ಅಮ್ಮನಿಗಾಗಿ ನಾನ್ ವೆಜ್ ಬಿಟ್ಟಿದ್ದರು ಪುನೀತ್ ರಾಜ್ ಕುಮಾರ್ !

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮೆಲ್ಲರನ್ನ ಅಗಲಿ ಒಂದು ವರ್ಷ ಕಳೆದಿದೆ… ಆದ್ರೆ ಅಪ್ಪು ಎಲ್ಲರ ಮನಸ್ಸಿನಲ್ಲಿ ಅಮರವಾಗಿ ಉಳಿದುಕೊಂಡಿದ್ದಾರೆ……ಅವ್ರ ನೆನಪಿನಲ್ಲೇ ಇಂದಿಗೂ ಅಭಿಮಾನಿಗಳು, ಜನ ಸಾಮಾನ್ಯರು ಜೀವನ ಸಾಗಿಸುತ್ತಿದ್ದಾರೆ…ಇನ್ನು ಅಪ್ಪು ಇಷ್ಟದ ಬಗ್ಗೆ ಹೇಳಬೇಕಿಲ್ಲ…ಇಲ್ಲರಿಗೂ ತಿಳಿದಿರುವಂತೆ ಪುನೀತ್ ಆಹಾರ ಪ್ರಿಯರು…
ಯಾವುದೇ ಊರಿಗೆ ಹೋದರೂ ಅಲ್ಲಿಯ ವಿಶೇಷವಾದ ಊಟ , ತಿಂಡಿಯನ್ನ ಸವಿಯದೇ ಬರುತ್ತಿರಲಿಲ್ಲ…ಅಷ್ಟರ ಮಟ್ಟಿಗೆ ಅಪ್ಪು ಊಟವನ್ನ ಪ್ರೀತಿಸುತ್ತಿದ್ದರು.,..ಇನ್ನು ಪುನೀತ್ ನಾನ್ ವೆಜ್ ಪ್ರಿಯಾ ಅನ್ನೋದು ಕೂಡ ಗೊತ್ತಿರೋ ವಿಚಾರ…ಬೆಂಗಳೂರಿನಲ್ಲಿ ಯಾವೆಲ್ಲಾ ಹೋಟೆಲ್ ನಲ್ಲಿ ಒಳ್ಳೇ ಟೇಸ್ಟ್ ಇರೋ ನಾನ್ ವೆಜ್ ಊಟ ಸಿಗುತ್ತೋ ಅಲ್ಲಿಯ ಊಟವನ್ನ ಅಪ್ಪು ಸವಿಯುತ್ತಿದ್ದರು…ಆದ್ರೆ ಅಪ್ಪು ತಮ್ಮ ತಾಯಿ ತೀರಿಕೊಂಡ ನಂತ್ರ ನಾನ್ ವೆಜ್ ಊಟವನ್ನ ಕಮ್ಮಿ ಮಾಡಿದ್ರು…
ಹೌದು ಅಪ್ಪು ಅವ್ರ ತಾಯಿ ಅಂದ್ರೆ ಪಾರ್ವತಮ್ಮ ರಾಜ್ ಕುಮಾರ್ ತೀರಿಕೊಂಡ ನಂತ್ರ ಬುಧವಾರ ನಾನ್ ವೆಜ್ ತಿನ್ನೋದನ್ನ ಪುನೀತ್ ನಿಲ್ಲಿಸಿದ್ರಂತೆ.. ಪಾರ್ವತಮ್ಮ ರಾಜ್ ಕುಮಾರ್ ಮೇ 31 ರಂದಿ ನಿಧನ ಹೊಂದಿದ್ರು….ಅಂದು ಬುಧವಾರವಾಗಿತ್ತು ಹಾಗಾಗಿ ಪುನೀತ್, ತಾಯಿ ತೀರಿಕೊಂಡ ದಿನ ತಮಗಿಷ್ಟವಾದ ನಾನ್ ವೆಜ್ ತಿನ್ನೋಲ್ಲ ಎಂದು ನಿರ್ಧಾರ ಮಾಡಿದ್ರು…ಈ ವಿಚಾರವನ್ನ ಚಂದ್ರು ಹೋಟಲ್ ಮಾಲೀಕರು ಹಾಗೂ ಪುನೀತ್ ರಾಜ್ ಕುಮಾರ್ ಸ್ನೇಹಿತರು ಕನ್ನಡ ಪಿಚ್ಚರ್ ಜೊತೆ ಹಂಚಿಕೊಂಡಿದ್ದಾರೆ…
ಪವಿತ್ರ, ಬಿ