ದಶಕದ ನಂತರ ಮತ್ತೆ ಜೀ ಕನ್ನಡದತ್ತ ಮುಖ ಮಾಡಿ ರಚಿತಾ ರಾಮ್ !
ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ಸದ್ಯ ಸುಮಾರು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ…ಇತ್ತೀಚಿನ ದಿನಗಳಲ್ಲಿ ನಾಯಕಿಪ್ರಧಾನ ಸಿನಿಮಾಗಳನ್ನೂ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ..ಸಿನಿಮಾದಲ್ಲಿ ಅಭಿನಯ ಮಾಡುವ ಮೊದಲು ಕಿರುತೆರೆಯಲ್ಲಿ ಧಾರಾವಾಹಿಯಲ್ಲಿಯೂ ಕೂಡ ರಚಿತಾ ಅಭಿನಯ ಮಾಡಿದ್ದರು …ಕಿರುತೆರೆಯಲ್ಲಿ ಬಣ್ಣ ಹಚ್ಚಿ ಸುಮಾರು ಹತ್ತು ವರ್ಷ ಕಳೆದ ನಂತರ ಮತ್ತೆ ಅದೇ ವಾಹಿನಿಗೆ ನಟಿ ರಚಿತಾ ರಾಮ್ ಕಾಲಿಟ್ಟಿದ್ದಾರೆ …

ಹೌದು ನಟಿ ರಚಿತಾ ರಾಮ್ ರಿಯಾಲಿಟಿ ಶೋವೊಂದರಲ್ಲಿ ಜಡ್ಜ್ ಆಗಿ ಜೀ ಕನ್ನಡ ವಾಹಿನಿಯಲ್ಲಿ ಮೂಲಕ ಪ್ರೇಕ್ಷಕರ ಮನೆಗೆ ಎಂಟ್ರಿ ಕೊಡಲಿದ್ದಾರೆ…ಇದೇ ವಿಚಾರವಾಗಿ ರಚಿತ ಇತ್ತೀಚಿಗಷ್ಟೇ ಚಿತ್ರೀಕರಣ ನಡೆಯುತ್ತಿರುವ ಫೋಟೋವೊಂದನ್ನ ಶೇರ್ ಮಾಡಿ ಶೀಘ್ರದಲ್ಲಿ ಖುಷಿಯ ವಿಚಾರವನ್ನ ಹಂಚಿಕೊಳ್ಳುತ್ತೇನೆ ಎಂದು ಸೋಷಿಯಲ್ ಮೀಡಿಯಾದ ಮೂಲಕ ತಿಳಿಸಿದ್ದರು …

ಸದ್ಯ ಈಗಿರುವ ಮಾಹಿತಿ ಪ್ರಕಾರ ನಟಿ ರಚಿತಾ ರಾಮ್ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಡ್ರಾಮಾ ಜ್ಯೂನಿಯರ್ ರಿಯಾಲಿಟಿ ಶೋ ಜಡ್ಜ್ ಆಗಿ ಭಾಗಿಯಾಗಲಿದ್ದಾರಂತೆ …ಈಗಾಗಲೇ ಅದೇ ಕಾರ್ಯಕ್ರಮದಲ್ಲಿ ನಟ ರವಿಚಂದ್ರನ್ ಕೂಡ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ಅವರ ಜೊತೆಯಲ್ಲಿ ರಚಿತಾ ಕೂಡ ತೀರ್ಪುಗಾರರಾಗಿ ಭಾಗಿಯಾಗಲಿದ್ದಾರೆ …ರಚಿತ ಮೊಟ್ಟ ಮೊದಲ ಬಾರಿಗೆ ಬಣ್ಣ ಹಚ್ಚಿದ ಅರಸಿ ಧಾರಾವಾಹಿ ಕೂಡ ಜೀ ಕನ್ನಡದಲ್ಲಿಯೇ ಪ್ರಸಾರವಾಗುತ್ತಿತ್ತು ಈಗ ದಶಕಗಳ ನಂತರ ಮತ್ತೆ ಜೀ ವಾಹಿನಿಗೆ ರಚಿತಾ ಕಾಲಿಟ್ಟಿದ್ದಾರೆ….