ಬ್ಯಾಡ್ ಮ್ಯಾನರ್ಸ್ ಅಭಿಗೆ ಇಬ್ಬರು ಗುಡ್ ಹೀರೋಯಿನ್ಸ್
ಇತ್ತೀಚೆಗಷ್ಟೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ, ಸರಳವಾಗಿ ಮೂಹೂರ್ತ ಮಾಡಿಕೊಂಡು ಶೂಟಿಂಗ್ ಆರಂಭಿಸಿದ,
ಅಭಿಷೇಕ್ ಅಂಬರೀಶ್ ಅಭಿನಯದ ಬ್ಯಾಡ್ ಮ್ಯಾನರ್ಸ್ ಸಿನಿಮಾಕ್ಕೆ ಇಬ್ಬರು ನಾಯಕಿಯರನ್ನ ಆಯ್ಕೆ ಮಾಡಲಾಗಿದೆ. ಅವರಲ್ಲಿ ಮೊದಲನೆಯವರು ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತೊಬ್ರು ಪ್ರಿಯಾಂಕಾ.
ಪ್ರಿಯಾಂಕಾ ಮೂಲತಃ ಮೈಸೂರಿನವರು ಸದ್ಯ ತಮಿಳಿನ ಸೀರಿಯಲ್ ಒಂದರಲ್ಲಿ ಲೀಡ್ ಪಾತ್ರದಲ್ಲಿ ನಟಿಸ್ತಾ ಇದ್ದಾರೆ. ಸುಕ್ಕಾ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಈ ಇಬ್ಬರು ನಾಯಕಿಯರ ಪಾತ್ರ ತುಂಬಾನೇ ವಿಭಿನ್ನವಾಗಿರುತ್ತೆ ಅಂತ ಹೇಳಲಾಗ್ತಿದೆ, ಆದ್ರೆ ಯಾವ ರೀತಿಯ ಪಾತ್ರ ಅನ್ನೋದು ಇನ್ನೂ ರಿವೀಲ್ ಆಗಿಲ್ಲ.
ಪಾಪ್ ಕಾರ್ನ್ ಮಂಕಿ ಟೈಗರ್ ನಿರ್ಮಾಪಕ ಕೆ.ಎಂ ಸುಧೀಂದ್ರ ನಿರ್ಮಾಣ ಮಾಡ್ತಿರೋ ಬ್ಯಾಡ್ ಮಾನರ್ಸ್ ಸಿನಿಮಾಕ್ಕೆ ಚರಣ್ ರಾಜ್ ಮ್ಯೂಸಿಕ್ ಕಂಪೋಸ್ ಮಾಡ್ತಿದ್ದು, ಶೇಖರ್ ಕ್ಯಾಮರಾ ವರ್ಕ್ ಮಾಡ್ತಿದ್ದಾರೆ.