪಂಡಿತ್ ಅವರು ಪ್ರೇಮಿಗಳ ದಿನದಂದು ಪ್ರತಿ ಭಾರಿ ಯಶ್ ಅವರಿಗೆ ವಿಶೇಷ ರೀತಿಯಲ್ಲಿ ವಿಶ್ ಮಾಡುತ್ತಾರೆ. ಈ ಬಾರಿಯು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ “ನಾನು ಜಗತ್ತನ್ನೇ ಮರೆತು ಕುಣಿಯುವಂತೆ ಮಾಡಿದ ನಿನಗೆ… ನಿನ್ನ ಕಣ್ಣಲ್ಲಿರೋ ಆ ದಣಿವು, ನೀನು ಯಾರಿಗೂ ಹೇಳಿಕೊಳ್ಳದೆ ಮಾಡಿರೋ ತ್ಯಾಗ, ನಮಗೋಸ್ಕರ ನೀನು ಪಡೋ ಕಷ್ಟ… ಇದೆಲ್ಲಾ ನನಗೋಸ್ಕರ ಅಂತ ನನಗೆ ಗೊತ್ತು. ಪ್ರತಿದಿನ ನನ್ನನ್ನೇ ಆಯ್ಕೆ ಮಾಡಿಕೊಳ್ಳೋದಕ್ಕೆ, ನನ್ನ ಜೊತೆ ಇರೋದಕ್ಕೆ ಥ್ಯಾಂಕ್ಸ್ “ಎಂದು ಹಾಕಿಕೊಂಡಿದ್ದಾರೆ.